More

    ಕೇಂದ್ರ ಸಚಿವ ಸಂಪುಟ ಪುನರ್​ರಚನೆ: ಇಂದು ಪ್ರಮಾಣವಚನ ಸ್ವೀಕರಿಸುವುದು 43 ಸಚಿವರು!

    ನವದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್​ರಚನೆಗೆ ಸಕಲ ಸಿದ್ಧತೆಗಳು ನಡೆದಿವೆ. ಇಂದು ಸಂಜೆಯೇ ಹೊಸ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಕುತೂಹಲಕ್ಕೆ ಮಾತ್ರ ಇನ್ನೂ ತೆರೆ ಬಿದ್ದಿಲ್ಲ. ಮೋದಿ 2.0 ಸರ್ಕಾರದಲ್ಲಿ ಇದೇ ಮೊದಲನೇ ಬಾರಿಗೆ ಸಂಪುಟ ಪುನರ್​ರಚನೆ ಆಗುತ್ತಿದ್ದು, ಇಂದು ಹೊಸ ಮತ್ತು ಹಳೆಯ ಸಚಿವರು ಸೇರಿ ಒಟ್ಟಾರೆಯಾಗಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

    ಕರ್ನಾಟಕದಿಂದ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಶಿವಕುಮಾರ್ ಉದಾಸಿ ಹೆಸರು ಸಚಿವ ಸ್ಥಾನಕ್ಕೆ ಕೇಳಿಬಂದಿತ್ತು. ಶೋಭಾ ಕರಂದ್ಲಾಜೆಗೆ ಮಾತ್ರ ಸಚಿವ ಸ್ಥಾನ ಸಿಕ್ಕಿರುವುದು ಬಹುತೇಕ ಖಚಿತವಾಗಿದೆ. ಕರ್ನಾಟಕದಿಂದ ಕೇಂದ್ರದ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ಇಂದು ರಾಜೀನಾಮೆಯನ್ನೂ ನೀಡಿದ್ದಾರೆ.

    ಮಧ್ಯಪ್ರದೇಶದ ಸರ್ಕಾರವನ್ನೇ ಅದಲು ಬದಲು ಮಾಡಿದ್ದ ರಾಜ್ಯ ಸಭಾ ಸದಸ್ಯ ಜ್ಯೋತಿರಾಧಿತ್ಯಾ ಸಿಂಧ್ಯಾಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.

    ಡಿವಿಎಸ್ ಜತೆಗೆ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಸೇರಿ ಒಟ್ಟು ನಾಲ್ವರು ಸಚಿವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಜತೆ ಇನ್ನೂ ಅನೇಕರು ಸಂಪುಟದಿಂದ ಹೊರಗೆ ಬರುವ ನಿರೀಕ್ಷೆಯಿದೆ. ಆರೇಳು ಸಚಿವರಿಗೆ ಭಡ್ತಿ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಯಾರೆಲ್ಲ ಸಚಿವರಾಗಲಿದ್ದಾರೆ, ಕರ್ನಾಟಕದ ಎಷ್ಟು ಸಂಸದರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವ ಕುತೂಹಲಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬೀಳಲಿದೆ. (ಏಜೆನ್ಸೀಸ್)

    7ನೇ ತರಗತಿ ವಿದ್ಯಾರ್ಥಿನಿಯನ್ನೇ ತಾಯಿ ಮಾಡಿದ ಸಹಪಾಠಿ! ರೇಪ್ ಮಾಡಿ ಬಾಂಗ್ಲಾಕ್ಕೆ ಹಾರಿದ ಆರೋಪಿ

    ಟಾಯ್ಲೆಟ್​ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts