More

    ಲಾಕ್​ಡೌನ್​ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ

    ನವದೆಹಲಿ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಬಹುರಾಷ್ಟ್ರೀಯ ಕೆಮಿಕಲ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಒಂದು ಮಗು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದು, ಸುಮಾರು 200 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಘಟನಾ ಸ್ಥಳದಲ್ಲಿ ಆಂಬುಲೆನ್ಸ್​, ಅಗ್ನಿಶಾಮಕ ವಾಹನ ಮತ್ತು ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದಾಗ ಮೂವರು ಮಾತ್ರ ಸಾವಿಗೀಡಾಗಿದ್ದರು, ಇದೀಗ ಸಾವಿನ ಸಂಖ್ಯೆ 9ಕ್ಕೇರಿದೆ.

    ಇದನ್ನೂ ಓದಿ: PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!

    ಎಲ್​.ಜಿ ಪಾಲಿಮರ್ಸ್​ ಇಂಡಿಯಾ ಪ್ರವೈಟ್​ ಲಿಮಿಟೆಡ್​ ಕೆಮಿಕಲ್​ ಫ್ಯಾಕ್ಟರಿಯು ವಿಶಾಖಪಟ್ಟಣಂ ಜಿಲ್ಲೆ ಆರ್​ಆರ್​ ವೆಂಕಟಪುರಂ ಸಮೀಪವಿದೆ. ಅವಘಡದ ಬಗ್ಗೆ ಮಾತನಾಡಿರುವ ಸ್ಥಳೀಯರು ವಿಷಾನಿಲ ಸೋರಿಕೆಯಿಂದ ಮೊದಲು ಕಣ್ಣು ಮಂಜಾಗಲು ಆರಂಭವಾಯಿತು. ಬಳಿಕ ಉಸಿರಾಡಲು ತುಂಬಾ ಸಮಸ್ಯೆಯಾಯಿತು ಎಂದು ಅಧಿಕಾರಿ ಬಳಿ ತಿಳಿಸಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದರ ನಡುವೆ ಗ್ರೇಟರ್​ ವಿಶಾಖಪಟ್ಟಣಂ ಮುನ್ಸಿಪಾಲ್​ ಕಾರ್ಪೊರೇಷನ್ ಟ್ವೀಟ್​ ಮಾಡಿ ಮುಂಜಾಗ್ರತ ಕ್ರಮವಾಗಿ ಕಾರ್ಖಾನೆ ಸಮೀಪದ ನಿವಾಸಿಗಳು ಮನೆಯಿಂದ ಹೊರಬರದಂತೆ ಮನವಿ ಮಾಡಿಕೊಂಡಿದೆ.

    ಇದನ್ನೂ ಓದಿ: ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ಘಟನೆಯ ಪರಿಸ್ಥಿತಿಯನ್ನು ಕೆಲವರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದು, ಅದರಲ್ಲಿ ನೂರಾರು ಮಂದಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದು, ಆಂಬುಲೆನ್ಸ್​ಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ, ಕಾರ್ಖಾನೆಯ ಎಚ್ಚರಿಕೆ ಗಂಟೆಯು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದು, ಉಸಿರಾಟದ ತೊಂದರೆಯಲ್ಲಿರುವವರನ್ನು ಮಾಸ್ಕ್​ ಧರಿಸಿರುವ ಜನರು ಹೊರಕ್ಕೆ ಸಾಗಿಸುತ್ತಿರುವುದು ವಿಡಿಯೋದಲ್ಲಿದೆ. ಆಂಬುಲೆನ್ಸ್​ ಬರೋವರೆಗೂ ಡಿವೈಡರ್​ ಮೇಲೆ ಅಸ್ವಸ್ಥಗೊಂಡವರನ್ನು ಕೂರಿಸಲಾಯಿತು. (ಏಜೆನ್ಸೀಸ್​)

    ಪರ್ಲ್​ ಹಾರ್ಬರ್​, ವರ್ಲ್ಡ್​ ಟ್ರೇಡ್​ ಸೆಂಟರ್​ ಅಟ್ಯಾಕ್​​ಗಳನ್ನು ಮೀರಿಸುತ್ತಿದೆ ಕೊವಿಡ್​-19ರ ದಾಳಿ ಎಂದ್ರು ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts