More

    49 ಕರೊನಾ ಪ್ರಕರಣ ಪತ್ತೆ

    ಗದಗ: ಶನಿವಾರ ಜಿಲ್ಲೆಯಲ್ಲಿ 49 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 7359 ಕ್ಕೆ ಏರಿದಂತಾಗಿದೆ. ಇದರಲ್ಲಿ 6077 ಜನ ಗುಣವಾಗಿದ್ದರೆ, 1177 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಮಹಾಮಾರಿಯಿಂದ 105 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾಹಿತಿ ನೀಡಿದ್ದಾರೆ. ಶನಿವಾರ ಗದಗದಲ್ಲಿ 23, ಮುಂಡರಗಿಯಲ್ಲಿ 12, ನರಗುಂದದಲಿ 2, ರೋಣದಲ್ಲಿ 3 ಹಾಗೂ ಶಿರಹಟ್ಟಿಯಲ್ಲಿ 1 ಪ್ರಕರಣ ದಾಖಲಾಗಿವೆ. ಕೋವಿಡ್-19 ಸೋಂಕು ದೃಢಪಟ್ಟ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆಶ್ರಯ ಕಾಲನಿ, ಕೆ.ಸಿ.ರಾಣಿ ರಸ್ತೆ, ಕುಲಕರ್ಣಿ ಗಲ್ಲಿ, ಹೊಸಪೇಟ ಚೌಕ್, ಬಜಾರ ರಸ್ತೆ, ಜಿಮ್್ಸ ಆಸ್ಪತ್ರೆ, ಕಾಶಿ ವಿಶ್ವನಾಥ ನಗರ, ಜವಳ ಗಲ್ಲಿ, ಹಾತಲಗೇರಿ ರಸ್ತೆ, ಬಸ ನಿಲ್ದಾಣದ ಹತ್ತಿರ, ಸವೋದಯ ಕಾಲನಿ, ಬಸವನ ಬಾವಿ ಓಣಿ, ಗದಗ ತಾಲೂಕಿನ ಹೊಂಬಳ, ಮುಳಗುಂದ, ಹಲಗಲಿ, ಹರ್ತಿ, ನಾಗಾವಿ, ಕಿರಟಗೇರಿ, ಮುಂಡರಗಿ ಪಟ್ಟಣ, ಮುಂಡರಗಿ ತಾಲೂಕಿನ ರಾಮೇನಹಳ್ಳಿ,ಹಿರೇವಡ್ಡಟ್ಟಿ, ವೆಂಕಟಾಪುರ, ನರಗುಂದ ಪಟ್ಟಣದ ಹೊಸೂರ ಓಣಿ, ನರಗುಂದ ತಾಲೂಕಿನ ದಂಡಾಪುರ, ರೋಣ ತಾಲೂಕಿನ ಸೂಡಿ, ಬೊಮ್ಮಸಾಗರದಲ್ಲಿ ಸೋಂಕು ಪತ್ತೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts