More

    ಈ ಆರು ಲಕ್ಷಣಗಳು ಗೋಚರಿಸಿದ್ರೆ ಡಯಾಬಿಟಿಸ್ ಟೆಸ್ಟ್ ಮಾಡಿಸಿ..

    ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಡಯಾಬಿಟಿಸ್​ ಆ್ಯಂಡ್ ಡೈಜೆಸ್ಟಿವ್ ಆ್ಯಂಡ್ ಕಿಡ್ನಿ ಡಿಸೀಶ್​ ಪ್ರಕಾರ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ ಉಂಟಾಗುವ ಸಮಸ್ಯೆಯೇ ಮಧುಮೇಹ ಅಥವಾ ಡಯಾಬಿಟಿಸ್​. ರಕ್ತದಲ್ಲಿನ ಸಕ್ಕರೆ ಅಥವಾ ಗ್ಲುಕೋಸ್ ಅಂಶವೇ ನಮ್ಮ ಶರೀರಕ್ಕೆ ಶಕ್ತಿ ಒದಗಿಸುವ ಇಂಧನ. ಇದು ನಾವು ತಿನ್ನುವ ಆಹಾರದ ಮೂಲಕ ಲಭಿಸುತ್ತದೆ.

    ಶರೀರದೊಳಗೆ ಆಹಾರದಿಂದ ಗ್ಲುಕೋಸ್ ಉತ್ಪಾದಿಸಿ ಒದಗಿಸುವ ಕೆಲಸದಲ್ಲಿ ಇನ್​ಸುಲಿನ್ ಮಹತ್ವದ ಪಾತ್ರವಹಿಸುತ್ತದೆ. ಇನ್​ಸುಲಿನ್ ಎಂಬುದು ಪಾಂಕ್ರಿಯಾಸ್ ಗ್ರಂಥಿ ಉತ್ಪಾದಿಸುವ ಹಾರ್ಮೋನ್ ಆಗಿದೆ. ಯಾವಾಗ ಇನ್​ಸುಲಿನ್​ ಸರಿಯಾಗಿ ಉತ್ಪಾದನೆಯಾಗದೆ ಆಹಾರದಿಂದ ಗ್ಲುಕೋಸ್ ಬೇರ್ಪಟ್ಟು ಶರೀರಕ್ಕೆ ಸಿಗುವುದಿಲ್ಲವೋ ಆಗ ಡಯಾಬಿಟಿಸ್ ಸ್ಥಿತಿ ನಿರ್ಮಾಣವಾಗುತ್ತದೆ.

    ಮಧುಮೇಹದಲ್ಲಿ ಎರಡು ವಿಧ – ಟೈಪ್ 1 ಮತ್ತು ಟೈಪ್ 2. ಟೈಪ್ ಒಂದರಲ್ಲಿ ಇನ್​ಸುಲಿನ್​ ಉತ್ಪಾದನೆ ನಿಂತು ಹೋಗುತ್ತದೆ. ಟೈಪ್ 2ರಲ್ಲಿ ಇನ್​ಸುಲಿನ್ ಕೊರತೆ ಉಂಟಾಗುತ್ತದೆ. ಇಂತಹ ಮಧುಮೇಹದ ಪ್ರಮುಖ ಗುಣಲಕ್ಷಣಗಳಿವು.
    1. ಪದೇಪದೆ ಮೂತ್ರವಿಸರ್ಜಿಸಬೇಕೆಂಬ ಭಾವನೆ ಮತ್ತು ಬಾಯಾರುವುದು
    2. ತಡೆಯಾಗದ ಹಸಿವು ಮತ್ತು ಆಯಾಸ
    3. ದೃಷ್ಟಿ ಮಂಜಾಗುವುದು
    4. ಬಾಯಿ ಒಣಗುವುದು
    5. ಯೀಸ್ಟ್ ಸೋಂಕು ಮತ್ತು ಗಾಯಗಳು ತಡವಾಗಿ ಒಣಗುವುದು
    6. ಹಸಿವಿನ ಕೊರತೆ ಮತ್ತು ಏಕಾಕಿಯಾಗಿ ತೂಕ ಇಳಿಯುವುದು

    ಈ ಆರು ಗುಣಲಕ್ಷಣಗಳು ನಿಮ್ಮ ಅನುಭವಕ್ಕೆ ಬಂದರೆ ಕೂಡಲೇ ಪರಿಣತ ವೈದ್ಯರ ಬಳಿ ಹೋಗಿ ಅವರ ಸಲಹೆ ಪಡೆಯಬೇಕು. ನಂತರ ಮಧುಮೇಹ ಅಥವಾ ಡಯಾಬಿಟಿಸ್ ತಪಾಸಣೆ ಮಾಡಿಸುವುದು ಉತ್ತಮ. (ಏಜೆನ್ಸೀಸ್)

    ಬಿಹಾರದಲ್ಲಿ ಎನ್​ಡಿಎ ಬಿಕ್ಕಟ್ಟು- ಹಲವು ವಿಚಾರಗಳಲ್ಲಿ ಭಿನ್ನಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts