More

    ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್​ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವು

    ಪೇಶಾವರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯ ಅಧಿಕೃತ ಘೋಷಣೆ ಶುಕ್ರವಾರ ಪ್ರಕಟವಾಗುವ ನಿರೀಕ್ಷೆ ಇದೆ. ತಾಲಿಬಾನಿಗಳು ಇರಾನ್ ಮಾದರಿಯ ಸರ್ಕಾರ ರಚನೆಗೆ ಒಲವು ತೋರಿದ್ದು, ಸುಪ್ರೀಂ ಲೀಡರ್​ನ ನಾಯಕತ್ವದಲ್ಲಿ ಆಡಳಿತ ನಡೆಸುವ ಸಾಧ್ಯತೆ ದಟ್ಟವಾಗಿದೆ. ತಾಲಿಬಾನ್​ನ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾಹ್ ಸಮಾನ್​ಗನಿ ಈ ಕುರಿತು ಮಾಹಿತಿ ನೀಡಿದ್ದು, ಸಂಘಟನೆಯ ಸವೋಚ್ಚ ಧಾರ್ವಿುಕ ನಾಯಕ ಮುಲ್ಲಾ ಹೆಬತುಲ್ಲಾಹ್ ಅಖುಂಡ್​ರೆದಾ ಅಫ್ಘಾನಿಸ್ತಾನದ ಸುಪ್ರೀಂ ಲೀಡರ್ ಆಗಿರಲಿದ್ದಾರೆ. ಸರ್ಕಾರ ರಚನೆಗೆ ಸಂಬಂಧಿಸಿದ ಸಮಾಲೋಚನೆಗಳು ಈಗಾಗಲೇ ಮುಕ್ತಾಯವಾಗಿವೆ. ಸಂಪುಟಕ್ಕೆ ಸಂಬಂಧಿಸಿದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾನೆ.

    ಪರಮಾಧಿಕಾರಿ ಸುಪ್ರೀಂ ಲೀಡರ್: ತಾಲಿಬಾನ್ ಅನುಸರಿಸಲಿರುವ ಸುಪ್ರೀಂ ಲೀಡರ್​ಶಿಪ್ ಸರ್ಕಾರಕ್ಕೆ ಇರಾನ್ ಆಡಳಿತ ಪ್ರೇರಣೆ. ಇರಾನ್​ನಲ್ಲಿ ಸುಪ್ರೀಂ ಲೀಡರ್ ಆಗಿರುವ ವ್ಯಕ್ತಿಗೆ ದೇಶದ ರಾಜಕೀಯ ಮತ್ತು ಧಾರ್ವಿುಕ ಕ್ಷೇತ್ರದಲ್ಲಿ ಸವೋನ್ನತ ಅಧಿಕಾರ. ಇವರು ಅಧ್ಯಕ್ಷರಿಗಿಂತ ಮೇಲಿನ ಸ್ಥಾನದಲ್ಲಿರುತ್ತಾರೆ. ಸೇನೆ, ಸರ್ಕಾರ ಮತ್ತು ನ್ಯಾಯಾಂಗದ ಮುಖ್ಯಸ್ಥರ ನೇಮಕಾತಿಯ ಅಧಿಕಾರ ಇವರ ಬಳಿ ಇರುತ್ತದೆ. ಈ ಮೂರು ಕ್ಷೇತ್ರಗಳಲ್ಲಿ ಇವರ ಮಾತೇ ಅಂತಿಮ.

    ಪ್ರಾಂತ್ಯ, ಜಿಲ್ಲೆಗಳು ಹೊಸ ಸರ್ಕಾರದ ಅಧೀನ: ಹೊಸ ಸರ್ಕಾರ ರಚನೆಯಾದ ಬೆನ್ನಿಗೆ ಅಫ್ಘಾನಿಸ್ತಾನದ ಎಲ್ಲ ಪ್ರಾಂತ್ಯಗಳು, ಜಿಲ್ಲೆಗಳು ಸರ್ಕಾರದ ಅಧೀನಕ್ಕೆ ಬರಲಿದೆ. ಪ್ರಾಂತ್ಯಗಳ ಆಡಳಿತ ಸೂತ್ರ ಗವರ್ನರ್​ಗಳ ಕೈಲಿರುತ್ತದೆ. ಆಯಾ ಪ್ರಾಂತ್ಯದ ಜಿಲ್ಲೆಗಳ ಆಡಳಿತವೂ ಗವರ್ನರ್ ಹೊಣೆಗಾರಿಕೆಯಾಗಿರುತ್ತದೆ. ತಾಲಿಬಾನ್ ಈಗಾಗಲೇ ಗವರ್ನರ್​ಗಳನ್ನು, ಪೊಲೀಸ್ ಮುಖ್ಯಸ್ಥರನ್ನು, ಪೊಲೀಸ್ ಕಮಾಂಡರ್​ಗಳನ್ನು ನೇಮಕ ಮಾಡಿದೆ. ಹೊಸ ಆಡಳಿತ ವ್ಯವಸ್ಥೆ, ಹೊಸ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಂತಿಮಗೊಳಿಸಬೇಕಷ್ಟೆ ಎಂದು ತಾಲಿಬಾನ್​ನ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾಹ್ ಸಮಾನ್​ಗನಿ ಹೇಳಿದ್ದಾನೆ.

    ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್​ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವುಬಗ್ರಾಂ ವಾಯುನೆಲೆ ಮೇಲೆ ಚೀನಾ ಕಣ್ಣು!: ಅಫ್ಘನ್​ನಲ್ಲಿರುವ ಬಗ್ರಾಂ ವಾಯುನೆಲೆಯ ಮೇಲೆ ಚೀನಾ ಕಣ್ಣಿರಿಸಿದ್ದು, ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿದೆ. ಈ ಸಂಬಂಧ ಪಾಕಿಸ್ತಾನವನ್ನು ಬಳಸಿಕೊಂಡು ಮುನ್ನಡೆಯಲು ಅದು ಮುಂದಾಗಿದೆ. ಈ ವಾಯುನೆಲೆಯನ್ನು ಹಿಡಿತಕ್ಕೆ ತೆಗೆದುಕೊಂಡು ಭಾರತದ ಮೇಲೆ ದಾಳಿ ನಡೆಸಲು ಚೀನಾ ಸನ್ನದ್ಧವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ಪ್ರತಿನಿಧಿಯಾಗಿದ್ದ ನಿಕ್ಕಿ ಹ್ಯಾಲೆ ಎಚ್ಚರಿಸಿದ್ದಾರೆ. ಪ್ರಸ್ತುತ ಅಮೆರಿಕದ ಎದುರು ಬಹಳಷ್ಟು ಸವಾಲುಗಳಿವೆ. ಅಧ್ಯಕ್ಷರಾಗಿ ಜೋ ಬೈಡೆನ್ ಅಮೆರಿಕದ ಮಿತ್ರ ರಾಷ್ಟ್ರಗಳ ನಂಬಿಕೆ, ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಸೈಬರ್ ಸುರಕ್ಷತೆ ವಿಚಾರದಲ್ಲಿ ರಷ್ಯಾದ ದಾಳಿಯನ್ನು ಎದುರಿಸಲು ಅಮೆರಿಕ ಸಜ್ಜಾಗಬೇಕಾಗಿದೆ. ಇದೇ ರೀತಿ, ಚೀನಾ ಕೂಡ ಅಪಾಯಕಾರಿ ರಾಷ್ಟ್ರವೇ ಆಗಿದೆ. ಅದು ಬಗ್ರಾಂ ವಾಯುನೆಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಈ ಬಗ್ಗೆ ಭಾರತ ಕೂಡ ಎಚ್ಚರದಿಂದ ಇರಬೇಕು ಎಂದು ಹ್ಯಾಲೆ ಎಚ್ಚರಿಸಿದ್ದಾರೆ.

    ಇಂದಿನಿಂದ ವಿಮಾನ ಹಾರಾಟ ಶುರು: ಕಾಬುಲ್ ಏರ್​ಪೋರ್ಟ್ ಶುಕ್ರವಾರ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಪ್ರಾದೇಶಿಕ ವಿಮಾನ ಹಾರಾಟ ಕೂಡ ಆರಂಭವಾಗಲಿದೆ. ಅಗತ್ಯ ಪ್ರಯಾಣ ದಾಖಲೆ ಹೊಂದಿದವರಿಗೆ ದೇಶ ಬಿಡುವುದಕ್ಕೆ ಅವಕಾಶ ನೀಡಲಾಗುತ್ತದೆ. ವಿಮಾನ ನಿಲ್ದಾಣ ದುರಸ್ತಿಗೆ ತಾಲಿಬಾನ್ ಸರ್ಕಾರ 25-30 ದಶಲಕ್ಷ ಅಮೆರಿಕನ್ ಡಾಲರ್ ವ್ಯಯಿಸಿದೆ ಎಂದು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್​ರೆೈ ತಿಳಿಸಿದ್ದಾನೆ.

    ಅಮೆರಿಕ ವಿಮಾನಗಳು ನಿಷ್ಕ್ರಿಯ: ಹೆಲಿಕಾಪ್ಟರ್​ಗಳು, ವಿಮಾನಗಳನ್ನು ಹಾರಾಡದಂತೆ ಮಾಡಿ ಅಮೆರಿಕ ಸೇನೆ ಅಫ್ಘನ್ ಬಿಟ್ಟಿದೆ. ಇದೊಂದು ರೀತಿಯ ವಂಚನೆ ಎಂಬ ಭಾವನೆ ಕಾಡಿದೆ ಎಂದು ತಾಲಿಬಾನ್ ಬುಧವಾರ ಹೇಳಿಕೊಂಡಿದೆ. ಅಮೆರಿಕ ಸೇನೆ 27 ಹಮ್ವೀಸ್, 73 ಏರ್​ಕ್ರಾಫ್ಟ್​ಗಳನ್ನು ಡಿಸೇಬಲ್ ಮಾಡಿದೆ. ತಾಲಿಬಾನ್ ಬಳಿ ಈಗ ಇರುವುದು 48 ಏರ್​ಕ್ರಾಫ್ಟ್​ಗಳು ಮಾತ್ರ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.

    ಕಾಬುಲ್ ದಾಳಿ ಹಿಂದೆ ಸೌದಿ ಪ್ರಿನ್ಸ್: ಕಾಬುಲ್ ವಿಮಾನ ನಿಲ್ದಾಣದ ಸಮೀಪ ಆಗಸ್ಟ್ 26ರಂದು ಸಂಭವಿಸಿದ ಅವಳಿ ಬಾಂಬ್ ಸ್ಫೋಟ ದಾಳಿ ಹಿಂದೆ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕೈವಾಡ ಇರಬಹುದು. ಐಎಸ್​ಐಎಲ್ ಉಗ್ರರಿಗೆ ಇವರ ಬೆಂಬಲ ಇದೆ ಎಂದು ಸೌದಿಯ ವಿಪಕ್ಷ ನಾಯಕರೊಬ್ಬರು ಹೇಳಿದ್ದಾಗಿ ಇರಾನ್​ನ ಮೆಹ್ರ್ ನ್ಯೂಸ್ ವರದಿಮಾಡಿದೆ.

    ಸರ್ಕಾರದಲ್ಲಿ ಎಲ್ಲರೂ ಪಾಲುದಾರರು: ಕಳೆದ 20 ವರ್ಷದ ಅವಧಿಯಲ್ಲಿ ಸರ್ಕಾರದ ಪಾಲುದಾರರಾಗಿ ಕೆಲಸ ಮಾಡಿದವರು ಹೊಸ ಸರ್ಕಾರದ ವ್ಯವಸ್ಥೆಯಲ್ಲಿ ಇರುವುದಿಲ್ಲ. ಆದರೆ, ಮಹಿಳೆಯರು ಮತ್ತು ಅಫ್ಘನ್​ನ ಎಲ್ಲ ಬುಡಕಟ್ಟುಗಳ ಪ್ರತಿನಿಧಿಗಳು ಸರ್ಕಾರದಲ್ಲಿ ಇರಲಿದ್ದಾರೆ. ಆಡಳಿತ ವ್ಯವಸ್ಥೆ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ನಿಗಾವನ್ನು ಮುಲ್ಲಾ ಅಖುಂಡ್​ರೆದಾ ಕಂದಹಾರ್​ನಲ್ಲಿದ್ದು ನೋಡಿಕೊಳ್ಳಲಿದ್ದಾರೆ ಎಂದು ತಾಲಿಬಾನ್ ರಾಜಕೀಯ ಕಚೇರಿಯ ಡೆಪ್ಯೂಟಿ ಲೀಡರ್ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್​ರೆೈ ದೋಹಾದಲ್ಲಿ ತಿಳಿಸಿದ್ದಾನೆ.

    ನಿರ್ಲಕ್ಷಿಸಿದ್ರೆ ಅಂತರ್ಯುದ್ಧ: ಅಫ್ಘನ್​ನಲ್ಲಿ ವಿದೇಶಿ ಸೇನೆಗಳ ಹಿಂತೆಗೆತ ಹೊಣೆಗಾರಿಕೆ ಅಥವಾ ವ್ಯವಸ್ಥಿತವಾಗಿ ನಡೆದಿಲ್ಲ. ಅರಾಜಕತೆಗೆ ಬೇಕಾದ ಸನ್ನಿವೇಶಗಳು ಕಾಣತೊಡಗಿವೆ. ಹೀಗಾಗಿ ಆಂತರಿಕವಾದ ವಿವಿಧ ಸವಾಲುಗಳನ್ನು ತಾಲಿಬಾನ್ ಆಡಳಿತ ನಿರ್ಲಕ್ಷಿಸಿದರೆ ನಾಗರಿಕ ಕ್ರಾಂತಿ ರೂಪುಗೊಳ್ಳುವ ಅಪಾಯ ಇದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಎಚ್ಚರಿಸಿದ್ದಾರೆ.

    ತಾಲಿಬಾನ್ ಸಂಘಟನೆಯ ಸವೋಚ್ಚ ಧಾರ್ವಿುಕ ನಾಯಕನಾಗಿರುವ ಮುಲ್ಲಾ ಅಖುಂಡ್​ರೆದಾ, ಕಳೆದ 15 ವರ್ಷಗಳಿಂದ ಬಲೂಚಿಸ್ತಾನದ ಕಚ್ಲಾಕ್ ಪ್ರದೇಶದ ಮಸೀದಿಯಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದಾನೆ. ನಮ್ಮ ಸರ್ಕಾರದಲ್ಲಿ ಮುಲ್ಲಾ ಅಖುಂಡ್​ರೆದಾ ಸುಪ್ರೀಂ ಲೀಡರ್ ಆಗಿರುತ್ತಾರೆ. ಈ ಸಂಬಂಧ ಯಾವುದೇ ಪ್ರಶ್ನೆಗೆ ಅವಕಾಶವಿಲ್ಲ.

    | ಮುಫ್ತಿ ಇನಾಮುಲ್ಲಾಹ್ ಸಮಾನ್​ಗನಿ ತಾಲಿಬಾನ್​ನ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ

    ಅಲ್​ಖೈದಾ ಹೇಳಿಕೆ ಹಿಂದೆ ಐಎಸ್​ಐ: ಕಾಶ್ಮೀರ ವಿಮೋಚನೆಗೆ ಸಂಬಂಧಿಸಿ ಅಲ್​ಖೈದಾ ನೀಡಿದ ಹೇಳಿಕೆಯ ಹಿಂದೆ ಪಾಕಿಸ್ತಾನದ ಐಎಸ್​ಐ ಕೆಲಸ ಮಾಡಿದೆ. ಕೈದಾ ಹೇಳಿಕೆಯಲ್ಲಿ ಇಸ್ಲಾಮಿಕ್ ಪ್ರದೇಶಗಳ ವಿಮೋಚನೆಗೆ ‘ಗ್ಲೋಬಲ್ ಜಿಹಾದ್’ ಅಂಶವಿತ್ತು. ಇದರಲ್ಲಿ, ಚೆಚೆನ್ಯಾ ಮತ್ತು ಕ್ಸಿನ್​ಜಿಯಾಂಗ್ ಪ್ರಾಂತ್ಯಗಳನ್ನು ಬಿಟ್ಟು ಕಾಶ್ಮೀರದ ಹೆಸರನ್ನು ಸೇರಿಸುವಲ್ಲಿ ಪಾಕಿಸ್ತಾನದ ಐಎಸ್​ಐ ಕೈವಾಡ ಇದೆ. ಅಲ್​ಖೈದಾದ ಮುಖ್ಯಸ್ಥನನ್ನಾಗಿ ಅಯ್ಮಾನ್ ಅಲ್ ಝುವಾಹರಿಯನ್ನು ನೇಮಿಸುವಲ್ಲಿ ಕೂಡ ಇದು ಕೆಲಸ ಮಾಡಿದೆ. ಪಾಕ್ ಮೂಲದ ಲಷ್ಕರ್ ಏ ತೊಯ್ಬಾ (ಎಲ್​ಇಟಿ) ಮತ್ತು ಜೈಷ್ ಏ ಮೊಹಮ್ಮದ್ (ಜೆಇಎಂ)ಗೆ ತಾಲಿಬಾನಿಗಳ ಬೆಂಬಲ ಬೇಕು ಎಂಬುದು ಕೂಡ ಕುಮ್ಮಕ್ಕೇ ಆಗಿದೆ. ಇದು ಭಾರತದಲ್ಲಿ ಈ ಉಗ್ರ ಸಂಘಟನೆಗಳ ದಾಳಿ ಹೆಚ್ಚಾಗುವ ಸಾಧ್ಯತೆಯನ್ನು ಬಿಂಬಿಸಿವೆ ಎಂದು ಸರ್ಕಾರದ ಮೂಲಗಳು ಎಚ್ಚರಿಸಿವೆ.

    ನಟ ನಾಸಿರುದ್ದೀನ್ ಷಾ ಟಾಂಗ್: ಅಫ್ಘನ್​ನಲ್ಲಿ ತಾಲಿಬಾನ್ ಆಡಳಿತ ಬಂದದ್ದಕ್ಕೆ ಸಂಭ್ರಮಿಸಿದ ಕೆಲ ಭಾರತೀಯ ಮುಸ್ಲಿಮರಿಗೆ ಬಾಲಿವುಡ್​ನ ಹಿರಿಯ ನಟ ನಾಸಿರುದ್ದೀನ್ ಷಾ ವಿಡಿಯೋ ಹೇಳಿಕೆಯೊಂದರಲ್ಲಿ ಟಾಂಗ್ ನೀಡಿದ್ದಾರೆ. ಉರ್ದು ಭಾಷೆಯಲ್ಲಿರುವ ಈ ವಿಡಿಯೋದಲ್ಲಿ, ಅಫ್ಘನ್​ನಲ್ಲಿ ತಾಲಿಬಾನ್ ಆಡಳಿತ ಬಂದದ್ದಕ್ಕೆ ಇಡೀ ಜಗತ್ತೇ ಆತಂಕದಲ್ಲಿದೆ. ಭಾರತದ ಕೆಲವು ಮುಸ್ಲಿಮರು ತಾಲಿಬಾನಿಗಳಂತೆ ಸಂಭ್ರಮಿಸುತ್ತಿದ್ದರು. ಅವರು ಅಪಾಯಕಾರಿಗಳು. ಅವರಿಗೆ ಸುಧಾರಣೆ ಬೇಕಾಗಿಲ್ಲ, ಆಧುನಿಕ ಇಸ್ಲಾಂ ಬೇಕಾಗಿಲ್ಲ ಎಂದಾದರೆ, ಹಳೆಯ ಪೈಶಾಚಿಕ ವರ್ತನೆಗಳ ಶತಮಾನಗಳ ಹಳೆಯ ಸಾಮಾಜಿಕ ಬದುಕಿಗೆ ಹಿಂದಿರುಗಬಹುದು. ಜಗತ್ತಿನ ವಿವಿಧ ಭಾಗಗಳಲ್ಲಿ ಇಂದು ‘ಹಿಂದುಸ್ತಾನಿ ಇಸ್ಲಾಂ’ ಚಾಲ್ತಿಯಲ್ಲಿದೆ. ಅದನ್ನೇ ನಾನು ಕೂಡ ಅನುಸರಿಸುತ್ತಿದ್ದೇನೆ. ಮಿರ್ಜಾ ಘಾಲಿಬ್ ಅವರು ಕೆಲವು ವರ್ಷಗಳ ಹಿಂದೆ ಹೇಳಿದ ಪ್ರಕಾರವೇ ದೇವರ ಜತೆಗಿನ ನನ್ನ ಸಂಬಂಧ ತೀರಾ ಅನೌಪಚಾರಿಕವಾದುದು. ಅದಕ್ಕೆ ರಾಜಕೀಯ ಧರ್ಮ ಬೇಕಾಗಿಲ್ಲ. ನಾನು ಒಬ್ಬ ಭಾರತೀಯ ಮುಸಲ್ಮಾನ’ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅನೇಕ ಪ್ರಗತಿಪರ ಮುಸ್ಲಿಮರಿಂದ ಪ್ರಶಂಸೆಗೆ ಒಳಗಾಗಿದೆ.

    ತಾಲಿಬಾನ್ ಬಲಿಷ್ಠ ವಾಯುಪಡೆ!: ಅಮೆರಿಕ ಮತ್ತು ನ್ಯಾಟೊ ಮಿತ್ರಪಡೆಗಳು, ಅಫ್ಘನ್ ಸೇನೆ ಬಿಟ್ಟು ಹೋದ ಅಮೆರಿಕದ 48 ಏರ್​ಕ್ರಾಫ್ಟ್​ಗಳು ತಾಲಿಬಾನಿಗಳ ವಾಯಪಡೆ ಬಲವನ್ನು ಹೆಚ್ಚಿಸಿವೆ. ಹೇರತ್, ಖೋಸ್ಟ್, ಕುನ್​ಡುಝå್, ಮಜರ್ ಏ ಷರೀಫ್ ಮತ್ತು ಕಾಬುಲ್ ಸೇರಿ ಪ್ರಮುಖ ವಾಯುನೆಲೆಗಳೆಲ್ಲವೂ ತಾಲಿಬಾನ್ ವಶವಾಗಿವೆ. 6 ದಶಲಕ್ಷ ಡಾಲರ್ ಮೌಲ್ಯದ ಬ್ಲಾ್ಯಕ್ ಹಾಕ್ಸ್, 14 ದಶಲಕ್ಷ ಡಾಲರ್ ಮೌಲ್ಯದ ಹರ್ಕ್ಯುಲಸ್ ಟ್ರಾನ್ಸ್​ಪೋರ್ಟ್ ಜೆಟ್​ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಪೈಲಟ್​ಗಳಿಗಾಗಿ ತಾಲಿಬಾನ್ ಶೋಧ ನಡೆಸಲಾರಂಭಿಸಿದೆ. ಆದರೆ, ಕಾಬುಲ್ ಬಿಡುವ ಮುನ್ನ ಎಲ್ಲ ವಿಮಾನಗಳನ್ನು ಹಾರದಂತೆ ನಿಷ್ಕ್ರಿಯಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಒಟ್ಟು ಎಷ್ಟು ವಿಮಾನಗಳಿವೆ, ಹೆಲಿಕಾಪ್ಟರ್​ಗಳಿವೆ ಎಂಬ ನಿಖರ ಲೆಕ್ಕ ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ನ್ಯಾಟೊ ಮಿತ್ರ ಪಡೆಗಳ ಅಲ್ಬಾನಿಯಾ, ಬೋಸ್ನಿಯಾ, ಎಸ್ಟೋನಿಯಾ, ಐಸ್​ಲ್ಯಾಂಡ್, ಲಾಟ್ವಿಯಾ, ಲಿಥುವಾನಿಯಾ, ಲಕ್ಸಂಬರ್ಗ್, ಮೊನ್​ಟೆನೆಗ್ರೊ, ನಾರ್ತ್ ಮಸೆಡೋನಿಯಾ, ಸ್ಲೋವಾನಿಯಾಗಳ ಏರ್​ಕ್ರಾಫ್ಟ್​ಗಳು ಕೂಡ ಅಲ್ಲಿವೆ ಎಂದು ಹೇಳಲಾಗುತ್ತಿದೆ.

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts