More

  4ನೇ ದಿನಕ್ಕೆ ಕಾಲಿಟ್ಟ ರೈಲ್ವೆ ನೌಕರರ ಉಪವಾಸ ಸತ್ಯಾಗ್ರಹ

  ರಾಣೆಬೆನ್ನೂರ: ಹೊಸ ಪಿಂಚಣಿ ಯೋಜನೆ ಜಾರಿ ಕೈಬಿಟ್ಟು ಹಳೆ ಪಿಂಚಣಿ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣದ ಬಳಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯುನಿಯನ್ ತಾಲೂಕು ಘಟಕದ ವತಿಯಿಂದ 4ನೇ ದಿನವೂ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
  ಸಂಘಟನೆಯ ತಾಲೂಕು ಅಧ್ಯಕ್ಷ ಸಂತೋಷ ಯಾದವಾಡ ಮಾತನಾಡಿ, ಕೇಂದ್ರ ಸರ್ಕಾರ ಹೊಸ ಪಿಂಚಣಿ ಪದ್ಧತಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 2004ರಿಂದ ನೇಮಕಗೊಂಡ ನೌಕರರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಹೊಸ ಪಿಂಚಣಿ ಪದ್ಧತಿ ಕೈಬಿಟ್ಟು ಹಳೆ ಪಿಂಚಣಿ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
  ಸಂಘಟನೆಯ ಕಾರ್ಯದರ್ಶಿ ಮಾಲತೇಶ ಟಿ.ಎಲ್., ಕೆ. ಮಂಜುನಾಥ, ಕರಬಸಪ್ಪ ಕಲ್ಲಾಪುರ, ದೀಲಿಪ್ ದೇಸೂರ, ಚಂದ್ರಶೇಖರ ಚನ್ನೂರ, ಚಂದ್ರಶೇಖರ ಲಮಾಣಿ, ಶಿವಕುಮಾರ, ಮಲ್ಲಿಕಾರ್ಜುನ, ಶ್ರೀಕಾಂತ, ಶಿವನಗೌಡ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts