More

    ಗೂಗಲ್ ಪ್ಲೇ ಸ್ಟೋರ್​​ ನಿಂದ 59 ಚೀನಿ ಆ್ಯಪ್ ಗಳು ಔಟ್

    ನವದೆಹಲಿ: ಕೇಂದ್ರ ಸರ್ಕಾರದ ಆದೇಶದಿಂದಾಗಿ, ಟೆಕ್ ದೈತ್ಯ ಗೂಗಲ್ 59 ಚೀನೀ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.
    ಇನ್ನು ಮುಂದೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಅಪ್ಲಿಕೇಶನ್‌ಗಳನ್ನು ಇನ್​​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿಲ್ಲ.
    ಭಾರತೀಯ ಬಳಕೆದಾರರಿಗೆ ಈ ಅಪ್ಲಿಕೇಶನ್​ಗಳ ನಿರ್ಬಂಧದ ಕುರಿತು ಗೂಗಲ್ ವಕ್ತಾರರು ದೃಢಪಡಿಸಿದ್ದಾರೆ.
    59 ಚೀನಿ ಆ್ಯಪ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮಧ್ಯಂತರ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಈ ನಡೆ ಅನುಸರಿಸಲಾಗಿದೆ. ”ಅವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ, ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾಗಿವೆ” ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: ಕೋವಿಡ್ ಚಿಕಿತ್ಸೆಗೆ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ : ಸಾಧನೆಯತ್ತ ಕೇಜ್ರಿವಾಲ್ ಹೆಜ್ಜೆ


    ಈ ಸೇವೆಗಳ ನಿಷೇಧವನ್ನು ಜಾರಿಗೆ ತರಲು ಸರ್ಕಾರ ಹೇಗೆ ಯೋಜಿಸುತ್ತಿದೆ ಎಂದು ತಿಳಿದಿಲ್ಲವಾದ್ದರಿಂದ ಈ ಘೋಷಣೆಯು ಆಶ್ಚರ್ಯಕರವಾಗಿತ್ತು ಮತ್ತು ಭಾರತದಲ್ಲಿ ಬಳಕೆದಾರರಲ್ಲಿ ಗೊಂದಲವನ್ನು ಸೃಷ್ಟಿಸಿತ್ತು, ಆದರೆ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಅಪ್ಲಿಕೇಶನ್‌ಗಳು ಲಭ್ಯವಿಲ್ಲದ ಕಾರಣ, ವಿಷಯ ಹೆಚ್ಚು ಸ್ಪಷ್ಟವಾಗುತ್ತಿದೆ.
    ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಕ್ಲಾಷ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೋ, ಲೈಕೀ, ಯೂಕ್ಯಾಮ್ ಮೇಕಪ್, ಮಿ ಕಮ್ಯುನಿಟಿ, ಸಿಎಮ್ ಬ್ರೋವರ್ಸ್, ವೈರಸ್ ಕ್ಲೀನರ್, ಎಪಿಯುಸ್ ಬ್ರೌಸರ್, ರಾಮ್‌ವಿ, ಕ್ಲಬ್ ಫ್ಯಾಕ್ಟರಿ, ನ್ಯೂಸ್ ಡಾಗ್, ಬ್ಯೂಟಿ ಪ್ಲಸ್, ವೀಚಾಟ್, ಯುಸಿ ನ್ಯೂಸ್, ಕ್ಯೂಕ್ಯೂ ಮೇಲ್, ವೀಬೊ, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್‌ಫೀಡ್, ಬಿಗೊ ಲೈವ್, ಸೆಲ್ಫಿಸಿಟಿ, ಮೇಲ್ ಮಾಸ್ಟರ್, ಪ್ಯಾರಲಲ್ ಸ್ಪೇಸ್, ಶಿಯೋಮಿ ಎಂಐ ವಿಡಿಯೋ ಕಾಲ್, ವೀಸಿಂಕ್, ಇಎಸ್ ಫೈಲ್ ಎಕ್ಸ್‌ಪ್ಲೋರರ್, ವಿವಾ ವಿಡಿಯೋ, ಮೀಟು, ವಿಗೊ ವಿಡಿಯೋ, ಟಿಕ್‌ಟಾಕ್, ಶೀಇನ್, ಶೇರಿಟ್, ಕ್ವಾಯ್ ಮತ್ತು ಯುಸಿ ಬ್ರೌಸರ್. 

    ಇದನ್ನೂ ಓದಿ: ದೇವರನ್ನೇ ಪರೀಕ್ಷಿಸಿ ಔಷಧ ಕೊಡ್ತಾರೆ ವೈದ್ಯರು…! ಜಗನ್ನಾಥ ಮಂದಿರದಲ್ಲಿದೆ ಇಂಥದ್ದೊಂದು ಪದ್ಧತಿ


    ಈ ಚೀನೀ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಭಾರತದಲ್ಲಿ ಮನೆಮಾತಾಗಿವೆ, ವಿಶೇಷವಾಗಿ ಟಿಕ್‌ಟಾಕ್, ಇದು ದೇಶದಲ್ಲಿ ಹೆಚ್ಚು ಡೌನ್‌ಲೋಡ್ ಆದ, ನಾನ್ ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಶೀಯಿನ್, ಯುಸಿ ಬ್ರೌಸರ್, ಶೇರಿಟ್ ಮತ್ತು ಕ್ಯಾಮ್ ಸ್ಕ್ಯಾನರ್ ಸಹ ಲಕ್ಷಾಂತರ ಬಳಕೆದಾರರನ್ನು ಗಳಿಸಿ ಭಾರಿ ಯಶಸ್ಸನ್ನು ಕಂಡಿದ್ದವು.

    ಆಫ್ರಿಕಾದ ಕಾಡಿನಲ್ಲಿ 2 ತಿಂಗಳಲ್ಲಿ 350 ಆನೆಗಳ ನಿಗೂಢ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts