More

    50 ಹಾಸಿಗೆಗಳನ್ನು ಶೀಘ್ರ ಸಿದ್ಧಪಡಿಸಿ

    ಯಲ್ಲಾಪುರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾರ್ವಿುಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಭೇಟಿ ನೀಡಿ, ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಮಾಡಿರುವ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

    ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸುಮಾರು 50 ಹಾಸಿಗೆಗಳನ್ನು ಶೀಘ್ರವಾಗಿ ಸಿದ್ಧಪಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

    ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲೂ ಎಲ್ಲ ವ್ಯವಸ್ಥೆ ಕೈಗೊಂಡು, ಅವಶ್ಯಕತೆ ಇರುವ ವೈದ್ಯಕೀಯ ಪರಿಕರ, ಔಷಧಗಳನ್ನು ಪೂರೈಸುವಂತೆ ತಿಳಿಸಿದರು.

    ನಂತರ ಪಟ್ಟಣದ ಎಲ್ಲ ವಾರ್ಡ್​ಗಳಲ್ಲಿ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಡಾ.ದೀಪಕ ಭಟ್ಟ, ವಿಶೇಷ ಕರ್ತವ್ಯಾಧಿಕಾರಿ ಕಮಲಾಕರ ನಾಯ್ಕ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ ಇತರರಿದ್ದರು.

    ಗ್ರಾಮೀಣ ಭಾಗಕ್ಕೆ ಅಗತ್ಯ ವಸ್ತು ಪೂರೈಕೆ: ಯಲ್ಲಾಪುರ ಗ್ರಾಮೀಣ ಭಾಗದ ಜನತೆ ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಬರುವುದು ಬೇಡ, ಗ್ರಾಮೀಣ ಭಾಗದಲ್ಲೇ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದೆಂದು ತಾಲೂಕಾಡಳಿತ ಹೇಳಿದಂತೆ ಶುಕ್ರವಾರ ವ್ಯವಸ್ಥೆ ಆರಂಭಿಸಲಾಗಿದೆ.

    ತಾಲೂಕಿನ ವಿವಿಧೆಡೆ ಗ್ರಾಮೀಣ ಭಾಗಗಳಿಗೆ ತರಕಾರಿ, ದಿನಸಿ ವ್ಯಾಪಾರಿಗಳು ತೆರಳಿ ವ್ಯಾಪಾರ ನಡೆಸಿದರು. ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳ ಖರೀದಿಸುತ್ತಿರುವ ದೃಶ್ಯ ಕಂಡುಬಂತು. ಪಟ್ಟಣದಲ್ಲೂ ವಾರ್ಡ ವಾರು ನೇಮಕಗೊಂಡ ವ್ಯಾಪಾರಿಗಳು ಆಯಾ ವಾರ್ಡ್​ಗಳಲ್ಲಿ ವ್ಯಾಪಾರ ಮಾಡಿದರು.

    ವದಂತಿ ಹಾವಳಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕರೊನಾ ಕುರಿತಂತೆ ವದಂತಿಗಳ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೊರಗೆ ನೆಲೆಸಿದವರು ಊರಿಗೆ ಬಂದಿದ್ದು, ಅವರಿಗೆ ಕರೊನಾ ಬಂದಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ವಿಚಿತ್ರವೆಂದರೆ ಎಷ್ಟೇ ಜಾಗೃತಿ ಮೂಡಿಸಿದರೂ ಗಂಭೀರವಾಗಿ ತೆಗೆದುಕೊಳ್ಳದ ಜನತೆ, ವದಂತಿಗೆ ಬೆದರಿ ಮನೆ ಸೇರಿಕೊಂಡಿದ್ದು, ಹೊರಗಡೆ ಓಡಾಡುವುದಕ್ಕೆ ಭಯಪಡುತ್ತಿದ್ದಾರೆ.

    ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ತೋರದೇ, ಎಚ್ಚರಿಕೆಯಿಂದ ಮನೆಯಲ್ಲಿಯೇ ಉಳಿದು ನಮಗಾಗಿ ಹಗಲಿರುಳು ದುಡಿಯುತ್ತಿರುವ ಅಧಿಕಾರಿಗಳಿಗೆ ಸಹಕರಿಸಬೇಕು.
    | ಶಿವರಾಮ ಹೆಬ್ಬಾರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts