More

    508 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿ: ಭಾರತೀಯ ರೈಲ್ವೆ ಇತಿಹಾಸದ ಹೊಸ ಅಧ್ಯಾಯ ಆರಂಭ ಎಂದ ಪ್ರಧಾನಿ

    ನವದೆಹಲಿ: ಕರ್ನಾಟಕದ 13 ಸೇರಿ ದೇಶದ ಒಟ್ಟು 508 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಪ್ರಧಾನಿ ಮೋದಿ ಅವರು ಇಂದು (ಆ.06) ಬೆಳಗ್ಗೆ 11 ಗಂಟೆ ಸುಮಾರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಶಿಲಾನ್ಯಾಸ ನೆರವೇರಿಸಿದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತ ತನ್ನ ಅಮೃತ ಕಾಲದ ಆರಂಭದಲ್ಲಿದೆ. ಇದೀಗ ನಮ್ಮಲ್ಲಿ ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ ಮತ್ತು ಇದೇ ಉತ್ಸಾಹದಲ್ಲಿ ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

    25,000 ಕೋಟಿ ರೂಪಾಯಿ ವೆಚ್ಚ

    ಭಾರತದ ಸುಮಾರು 1300 ಪ್ರಮುಖ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಇವುಗಳಲ್ಲಿ 508 ಅಮೃತ್ ಭಾರತ್ ರೈಲು ನಿಲ್ದಾಣಗಳ ಪುನಾರಾಭಿವೃದ್ಧಿ ಕಾರ್ಯವು ಇಂದಿನಿಂದ ಆರಂಭವಾಗಲಿದೆ. ಸುಮಾರು 25,000 ಕೋಟಿ ರೂ.ಗಳನ್ನು 508 ಅಮೃತ್ ಭಾರತ್ ನಿಲ್ದಾಣಗಳ ಪುನರಾಭಿವೃದ್ಧಿಗೆ ಖರ್ಚು ಮಾಡಲಾಗುವುದು ಎಂದರು.

    ಇದನ್ನೂ ಓದಿ: ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ

    ಜಾಗತಿಕವಾಗಿ ಭಾರತದ ಗೌರವ ಹೆಚ್ಚಾಗಿದೆ

    ಇಂದು ಇಡೀ ಜಗತ್ತಿನ ಗಮನ ಭಾರತದ ಮೇಲಿದೆ. ಜಾಗತಿಕವಾಗಿ ಭಾರತದ ಗೌರವ ಹೆಚ್ಚಾಗಿದೆ. ಭಾರತದ ಕಡೆಗೆ ನೋಡುವ ವಿಶ್ವದ ನೋಟ ಇದೀಗ ಬದಲಾಗಿದೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಸುಮಾರು 30 ವರ್ಷಗಳ ನಂತರ ಭಾರತೀಯರು ಪೂರ್ಣ ಬಹುಮತದ ಸರ್ಕಾರವನ್ನು ತಂದರು. ಎರಡನೆಯದು ಪೂರ್ಣ ಬಹುಮತದ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು ಮತ್ತು ಸವಾಲುಗಳಿಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿತು ಎಂದರು.

    ವಿಪಕ್ಷಗಳ ವಿರುದ್ಧ ಗುಡುಗು

    ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ವಿರೋಧ ಪಕ್ಷದ ಒಂದು ಬಣ ಇಂದಿಗೂ ಹಳೆಯ ವಿಧಾನಗಳನ್ನು ಅನುಸರಿಸುತ್ತಿದೆ. ಅವರು ತಾವಾಗಿಯೇ ಏನನ್ನೂ ಮಾಡುವುದಿಲ್ಲ ಅಥವಾ ಬೇರೆಯವರನ್ನು ಏನನ್ನೂ ಮಾಡಲು ಬಿಡುವುದಿಲ್ಲ. ದೇಶವು ಈಗ ಆಧುನಿಕ ಸಂಸತ್ ಭವನವನ್ನು ನಿರ್ಮಿಸಿದೆ. ಸಂಸತ್ತು ದೇಶದ ಪ್ರಜಾಪ್ರಭುತ್ವದ ಪ್ರತೀಕ. ಇದಕ್ಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದಿಂದಲೂ ಪ್ರಾತಿನಿಧ್ಯವಿದೆ. ಆದರೆ ಪ್ರತಿಪಕ್ಷದ ಈ ಬಣ ಹೊಸ ಸಂಸತ್ ಭವನಕ್ಕೆ ವಿರೋಧ ವ್ಯಕ್ತಪಡಿಸಿದೆ. ನಾವು ಕರ್ತವ್ಯ ಪಥವನ್ನು ಪುನರಾಭಿವೃದ್ಧಿ ಮಾಡಿದ್ದೇವೆ ಆದರೆ ಅವರು ಅದನ್ನೂ ವಿರೋಧಿಸಿದರು. 70 ವರ್ಷಗಳ ಕಾಲ, ಅವರು ದೇಶದ ವೀರ ಯೋಧರಿಗಾಗಿ ಯುದ್ಧ ಸ್ಮಾರಕವನ್ನು ಸಹ ನಿರ್ಮಿಸಲಿಲ್ಲ. ನಾವು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದಾಗ ಅದನ್ನು ಸಾರ್ವಜನಿಕವಾಗಿ ಟೀಕಿಸಲು ಅವರಿಗೆ ನಾಚಿಕೆಯೂ ಆಗಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಪ್ರತಿಯೊಬ್ಬ ಭಾರತೀಯನು ಅದರ ಬಗ್ಗೆ ಹೆಮ್ಮೆಪಡುತ್ತಾನೆ. ಆದರೆ ಕೆಲವು ರಾಜಕೀಯ ಪಕ್ಷಗಳ ಯಾವುದೇ ದೊಡ್ಡ ನಾಯಕರು ಪ್ರತಿಮೆಗೆ ಭೇಟಿ ನೀಡಿಲ್ಲ ಎಂದು ವಿಪಕ್ಷಗಳ ವಿರುದ್ಧ ಗುಡುಗಿದರು.

    ಇದನ್ನೂ ಓದಿ: ಫಲಿಸದ ಪ್ರಾರ್ಥನೆ: ಹೃದಯಾಘಾತದಿಂದ 64 ದಿನ ಜೀವನ್ಮರಣ ಹೋರಾಟ ನಡೆಸಿ ಶಾಶ್ವತವಾಗಿ ಕಣ್ಮುಚ್ಚಿದ ಹುಡುಗಿ

    ಯಾವ ರಾಜ್ಯದಲ್ಲಿ ಎಷ್ಟೆಷ್ಟು ನಿಲ್ದಾಣ ಅಭಿವೃದ್ಧಿ

    ಮೊದಲ ಹಂತವಾಗಿ ಒಟ್ಟು 508 ನಿಲ್ದಾಣಗಳ ಪುನಾರಾಭಿವೃದ್ಧಿಯಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ಹಾಗೂ ಕರ್ನಾಟಕದಲ್ಲಿ 13 ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ನಿಲ್ದಾಣಗಳ ಅಭಿವೃದ್ಧಿಯಾಗಲಿದೆ. (ಏಜೆನ್ಸೀಸ್​)

    ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೆಳೆತಿಯ ಸಹಾಯಕ್ಕೆ ನಿಂತ ಬಾಲ್ಯದ ಸ್ನೇಹಿತೆಯರು…ಇದು ನಿಜವಾದ ಸ್ನೇಹ

    ಮಂಗಗಳ ದಾಳಿ.. ಭಯದಿಂದ ಬಾವಿಗೆ ಬಿದ್ದ ವೃದ್ಧೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts