More

    43 ಕರೊನಾ ಸೋಂಕಿತರು ಚೇತರಿಕೆ

    ಕಲಬುರಗಿ: ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಜಿಲ್ಲೆಯ ಜನತೆಗೆ ಶುಭ ಶನಿವಾರವಾಗಿ ಮಾರ್ಪಟ್ಟಿತು. 43 ಸೋಂಕಿತರು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಪಾಸಿಟಿವ್ ಕೇಸ್ಗಳು ನೆಗೆಟಿವ್ ಕೇಸ್ಗಳಾಗಿ ಪರಿವರ್ತನೆಯಾಗಿರುವುದು ಸಿಹಿ ಸುದ್ದಿಯಾಗಿ ಮಾರ್ಪಟ್ಟಿದೆ.
    ಈ ಮಧ್ಯೆ ಜಿಲ್ಲೆಯಲ್ಲಿ ಮತ್ತೆರಡು ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 253ಕ್ಕೇರಿದಂತಾಗಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು 61 ಪ್ರಕರಣಗಳು ದಾಖಲಾಗಿದ್ದವು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾಗಿರುವುದು ಇದೇ ಮೊದಲ ಸಲವಾಗಿತ್ತು.
    ಅದರಂತೆ ದೊಡ್ಡ ಪ್ರಮಾಣದಲ್ಲಿ ಗುಣಮುಖವಾಗಿ ಹೊರ ಬರುತ್ತಿರುವುದೂ ಇದೇ ಮೊದಲ ಸಲವಾಗಿದೆ. ನಿಧಾನವಾಗಿ ಕಲಬುರಗಿ ಜಿಲ್ಲೆ ಕರೊನಾ ಪ್ರಕರಣದಿಂದ ಸುಧಾರಣೆ ಕಂಡು ಬರಲಾರಂಭಿಸಿದೆ.
    ಅಸ್ಪತ್ರೆಯಿಂದ ಬಿಡುಗಡೆ ಹೊಂದಿದವರು: ಕಾಳಗಿ ತಾಲೂಕಿನ ಕೋಡ್ಲಿಯ 24 ವರ್ಷದ ಯುವಕ, ಚಿತ್ತಾಪುರ ತಾಲೂಕಿನ ಬೆಳಗೇರಾ ಗ್ರಾಮದ 30 ವರ್ಷದ ಯುವತಿ, ಕಲಬುರಗಿಯ ವಿಶಾಲ ನಗರದ 55 ವರ್ಷದ ಪುರುಷ, ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾದ 10 ವರ್ಷದ ಬಾಲಕ , ಕಲಬುರಗಿಯ ಮೋಮಿನಪುರ ಪ್ರದೇಶದ 55 ವರ್ಷದ ಪುರುಷ , ಕಾಳಗಿ ತಾಲೂಕಿನ ಅರಣ್ಕಲ್ ತಾಂಡಾದ 36 ವರ್ಷದ ಯುವಕ , ಕಲಬುರಗಿ ಮೋಮಿನಪುರ ಪ್ರದೇಶದ 50 ವರ್ಷದ ಮಹಿಳೆ, ಆಳಂದ ತಾಲೂಕಿನ ದಂಗಾಪುರ ಗ್ರಾಮದ 13 ವರ್ಷದ ಬಾಲಕ, 40 ವರ್ಷದ ಪುರುಷ, ಹಾಗೂ 55 ವರ್ಷದ ಪುರುಷ ಸೋಂಕಿನಿಂದ ಗುಣಮುಖರಾಗಿದ್ದಾರೆ.
    ಕಲಬುರಗಿಯ ಶಹಾಬಜಾರ ತಾಂಡಾದ 22 ವರ್ಷದ ಯುವತಿ ಮತ್ತು 24 ವರ್ಷದ ಯುವತಿ, ಕಾಳಗಿ ತಾಲೂಕಿನ ಬುಗಡಿ ತಾಂಡಾದ 29 ವರ್ಷದ ಯುವಕ, 27 ವರ್ಷದ ಯುವತಿ ಹಾಗೂ 6 ತಿಂಗಳದ ಹೆಣ್ಣು ಮಗು, ಕಲಬುರಗಿ ತಾಲೂಕಿನ ಆಲಗುಡ್ ಗ್ರಾಮದ 4 ವರ್ಷದ ಹೆಣ್ಣು ಮಗು, ಚಿಂಚೋಳಿ ತಾಲೂಕಿನ ಜಿಲ್ವಷರ್ಾ ಗ್ರಾಮದ 4 ವರ್ಷದ ಗಂಡು ಮಗು, 5 ವರ್ಷದ ಹೆಣ್ಣು ಮಗು ಹಾಗೂ 25 ವರ್ಷದ ಯುವತಿ, ಕಾಳಗಿ ತಾಲೂಕಿನ ಬುಗಡಿ ತಾಂಡಾದ 42 ವರ್ಷದ ಪುರುಷ ಮತ್ತು 18 ವರ್ಷದ ಯುವತಿ, ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 8 ವರ್ಷದ ಬಾಲಕಿ, ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 35 ವರ್ಷದ ಮಹಿಳೆ, ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 32 ವರ್ಷದ ಯುವಕ, ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 21 ವರ್ಷದ ಯುವತಿ, ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 40 ವರ್ಷದ ಪುರುಷ,
    ಕಲಬುರಗಿಯ ಪಂಚಶೀಲ ನಗರದ 30 ವರ್ಷದ, ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 30 ವರ್ಷದ ಯುವತಿ, ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 32 ವರ್ಷದ ಯುವಕ, ಆಳಂದ ತಾಲೂಕಿನ ದಂಗಾಪುರ ಗ್ರಾಮದ 6 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆ , ಯಡ್ರಾಮಿ ತಾಲೂಕಿನ ಹಂಗರಗಾ (ಕೆ) ಗ್ರಾಮದ 22 ವರ್ಷದ ಯುವಕ, ಯಡ್ರಾಮಿಯ ಸುಂಬಡ ಗ್ರಾಮದ 35 ವರ್ಷದ ಯುವಕ, ಯಡ್ರಾಮಿಯ ಅರಳಗುಂಡಗಿ ಗ್ರಾಮದ 25 ವರ್ಷದ ಯುವಕ, ಜೇವಗರ್ಿ ತಾಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿ, ಯಡ್ರಾಮಿಯ ಸುಂಬಡ ಗ್ರಾಮದ 46 ವರ್ಷದ ಪುರುಷ, ಚಿತ್ತಾಪುರ ತಾಲೂಕಿನ ಬಳವಡಗಿಯ 26 ವರ್ಷದ ಯುವಕ, ಚಿತ್ತಾಪುರ ತಾಲೂಕಿನ ಯಾಗಾಪುರ ಗ್ರಾಮದ 50 ವರ್ಷದ ಪುರುಷ, ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 26 ವರ್ಷದ ಯುವಕ.
    ಯಡ್ರಾಮಿಯ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ, ಯಡ್ರಾಮಿಯ ಸುಂಬಡ ಗ್ರಾಮದ 20 ವರ್ಷದ ಯುವಕ, ಕಮಲಾಪುರ ತಾಲೂಕಿನ ಕುದಮೂಡ್ ತಾಂಡಾದ 48 ವರ್ಷದ ಪುರುಷ ಹಾಗೂ ಚಿಂಚೋಳಿಯ ಕುಂಚಾವರಂನ 50 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.
    ಈವರೆಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತ 253 ಜನರಲ್ಲಿ 128 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದರೆ 118 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts