More

    ಹೊಸ ವೈದ್ಯಕೀಯ ಕಾಯ್ದೆ ವಿರೋಧಿಸಿ 56 ಹಿರಿಯ ವೈದ್ಯರ ರಾಜೀನಾಮೆ!; ಪ್ರತಿಷ್ಠಿತ ಆಸ್ಪತ್ರೆಗಳ ಉನ್ನತ ಸ್ಥಾನಕ್ಕೆ ವಿದಾಯ..

    ಇಸ್ಲಾಮಾಬಾದ್​: ಹೊಸ ವೈದ್ಯಕೀಯ ಕಾಯ್ದೆಯೊಂದನ್ನು ಜಾರಿಗೆ ತಂದಿದ್ದನ್ನು ವಿರೋಧಿಸಿ 56 ಹಿರಿಯ ವೈದ್ಯರೇ ರಾಜೀನಾಮೆ ನೀಡಿರುವ ಪ್ರಕರಣವೊಂದು ನಡೆದಿದೆ. ಇವರೆಲ್ಲ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉನ್ನತ ಸ್ಥಾನದಲ್ಲಿ ಅಧಿಕಾರ ಹೊಂದಿದ್ದು, ಇದೀಗ ಆ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜಾರಿಗೊಳಿಸಿರುವ ಮೆಡಿಕಲ್​ ಆ್ಯಂಡ್​ ಟೀಚಿಂಗ್ ಇನ್​ಸ್ಟಿಟ್ಯೂಷನ್ಸ್​ ಆ್ಯಕ್ಟ್​-2015 ವಿರುದ್ಧವಾಗಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ. ತಮ್ಮ ಪಾತ್ರ ಪ್ರಮುಖವಾಗಿರುವಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಕಾರಣ ನೀಡಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ.

    ಇದನ್ನೂ ಓದಿ: ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ ಸೆಳೆದ ಚಂದ್ರಶೇಖರ್​

    ಹೊಸ ನೇಮಕಾತಿ ಮಾಡಿಕೊಳ್ಳುವ ಜತೆಗೆ ಆರೋಗ್ಯ ನೀತಿಗೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರವು ಮೆಡಿಕಲ್​ ಆ್ಯಂಡ್​ ಟೀಚಿಂಗ್ ಇನ್​ಸ್ಟಿಟ್ಯೂಷನ್ಸ್​ ಆ್ಯಕ್ಟ್​-2015 ಅಳವಡಿಸಿಕೊಂಡಿದೆ. ಇದನ್ನು ವಿರೋಧಿಸಿ ಕಳೆದ 2 ವರ್ಷಗಳಲ್ಲಿ ಲೇಡಿ ರೀಡಿಂಗ್ ಹಾಸ್ಪಿಟಲ್ ಒಂದರಿಂದಲೇ 56 ಹಿರಿಯ ವೈದ್ಯರು ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ ಈ ಪ್ರಾಂತ್ಯದ ಇತರೆಡೆಯೂ ಇದೇ ಕಾರಣಕ್ಕೆ ಮತ್ತಷ್ಟು ವೈದ್ಯರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. –ಏಜೆನ್ಸೀಸ್

    ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ

    ಚಿನ್ನದಂಗಡಿಯ ಹುಡುಗಿಯ ಹೃದಯಕ್ಕೆ ಕನ್ನ ಹಾಕುವ ಯತ್ನ; ಕೊನೆಗೂ ಸೋತು ಆಕೆಗೆ ಚೂರಿ ಇರಿದವ ಹೆಣವಾಗಿ ಸಿಕ್ಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts