More

    43 ಪ್ರಯಾಣಿಕರಿದ್ದ ಸರ್ಕಾರಿ ಬಸ್​ ಪಲ್ಟಿ

    ಕಲಬುರಗಿ: ಸರ್ಕಾರಿ ಬಸ್​ ಪಲ್ಟಿಯಾಗಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಕಮಲಾಪುರ ತಾಲೂಕಿನ ಕಿಣ್ಣಿಸಡಕ್​ ಬಳಿ ಸೋಮವಾರ ಬೆಳಗ್ಗೆ ಜರುಗಿದೆ. ಬಸ್​ನಲ್ಲಿ ಸುಮಾರು 43 ಜನರು ಪ್ರಯಾಣಿಸುತ್ತಿದ್ದರು.

    ಬಸ್​ ಹೈದರಾಬಾದ್​ನಿಂದ ಚಿತ್ತಾಪುರದ ಕಡೆದೆ ಹೊರಟಿತ್ತು. ಕಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಬೀದರ್- ವಿಜಯಪುರ ಮಾರ್ಗದ ಹೆದ್ದಾರಿಯಲ್ಲಿ ಎದುರಿಗೆ ಒಮ್ಮೆಲೆ ಲಾರಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ ಪಲ್ಟಿಯಾಗಿದೆ. ಸುಮಾರು 43 ಜನರು ಪ್ರಯಾಣಿಸುತ್ತಿದ್ದರು, ಕೆಲವರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಟ್ರೀಟ್​ಮೆಂಟ್​ಗಾಗಿ ಕಲಬುರಗಿಗೆ ಕಳಿಸಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts