More

    ಕಾರವಾರ ಅರ್ಬನ್‌ ಬ್ಯಾಂಕ್‌ನಲ್ಲಿ 54 ಕೋಟಿ ಅವ್ಯವಹಾರ

    ಕಾರವಾರ: ನೂರಿಪ್ಪತ್ತು ವರ್ಷಗಳ ಇತಿಹಾಸ ಹೊಂದಿರುವ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಬ್ಯಾಂಕ್‌ ಮುಳುಗುವ ಹಂತ ತಲುಪಿದೆ. ಅದನ್ನು ಬೇರೆ ಬ್ಯಾಂಕ್ ಜತೆ ವಿಲೀನ ಮಾಡಲು ಯೋಜನೆಗಳು ನಡೆದಿವೆ ಎಂದು ಬ್ಯಾಂಕ್‌ನ ನಿರ್ದೇಶಕ ಅರವಿಂದ ತೆಂಡುಲ್ಕರ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 88 ಕೋಟಿ ರೂ. ಠೇವಣಿ ಹೊಂದಿದ್ದು, 9 ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ. ಬ್ಯಾಂಕ್ ಈ ಹಿಂದೆಯೇ ನಷ್ಟದಲ್ಲಿ ಹೋಗಿ ರೆಡ್ ಲಿಸ್ಟ್ನಲ್ಲಿ ಬಂದಿತ್ತು. ಈ ಹಿಂದೆ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಆಗಿದ್ದ ಗುರುದಾದ ಬಾಂದೇಕರ್ ಬ್ಯಾಂಕ್‌ನ ಹಣವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವುದು ಇತ್ತೀಚೆಗೆ ಪತ್ತೆಯಾಗಿದೆ.
    ಈ ಸಂಬಂಧ ಇಲ್ಲಿನ ಶಹರ ಠಾಣೆಯಲ್ಲಿ ಬ್ಯಾಂಕ್ ಹಾಲಿ ಜನರಲ್ ಮ್ಯಾನೇಜರ್ ವಾಸುದೇವ ಮನೋಹರ ಪಂಗಮ್ ಗುರುವಾರ ದೂರು ನೀಡಿದ್ದಾರೆ. 2014 ರಿಂದ 2024 ವರೆಗೆ ಒಟ್ಟು 54 ಕೋಟಿ ರೂ. ವಂಚನೆಯಾಗಿರುವುದು ಬೆಳಕಿಗೆ ಬಂದಿದೆ ಎಂದರು.
    ಬ್ಯಾಂಕ್‌ನ ಜಿಎಂ ಗುರುದಾಸ ಬಾಂದೇಕರ್ ಮೃತಪಟ್ಟಿದ್ದಾರೆ. ಆದರೆ, ಅವರು ತಮ್ಮ ಅವಽಯಲ್ಲಿ ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಹುಬ್ಬಳ್ಳಿ, ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿ, ಆದಿತ್ಯ ಪ್ರಶಾಂತ ದೇಸಾಯಿ, ಗೋವಿಂದಪ್ಪ ಹೊಳಗೇರಿ, ಬಸಪ್ಪ ಡೊಗ್‌ಮುಗಪ್ಪಾ ರೋಣ್, ಸಂಜೀವ ಎಸ್.ರೋಟಿ ಅವರ ಹೆಸರಿಗೆ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
    ಬೇರೆಯದೇ ಸಾಫ್ಟ್ವೇರ್ ಮಾಡಿಕೊಂಡು ಬ್ಯಾಂಕ್‌ನ ನಿಯಮಾವಳಿಗಳನ್ನು ಮೀರಿ ಹಣವನ್ನು ವರ್ಗಾಯಿಸಿ, ಹುಬ್ಬಳ್ಳಿಯ ಬಿಲ್ಡರ್‌ಗಳ ಜತೆ ಸೇರಿ ಪಾರ್ಟನರ್ ಆಗಿದ್ದರು ಎಂಬುದು ತಿಳಿದುಬಂದಿದೆ. ಆಡಿಟರ್‌ಗಳೂ ಅವರ ಕಾರ್ಯಕ್ಕೆ ಸಹಕರಿಸಿದಂತೆ ತೋರುತ್ತದೆ. ತನಿಖೆ ನಡೆಸಿ, ಬ್ಯಾಂಕ್‌ನ ಹಣವನ್ನು ವಾಪಸ್ ತರುವ ಎಲ್ಲ ಪ್ರಯತ್ನ ನಡೆಸಲಾಗುವುದು.

    ಗ್ರಾಹಕರಿಗೆ ಸಮಸ್ಯೆಯಾಗಲ್ಲ

    ಬ್ಯಾಂಕ್‌ನಲ್ಲಿ ಸುಮಾರು 5 ಸಾವಿರ ಗ್ರಾಹಕರಿದ್ದಾರೆ. 5 ಲಕ್ಷದವರೆಗಿನ ಠೇವಣಿಗೆ ಇನ್ಶುರೆನ್ಸ್ ಇದ್ದು, ಅವರಿಗೆ ಹಣ ದೊರೆಯಲಿದೆ. ಉಳಿದವರಿಗೂ ಬ್ಯಾಂಕ್‌ನ ಆಸ್ತಿ ಜಪ್ತು ಮಾಡಿ ಹಣ ಪಾವತಿ ಮಾಡಲಾಗುವುದು. ಗ್ರಾಹಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ, ಬ್ಯಾಂಕ್ ಉಳಿಯುವುದಿಲ್ಲ ಎಂದರು. ಬ್ಯಾಂಕ್‌ನ ಅಧ್ಯಕ್ಷ ಚಂದ್ರಹಾಸ ಸ್ವಾರ್, ಜಿಪಂ ವಾಸುದೇವ ಪಂಗಮ್, ನಿರ್ದೇಶಕರಾದ ಪ್ರದೀಪ ಗಾಂವಕರ್, ರಾಜೇಶ ಪಾವಸ್ಕರ್, ರಾಮದಾಸ ಪೆಡ್ನೇಕರ್ ಅನೂಜ ಅಗ್ರ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

    https://www.vijayavani.net/new-administrater-to-tss

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts