More

    6-0 ಅಂತರದಲ್ಲಿ ಪಾಲಚಂಡ ತಂಡಕ್ಕೆ ಜಯ

    ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಬುಧವಾರದ ಪಂದ್ಯಗಳಲ್ಲಿ ಪಾಲಚಂಡ ತಂಡವು ಭರ್ಜರಿ ಜಯಗಳಿಸಿತು. ಪಾಲಚಂಡ ತಂಡ ಬಿಜ್ಜಂಡ ತಂಡದ ವಿರುದ್ಧ 6-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

    ನಂಬುಬುಡಮಂಡ ಮತ್ತು ಪೊನ್ನಾಲತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡಮಂಡ ತಂಡ 3-1 ಅಂತರದಿಂದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ನಡಿಕೇರಿಯಂಡ ವಿರುದ್ಧ ವಾಟೇರಿರ 3-0 ಅಂತರದ ಗೆಲುವು ಸಾಧಿಸಿತು. ಕೇಕಡ ಮತ್ತು ಕೂಪದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಕೂಪದಿರ 3-1 ಅಂತರದ ಗೆಲುವು ಸಾಧಿಸಿತು. ಮೊಣ್ಣಂಡ ಆಪಟ್ಟಿರ ತಂಡದ ವಿರುದ್ಧ 3-0 ಜಯ ಸಾಧಿಸಿತು.

    ಅಮ್ಮನಕುಟ್ಟಂಡ ವಿರುದ್ಧ ಬೊಟ್ಟೋಳಂಡ ತಂಡ, ಕಿರಿಯಮಾಡ ತಂಡದ ವಿರುದ್ಧ ಬೈರಟಿರ ತಂಡ, ನೆಲ್ಲಿರ ವಿರುದ್ಧ ಕುಪ್ಪಣಮಾಡ, ಜಂಬಂಡ ವಿರುದ್ಧ ಚೊಟ್ಟೆಮಾಡ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.

    ಪಾಲೆಯಡ ತಂಡವು ತಂಬಂಡ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು. ಕಲ್ಲೆಂಗಡ ಪಳಂಗೇಟಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಲ್ಲೇಂಗ 3 ಗೋಲು ಗಳಿಸಿದರೆ ಪಳಂಗೇಟಿರ ಯಾವುದೇ ಗೋಲು ಗಳಿಸಲಿಲ್ಲ. ಚೊಟ್ಟೇರ ಕಾಯಪಂಡ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಕೊಕ್ಕಲ ಮಾಡ ತಂಡವು ಬಾಚಮಂಡ ವಿರುದ್ಧ ಸೋಲನ್ನು ಅನುಭವಿಸಿತು. ಬಾಚ ಮಂಡ ತಂಡ 3 ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಬೋಳ್ತಂಡ ತಂಡದ ವಿರುದ್ಧ ಅದೇಂಗಡ ಗೆಲುವು ಸಾಧಿಸಿದರೆ ಬಲ್ಲಿಯಂಡ ವಿರುದ್ಧ ಚೆರುವಾಳಂಡ 2-1 ಅಂತರದ ಗೆಲುವು ಸಾಧಿಸಿತು.

    ಬೊಜ್ಜಂಗಡ ತಂಡವು 5 ಗೋಲುಗಳಿಸಿ ಮುದ್ದಿಯಂಡ ವಿರುದ್ಧ ಗೆಲುವು ಸಾಧಿಸಿತು. ಆತಿಥೇಯ ಕುಂಡ್ಯೋಳಂಡ 3-2ರ ಮುನ್ನಡೆಯೊಂದಿಗೆ ಪುಚ್ಚಿಮಾಡ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts