More

    42 ಲಕ್ಷ ರೂ. ಮೌಲ್ಯದ ಬಂಗಾರ ಜಪ್ತಿ

    ಬೀದರ್: ಮನೆ ಕಳ್ಳತನ ಪ್ರಕರಣ ಭೇದಿಸಿದ ಗಾಂಧಿಗಂಜ್ ಪೊಲೀಸರು, ಒಬ್ಬನನ್ನು ಬಂಧಿಸಿ 42 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

    ಮೈಲೂರಿನ ಶಫಿಯೊದ್ದೀನ್ (ಎಂಡಿ ಶಾದುಲ್ಲಾ) ಎಂಬಾತನನ್ನು ಬಂಧಿಸಿ 840 ಗ್ರಾಂ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ. ನಗರದ 15 ಮನೆಗಳಲ್ಲಿ ಕಳ್ಳತನ ನಡೆಸಿರುವುದಾಗಿ ಬಂಧಿತ ಶಫಿಯೊದ್ದೀನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಡಿವೈಎಸ್ಪಿ ಕೆ.ಎಂ. ಸತೀಶ, ಪ್ರೊಬೆಷನರಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಗಾಂಧಿಗಂಜ್ ಠಾಣೆ ಸಿಪಿಐ ಜಿ.ಎಸ್. ಬಿರಾದಾರ, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್ಐ ಸೈಯದ್ ಪಟೇಲ್, ಎಎಸ್ಐ ಅಶೋಕ ಕೋಟೆ, ಸಿಬ್ಬಂದಿ ನವೀನ್, ಅಶೋಕ, ನೀಲಕಂಠ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್ ಇತರರಿದ್ದರು.

    ಡಿಜೆ-ಸೌಂಡ್ ಸಿಸ್ಟಮ್ ಬಂದ್ ಮಾಡಿ: ಸದ್ಯ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಮತ್ತು ಇತರ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಜೆ ಮತ್ತು ಸೌಂಡ್ ಸಿಸ್ಟಮ್ ಬಳಸಬಾರದು ಎಂದು ಎಸ್ಪಿ ಕಿಶೋರಬಾಬು ಸೂಚಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಜಿಲ್ಲೆಯ ಸೌಂಡ್ ಸಿಸ್ಟಮ್ ಹಾಗೂ ಡಿಜೆ ಮಾಲೀಕರ ಸಭೆ ನಡೆಸಿದ ಅವರು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗಿನ ಜಾವ ಹಾಗೂ ರಾತ್ರಿ 10ರ ನಂತರ ಯಾವ ಕಾರಣಕ್ಕೂ ಡಿಜೆ ಮತ್ತು ಸೌಂಡ್ ಸಿಸ್ಟಮ್ ಬಳಸಕೂಡದು. ಒಂದು ವೇಳೆ ಉಪಯೋಗಿಸಿದ್ದಲ್ಲಿ ಸಂಬಂಧಿತರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಡಿಜೆ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಶರಣಪ್ಪ, ಉಪಾಧ್ಯಕ್ಷ ಇಸ್ಮಾಯಿಲ್ ಬಾಬುಮಿಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts