ಬಳ್ಳಾರಿ : ಶಾಸಕ ನಾರಾ ಭರತ್‌ರೆಡ್ಡಿ ಮನೆ ಮೇಲೆ ಕಳೆದ ಎರಡು ದಿನಗಳಿಂದ ನಡೆದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ದಾಳಿ ಸೋಮವಾರ ಅಂತ್ಯಗೊಂಡಿದೆ.
ಶನಿವಾರ ಬೆಳಗ್ಗೆ 6.30ಕ್ಕೆ ಏಕಾಏಕಿ ನಾಲ್ಕು ಕಾರುಗಳಲ್ಲಿ ಆಗಮಿಸಿದ್ದ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಶಾಸಕ ಭರತ್‌ರೆಡ್ಡಿ ಹಾಗೂ ಅವರ ತಂದೆ ಮಾಜಿ ಸೂರ್ಯನಾರಾಯಣ ರೆಡ್ಡಿ ಸೇರಿದಂತೆ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿತ್ತು. ಭಾನುವಾರ ತಡರಾತ್ರಿ 11.25ರ ವರೆಗೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸುಮಾರು 41 ತಾಸುಗಳ ಕಾಲ ನಡೆದ ಇಡಿ ದಾಳಿ ಭಾನುವಾರ ತಡರಾತ್ರಿ ಪರಿಶೀಲನೆ ಪೂರ್ಣಗೊಳಿಸಿ ಅಧಿಕಾರಿಗಳು ಕಾರಿನಲ್ಲಿ ತೆರಳಿದರು.
ಇಲ್ಲಿನ ಗಾಂಧಿನಗರದಲ್ಲಿರುವ ಸೂರ್ಯನಾರಾಯಣ ರೆಡ್ಡಿ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಕೆಲ ಪ್ರಮುಖ ಕರತಗಳ ಮೇಲೆ ಸಹಿ ಹಾಕಿಸಿಕೊಂಡು ಕಚೇರಿಯಿಂದ ತೆರಳಿದರು. ಬಳ್ಳಾರಿ ನಗರದಲ್ಲಿ ಇಡಿ ಅಧಿಕಾರಿಗಳ ದಾಳಿಯಿಂದಾಗಿ ಕೆಲ ಗ್ರಾನೈಟ್ ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ನಡುಕ ಹುಟ್ಟಿಸಿದೆ.
TAGGED:Ballari