More

    ಕರೊನಾ ನಡುವೆಯೇ ನೀರಾಗುತ್ತಿದೆ ಗುಲಾಬಿ! ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಚಮತ್ಕಾರ

    ಮುಂಬೈ: ಮಹಾರಾಷ್ಟ್ರವಂತೂ ಇದೀಗ ಕರೊನಾದ ಹಾಟ್​ಸ್ಪಾಟ್​ ಆಗಿದೆ. ಪ್ರತಿ 12 ನಿಮಿಷಕ್ಕೆ ಒಬ್ಬ ಕರೊನಾ ಸೋಂಕಿತ ಮೃತಪಡುತ್ತಿದ್ದಾನೆ ಎಂಬ ವರದಿಯೂ ನಿನ್ನೆ ಬಿಡುಗಡೆ ಆಗಿರುವುದು ಈ ರಾಜ್ಯದ ಭೀಕರತೆಯನ್ನು ತೆರೆದಿಡುತ್ತದೆ.

    ಆದರೆ ಇದರ ನಡುವೆಯೇ, 50 ಸಾವಿರ ವರ್ಷಗಳ ಇತಿಹಾಸವುಳ್ಳ ಸರೋವರ ಒಂದರ ನೀರು ಗುಲಾಬಿ ಬಣ್ಣಕ್ಕೆ ತಿರುಗುತ್ತಿದ್ದು, ವಿಜ್ಞಾನಿಗಳನ್ನೂ ಬೆರಗುಗೊಳಿಸಿದೆ. ಮುಂಬೈನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಬುಲ್ಖಾನಾ ಜಿಲ್ಲೆಯ ಲೋನಾರ್ ಸರೋವರ ಇಂಥದ್ದೊಂದು ಅಚ್ಚರಿಗೆ ಕಾರಣವಾಗಿದೆ. 1.2 ಕಿ.ಮೀ ಸರಾಸರಿ ವ್ಯಾಸವನ್ನು ಹೊಂದಿರುವ ಸರೋವರ ಜನಪ್ರಿಯ ಪ್ರವಾಸಿ ತಾಣವೂ ಆಗಿದೆ.

    ಸುಮಾರು 50 ಸಾವಿರ ವರ್ಷಗಳ ಹಿಂದೆ ಉಲ್ಕಾಶಿಲೆ ಭೂಮಿಗೆ ಅಪ್ಪಳಿಸಿದ ನಂತರ ಈ ಸರೋವರವು ರೂಪುಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಇಂಥ ಬೃಹತ್​ ಪ್ರಮಾಣದ ಚಮತ್ಕಾರ ನಡೆದೇ ಇಲ್ಲ ಎನ್ನುತ್ತಿದ್ದಾರೆ ಸಂಶೋಧಕರು.

    ಇದನ್ನೂ ಓದಿ: ಬುಲೆಟ್​ ಮಿಸ್ಸಿಂಗ್​ ಪ್ರಕರಣಕ್ಕೆ ಟ್ವಿಸ್ಟ್​: ಆತ್ಮಹತ್ಯೆ ಮಾಡಿಕೊಂಡಿದ್ದ ‘ಕಳ್ಳ’ ಜೀವಂತ ಸಿಕ್ಕ!

    ಸರೋವರದಲ್ಲಿರುವ ನೀರಿನಲ್ಲಿರುವ ಪಾಚಿಗಳು ಹಾಗೂ ನೀರಿನ ಲವಣಾಂಶ ಒಂದಕ್ಕೊಂದು ಘರ್ಷಣೆ ಆಗಿರುವ ಕಾರಣ, ಇಂಥದ್ದೊಂದು ಅದ್ಭುತ ನಡೆದಿರಬಹುದು ಎಂದು ಊಹಿಸಲಾಗಿದೆ.

    ಬಣ್ಣ ಬದಲಾವಣೆ ಸಂಭವಿಸಿದ್ದು ಇದೇ ಮೊದಲಲ್ಲ ಎಂದು ತಜ್ಞರು ಹೇಳುತ್ತಾರೆ, ಆದರೆ ಈ ಬಾರಿ ಅದು ಹೆಚ್ಚು ಪ್ರಕಾಶಮಾನವಾಗಿದೆ. ರಾಷ್ಟ್ರೀಯ ಸ್ಮಾರಕವಾಗಿರುವ ಈ ಸರೋವರದಲ್ಲಿ ನೀರಿನಲ್ಲಿರುವ ಲವಣದ ಅಂಶ 10.5 ಪಿಹೆಚ್​. ಇದು ಪಾಚಿಯ ಜತೆ ಸಂಪರ್ಕಕ್ಕೆ ಬಂದು ಈ ರೀತಿ ಆಗಿರಲು ಸಾಧ್ಯ ಎಂದಿದ್ದಾರೆ ಲೋನಾರ್ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯ ಗಜಾನನ್ ಖರತ್.

    ಇರಾನ್‌ನ ಸರೋವರದ ನೀರು ಕೆಂಪು ಬಣ್ಣಕ್ಕೆ ತಿರುಗುವ ಬಗ್ಗೆ ಉದಾಹರಿಸಿರುವ ಅವರು, ಅಲ್ಲಿ ಕೂಡ ನೀರಿನ ಲವಣಾಂಶದ ಹೆಚ್ಚಳದಿಂದಾಗಿ ನೀರು ಕೆಂಪಾಗುತ್ತದೆ ಎಂದಿದ್ದಾರೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಲೋನಾರ್ ಸರೋವರದ ನೀರಿನ ಮಟ್ಟವು ಕಡಿಮೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ಈ ಭಾಗದಲ್ಲಿ ಕಡಿಮೆ ಇರುವ ಹಿನ್ನೆಲೆಯಲ್ಲಿ, ನೀರಿನಲ್ಲಿರುವ ಲವಣಾಂಶ ಹೆಚ್ಚಾಗಿದ್ದು, ಈ ರೀತಿ ಆಗಿರಬಹುದು ಎಂಬುದು ಅವರ ಅಭಿಮತ.

    ಇದನ್ನೂ ಓದಿ: ಇನ್ನೆರಡು ದಿನದಲ್ಲಿ ಕಲಬುರಗಿ-ಮುಂಬೈ ನಡುವೆ ವಿಮಾನ ಹಾರಾಟ ಶುರು

    ಆದರೆ ಸದ್ಯಕ್ಕಂತೂ ಇಡೀ ವಿಶ್ವದ ಸಂಶೋಧಕರ ಕಣ್ಣು ಇದೀಗ ಲೋನಾರ್​ ಸರೋವರದತ್ತ ನೆಟ್ಟಿದೆ. ಎಲ್ಲವೂ ಸರಿಯಿದ್ದರೆ ಇದಾಗಲೇ ಸಂಶೋಧಕರು ಈ ಸರೋವರದತ್ತ ಧಾವಿಸಿ ಬರುತ್ತಿದ್ದರು. ಆದರೆ ಕರೊನಾ ಎಲ್ಲವನ್ನೂ ಸ್ಥಗಿತಗೊಳಿಸಿದೆ (ಏಜೆನ್ಸೀಸ್​)

    166 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಭಾರತೀಯ ರೈಲ್ವೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts