More

    ಕರೊನಾ : 46,148 ಹೊಸ ಪ್ರಕರಣಗಳು, 979 ಸಾವು

    ನವದೆಹಲಿ : ಭಾರತದಲ್ಲಿ ಭಾನುವಾರದಂದು 46,148 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, ಹಾಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 10,905 ಹೊಸ ಪ್ರಕರಣಗಳೊಂದಿಗೆ ಕೇರಳ ಅತಿಹೆಚ್ಚು ಪ್ರಕರಣ ದಾಖಲಿಸಿದ್ದು, ಮಹಾರಾಷ್ಟ್ರ 9,974 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

    ಕಳೆದ 24 ಗಂಟೆಗಳಲ್ಲಿ 979 ಕರೊನಾ ಸಾವುಗಳು ಸಂಭವಿಸಿದ್ದು, ನಿತ್ಯ ಮರಣ ಸಂಖ್ಯೆಯು ಏಪ್ರಿಲ್ 12 ರ ನಂತರದಲ್ಲಿ ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆಯಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳನ್ನು ವರದಿ ಮಾಡಿದ ಮಹಾರಾಷ್ಟ್ರದಲ್ಲಿ 411 ಜನ ಮೃತಪಟ್ಟಿದ್ದರೆ, ಉಳಿದ ಯಾವುದೇ ರಾಜ್ಯದಲ್ಲೂ 100 ಕ್ಕಿಂತ ಹೆಚ್ಚು ಸಾವು ಸಂಭವಿಸಿಲ್ಲ.

    ಇದನ್ನೂ ಓದಿ: ಮಂಡ್ಯದಲ್ಲಿ ಕಾಚಳ್ಳಿ ಹಣ್ಣು ತಿಂದ 6 ಮಕ್ಕಳು ಸೇರಿ 12 ಮಂದಿಗೆ ರಕ್ತ ವಾಂತಿ-ಭೇದಿ

    ದೇಶದಲ್ಲಿ ಈವರೆಗಿನ ಕರೊನಾ ಪ್ರಕರಣ ಸಂಖ್ಯೆ 3,02,79,331 ತಲುಪಿದೆ. ಒಟ್ಟು 2,93,09,607 ಸೋಂಕಿತರು ಈವರೆಗೆ ಗುಣಮುಖರಾಗಿದ್ದು, ಕರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 3,96,730 ತಲುಪಿದೆ. (ಏಜೆನ್ಸೀಸ್)

    ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!

    “ಶಾಲೆಗಳು ತೆರೆಯಬೇಕೆಂದರೆ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಬೇಕು”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts