More

    5 ಸಾವಿರ ಮನೆ ನಿರ್ಮಾಣ

    ಹುಬ್ಬಳ್ಳಿ: ವಸತಿ ರಹಿತ ಬಡವರಿಗೆ ಮನೆ ನಿರ್ವಣಕ್ಕೆ ನಗರದ ಸುಳ್ಳ ರಸ್ತೆಯಲ್ಲಿ ಖಾಸಗಿಯಾಗಿ 50 ಎಕರೆ ಭೂಮಿ ಖರೀದಿಸಲು ಉದ್ದೇಶಿಸಲಾಗಿದೆ. ವಸತಿ ಇಲಾಖೆ ಅನುಮೋದನೆ ನೀಡಿದ ಬಳಿಕ ಜಿ+2 ಮಾದರಿಯಲ್ಲಿ 5 ಸಾವಿರ ಮನೆಗಳ ನಿರ್ವಣಕ್ಕೆ ಯೋಚಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ನಗರದ ಹೊರ ವಲಯ ಮಂಟೂರ ರಸ್ತೆ ಯಲ್ಲಾಪುರ ಗ್ರಾಮದಲ್ಲಿ ಹು-ಧಾ ಮಹಾನಗರ ಪಾಲಿಕೆಯ ಪೌರ ಕಾರ್ವಿುಕರಿಗಾಗಿ ಗೃಹ ಭಾಗ್ಯ ಯೋಜನೆಯಡಿ ಜಿ + 3 ಮಾದರಿಯಲ್ಲಿ 320 ಮನೆಗಳ ವಸತಿ ಸಮುಚ್ಚಯ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮನೆ ನಿರ್ವಣಕ್ಕೆ ಸರ್ಕಾರಿ ಜಾಗ ಸಿಗುತ್ತಿಲ್ಲ. ಖಾಸಗಿ ಜಾಗ ಖರೀದಿ ಅನಿವಾರ್ಯವಾಗಿದೆ ಎಂದರು.

    ನಗರದಲ್ಲಿ ಇರುವಂಥ ಕೊಳಗೇರಿಗಳು ಸುಧಾರಣೆ ಯಾಗಬೇಕು. ಹೊಸ ಕೊಳಗೇರಿಗಳು ಸೃಷ್ಟಿಯಾಗಬಾರದು. ಈ ಕಾರಣಕ್ಕೆ ಬಡವರಿಗೆ ಮನೆ ನಿರ್ವಿುಸಿ ಕೊಡಬೇಕಿದೆ. ಎಲ್ಲರಿಗೂ ಸೂರು ಕಲ್ಪಿಸಲು ಕೇಂದ್ರ ಸರ್ಕಾರ ಬೇಡಿಕೆ ಸಮೀಕ್ಷೆ ನಡೆಸುತ್ತಿದೆ. ಈ ವೇಳೆ ಅರ್ಜಿ ಸಲ್ಲಿಸಿದರೆ ಮುಂದೊಂದು ದಿನ ಅನುಕೂಲವಾಗುತ್ತದೆ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರ 2022ರ ವೇಳೆ ಎಲ್ಲರಿಗೂ ಸೂರು ಕಲ್ಪಿಸಲು ಸಂಕಲ್ಪ ಮಾಡಿದೆ. 2019-20ರಲ್ಲಿ ದೇಶದಲ್ಲಿ 32 ಲಕ್ಷ ಬಡವರಿಗೆ ಮನೆ ನಿರ್ವಿುಸಿ ಕೊಡಲಾಗಿದೆ. ಮನೆಯ ಮಾಲೀಕತ್ವ ಮಹಿಳೆಯರ ಹೆಸರಿನಲ್ಲಿಯೇ ನೋಂದಣಿಯಾಗುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅವಳಿ ನಗರದ ಪೌರ ಕಾರ್ವಿುಕರ ಜೀವನಮಟ್ಟ ಸುಧಾರಣೆಯಾಗಬೇಕೆಂದು ಅವರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಬಾಕಿ ಉಳಿದ 190 ಪೌರ ಕಾರ್ವಿುಕರಿಗೂ ಮನೆ ಕಟ್ಟಿಸಿ ಕೊಡಲಾಗುವುದು ಎಂದು ಹೇಳಿದರು.

    ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪ್ರಮುಖರಾದ ಅಲ್ತಾಫ್ ಹಳ್ಳೂರ, ಶಿವು ಮೆಣಸಿನಕಾಯಿ, ಇತರರು ಇದ್ದರು. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸ್ವಾಗತಿಸಿದರು.

    ಪೌರ ಕಾರ್ವಿುಕರಿಗೆ ರಾಜ್ಯ ಸರ್ಕಾರದಿಂದ 6 ಲಕ್ಷ ರೂ., ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ. ಹಾಗೂ ಫಲಾನುಭವಿಯಿಂದ 50 ಸಾವಿರ ರೂ. ವಂತಿಗೆ ಸೇರಿ ತಲಾ 8 ಲಕ್ಷ ರೂ. ವೆಚ್ಚದಲ್ಲಿ 501 ಚದರ ಅಡಿ ವಿಸ್ತೀರ್ಣದ ಮನೆ ನಿರ್ವಿುಸಲಾಗುತ್ತಿದೆ. 2 ಎಕರೆ ಪ್ರದೇಶದಲ್ಲಿ 25.99 ಕೋಟಿ ರೂ. ವೆಚ್ಚದಲ್ಲಿ 320 ಮನೆಗಳು ನಿರ್ವಣವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts