More

    ಆಂಧ್ರದಿಂದ ಗಾಂಜಾ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು; ಒಬ್ಬ ವಿದೇಶಿ ಪ್ರಜೆ ಸೇರಿ 6 ಜನರ ಬಂಧನ

    ಬೆಂಗಳೂರು : ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ 6 ದುಷ್ಕರ್ಮಿಗಳನ್ನು ಬೆಂಗಳೂರು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

    ಇನ್ಸ್​ಪೆಕ್ಟರ್​ ಜಿ.ಲಕ್ಷ್ಮೀಕಾಂತಯ್ಯ ನೇತೃತ್ವದ ತಂಡವು ಜುಲೈ 7 ರಂದು ಹೆಚ್.ಎ.ಎಲ್. ಮತ್ತು ಕೆ.ಆರ್.ಪುರಂ ಪೊಲೀಸ್​ ಠಾಣೆ ವ್ಯಾಪ್ತಿಗಳಲ್ಲಿ ಡ್ರಗ್​ಪೆಡ್ಲರ್​ಗಳ ಎರಡು ಜಾಲಗಳ ಮೇಲೆ ಪ್ರತ್ಯೇಕ ದಾಳಿ ಕಾರ್ಯಾಚರಣೆ ನಡೆಸಿದರು. ಈ ದಾಳಿಯಲ್ಲಿ ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ತಂದು, ಸರಬರಾಜು ಮತ್ತು ಮಾರಾಟದಲ್ಲಿ ತೊಡಗಿದ್ದ ಒಬ್ಬ ಘಾನಾ ದೇಶದ ಪ್ರಜೆ, ಇಬ್ಬರು ಆಂಧ್ರಪ್ರದೇಶದವರನ್ನು ಮತ್ತು 3 ಜನ ಬೆಂಗಳೂರಿನ ನಿವಾಸಿಗಳನ್ನು ಬಂಧಿಸಲಾಯಿತು.

    ಇದನ್ನೂ ಓದಿ: VIDEO: ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ ‘ಪಾನೀಪುರಿ ಮದುವೆ’- ಮದುಮಗಳಿಗೆ ವಿಶೇಷ ಅಲಂಕಾರ

    ಆರೋಪಿಗಳು ವಿಶಾಖಪಟ್ಟಣದ ಅರಕ್​ವೇಲಿ ಪ್ರದೇಶದಿಂದ ಮಾದಕ ವಸ್ತುವಾದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು, ಬೆಂಗಳೂರಿನ ಡ್ರಗ್​ ಪೆಡ್ಲರ್​ಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನೂ ಮೂವರು ಆಸಾಮಿಗಳು ಇವರೊಂದಿಗೆ ಕಾರ್ಯಪ್ರವೃತ್ತರಾಗಿರುವುದು ತಿಳಿದುಬಂದಿದ್ದು, ಅವರ ಶೋಧ ಕಾರ್ಯ ಆರಂಭವಾಗಿದೆ. ಆರೋಪಿಗಳಿಂದ 28 ಕೆಜಿ ಗಾಂಜಾದೊಂದಿಗೆ, 8 ಮೊಬೈಲ್ ಫೋನುಗಳು, ನಗದು ಹಣ ಮತ್ತಿತರ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ತಿಳಿಸಿದ್ದಾರೆ.

    VIDEO | ರಜನೀಕಾಂತ್​ ಅನುಕರಣೆಯ ಫ್ಲಾಪ್ ಶೋ!

    ಸೆಲ್ಫಿ ಕ್ಲಿಕ್ಕಿಸಿಕೊಂಡು ಭಾರತದ ಒಲಂಪಿಕ್​ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಸಚಿವ ನಾರಾಯಣಗೌಡ

    VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts