More

    ಐಡಾ ಚಂಡಮಾರುತ ಆರ್ಭಟಕ್ಕೆ ನ್ಯೂಯಾರ್ಕ್​ನಲ್ಲಿ 44 ಮಂದಿ ದಾರುಣ ಸಾವು..!

    ನ್ಯೂಯಾರ್ಕ್​: ಐಡಾ ಚಂಡಮಾರುತದಿಂದ ಗುರುವಾರ ಉಂಟಾದ ಭೀಕರ ಪ್ರವಾಹಕ್ಕೆ ಒಂದೇ ರಾತ್ರಿಯಲ್ಲಿ ನ್ಯೂಯಾರ್ಕ್​ ಏರಿಯಾದಲ್ಲಿ ಸುಮಾರು 44 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಅನೇಕ ಕಟ್ಟಡಗಳು ಧರಶಾಹಿಯಾಗಿದ್ದು, ಅನೇಕರು ಅದರಡಿಯಲ್ಲಿ ಸಿಲುಕಿದ್ದಾರೆ.

    ದಾಖಲೆ ಮಟ್ಟದ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನ್ಯೂಯಾರ್ಕ್​ ನಗರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ರಸ್ತೆಗಳೆಲ್ಲ ನದಿಯಂತಾಗಿದ್ದು, ಪ್ಲಾಟ್‌ಫಾರ್ಮ್‌ ಹಾಗೂ ಟ್ರ್ಯಾಕ್‌ಗಳ ಮೇಲೆ ನೀರು ಹರಿಯುತ್ತಿದ್ದಂತೆ ಸಬ್‌ವೇ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    “ನನಗೆ 50 ವರ್ಷ ವಯಸ್ಸಾಗಿದೆ ಮತ್ತು ನಾನು ಎಂದಿಗೂ ಈ ರೀತಿ ಹೆಚ್ಚು ಮಳೆಯನ್ನೇ ನೋಡಿಲ್ಲ” ಎಂದು ಮೆಟೊಡಿಜಾ ಮಿಹಾಜ್ಲೋವ್ ಎಂಬುವರು ಹೇಳಿದ್ದಾರೆ. ಅವರ ಮ್ಯಾನ್‌ಹ್ಯಾಟನ್ ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿ ಮೂರು ಇಂಚು ನೀರು ತುಂಬಿದೆ. ಒಂದು ರೀತಿಯಲ್ಲಿ ಕಾಡಿನಲ್ಲಿ ವಾಸಿಸುವ ಹಾಗಿದೆ. ಸದ್ಯದ ಮಳೆಯನ್ನು ನಂಬಲು ಸಾಧ್ಯವೇ ಇಲ್ಲ. ಈ ವರ್ಷ ಎಲ್ಲವೂ ತುಂಬಾ ವಿಚಿತ್ರವಾಗಿದೆ ಎಂದು ಮಿಹಾಜ್ಲೋವ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಲಾಗಾರ್ಡಿಯಾ ಮತ್ತು ಜೆಎಫ್‌ಕೆ ವಿಮಾನ ನಿಲ್ದಾಣಗಳಲ್ಲಿ ಮತ್ತು ನೆವಾರ್ಕ್‌ನಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಏರ್​ಪೋರ್ಟ್​ನ ಟರ್ಮಿನಲ್​ಗಳು ಮಳೆ ನೀರಿನಿಂದ ತುಂಬಿ ಹೋಗಿವೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ನಿಮ್ಮ ಜತೆಯಲ್ಲಿರುತ್ತೇವೆ. ರಾಷ್ಟ್ರವು ಎಲ್ಲ ರೀತಿಯ ನೆರವು ನೀಡಲು ಸಿದ್ಧವಾಗಿದೆ ಎಂದು ಶುಕ್ರವಾರ ದಕ್ಷಿಣ ರಾಜ್ಯ ಲೂಯಿಸಿಯಾನ ಪ್ರವಾಸಕ್ಕೂ ಮುಂಚಿತವಾಗಿ ಹೇಳಿದರು.

    ತಮ್ಮ ನೆಲಮಾಳಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ 11 ಮಂದಿ ಸೇರಿದಂತೆ ನ್ಯೂಯಾರ್ಕ್ ನಗರದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಪಶುಗಳು ಎರಡು ವರ್ಷದಿಂದ 86 ರವರೆಗಿನ ವಯಸ್ಸಿನವರಾಗಿದ್ದಾರೆ. ಗುರುವಾರ ಸಂಜೆಯ ವೇಳೆಗೆ, ಪೆನ್ಸಿಲ್ವೇನಿಯಾದಲ್ಲಿ ಸುಮಾರು 38,000 ಮನೆಗಳು, ನ್ಯೂಜೆರ್ಸಿಯಲ್ಲಿ 24,000 ಮತ್ತು ನ್ಯೂಯಾರ್ಕ್‌ನಲ್ಲಿ 12,000 ಮನೆಗಳಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಐಡಾ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

    ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ಮಾಜಿ ಶಾಸಕ ಪುತ್ರನ ಡ್ರಗ್ಸ್ ಪಾರ್ಟಿ: ಬರ್ತಡೆ ಪಾರ್ಟಿಯಲ್ಲೂ ಡ್ರಗ್ಸ್​ ಮಾರಾಟ!

    ಕಿಚ್ಚನ ಕಟೌಟ್​ ಮುಂದೆ ಕೋಣ ಕಡಿದ ಪ್ರಕರಣ: ಎಫ್​ಐಆರ್​ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

    ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್​ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts