More

    ಕರಾವಳಿಯಲ್ಲಿ 400 ಮಂದಿಗೆ ಕರೊನಾ

    ಮಂಗಳೂರು: ಕರಾವಳಿಯಲ್ಲಿ ಶನಿವಾರ 400 ಕರೊನಾ ಪಾಸಿಟಿವ್ ಪ್ರಕರಣಗಳು (ದ.ಕ.ದಲ್ಲಿ 218, ಉಡುಪಿ 182) ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಮಂದಿ ಮೃತಪಟ್ಟರೆ, ಉಡುಪಿಯಲ್ಲಿ ಮೂವರು ಸೋಂಕಿತರು ಅಸುನೀಗಿದ್ದಾರೆ. ಎಲ್ಲರೂ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

    ದ.ಕ.ಜಿಲ್ಲೆಯಲ್ಲಿ ಸೋಂಕಿಗೆ ಒಳಗಾಗಿ ಆಸ್ಪತ್ರೆ, ನಿಗಾವಣಾ ಕೆಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 140 ಮಂದಿ ಗುಣವಾಗಿ ಬಿಡುಗಡೆಯಾಗಿದ್ದಾರೆ. ಹೊಸ ಸೋಂಕಿತರಲ್ಲಿ 70 ಮಂದಿಗೆ ಸೋಂಕು ಎಲ್ಲಿಂದ ಹರಡಿದೆ ಎನ್ನುವುದೇ ಪತ್ತೆಯಾಗಿಲ್ಲ. ಈ ಸಂಖ್ಯೆಯನ್ನು ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್‌ನಲ್ಲಿ ‘ಶೋಧ ಪ್ರಗತಿಯಲಿ’್ಲ ಎಂದು ತೋರಿಸಲಾಗಿದೆ. ಇದುವರೆಗೆ ಈ ಸಂಖ್ಯೆ 30 – 50ರ ಆಸುಪಾಸಿನಲ್ಲಿತ್ತು. ಉಳಿದಂತೆ ಪ್ರಾಥಮಿಕ ಸಂಪರ್ಕದಿಂದ 46, ಐಎಲ್‌ಐ 87, ಸಾರಿ 15. ಇಲ್ಲಿಯ ತನಕ ಜಿಲ್ಲೆಯಲ್ಲಿ 4,612 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 2127 ಮಂದಿ ಗುಣಮುಖರಾಗಿದ್ದಾರೆ. 2,370 ಸಕ್ರಿಯ ಪ್ರಕರಣಗಳು ಉಳಿದಿವೆ.

    ಉಡುಪಿಯಲ್ಲಿ 493 ನೆಗೆಟಿವ್: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧಪಟ್ಟ 493 ಪರೀಕ್ಷಾ ವರದಿಗಳು ನೆಗೆಟಿವ್ ಎಂದು ಬಂದಿದೆ. ಉಡುಪಿ ತಾಲೂಕು 99, ಕುಂದಾಪುರ ತಾಲೂಕು 29, ಕಾರ್ಕಳ ತಾಲೂಕಿನ 46 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಐದು ಮಂದಿ ಮಕ್ಕಳು, 109 ಮಂದಿ ಪುರುಷರು ಹಾಗೂ 68 ಜನ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3218ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರಲ್ಲಿ 2008ಮಂದಿ ಗು ಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರ 79 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
    1197 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 538 ಮಂದಿ ಹೋಂ ಐಸೊಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 592 ಮಂದಿಯ ಗಂಟಲದ್ರವ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 28 ಮಂದಿಯ ಪರೀಕ್ಷಾ ವರದಿಗಳು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಾವಿನ ಸಂಖ್ಯೆ ಏರಿಕೆ
    ಕರೊನಾ ಬಲಿ ತೆಗೆದುಕೊಂಡವರ ಒಟ್ಟು ಸಂಖ್ಯೆ ದ.ಕ. ಜಿಲ್ಲೆಯಲ್ಲಿ 115ಕ್ಕೆ ಏರಿದೆ.
    ಕಳೆದೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟವರ ಸಂಖ್ಯೆ 16. ಮಂಗಳೂರು ನಿವಾಸಿ 67, 78, 88, 68, 68, 75 ವರ್ಷದ ಪುರುಷರು, 76 ವರ್ಷದ ಮಹಿಳೆ, ಮಂಜೇಶ್ವರದ 53 ವರ್ಷದ ಮಹಿಳೆ ಕರೊನಾ ಸೋಂಕಿಗೆ ಒಳಗಾಗಿ ಶನಿವಾರ ಮೃತಪಟ್ಟವರು. ಮೃತಪಟ್ಟವರು ಎಲ್ಲರೂ ಬಹು ಅಂಗಾಂಗ ವೈಫಲ್ಯ, ಹೈಪರ್ ಟೆನ್ಶನ್, ಮಧುಮೇಹ, ಹೃದ್ರೋಗ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಇನ್ನೊಂದೆಡೆ, ಉಡುಪಿಯಲ್ಲಿ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತಿದ್ದ, ಕರೊನಾ ಪಾಸಿಟಿವ್ ಹೊಂದಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟರು. ಶಿವಮೊಗ್ಗ ಜಿಲ್ಲೆಯ 75 ವರ್ಷದ ಸೋಂಕಿತ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಜು.24ರಂದು ರಾತ್ರಿ ಮೃತಪಟ್ಟಿದ್ದಾರೆ. ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಗೆ ಸಂಬಂಧಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೊಬ್ಬರು ಕೊಲ್ಲೂರಿನ 45 ವರ್ಷದ ನಿವಾಸಿ, ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇವರನ್ನು ಪರೀಕ್ಷಿಸಿದಾಗ ಕೋವಿಡ್ ಸೋಂಕು ಇರುವುದು ದೃಢವಾಗಿತ್ತು. ಟಿಎಂಪೈ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 45 ವರ್ಷದ ವ್ಯಕ್ತಿಯೂ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.

    ಮೂವರು ಪೊಲೀಸ್ ಸಿಬ್ಬಂದಿಗೆ ದೃಢ
    ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿ 12 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 33, 29 ವರ್ಷದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಇಬ್ಬರು ಪುರುಷ ಸಿಬ್ಬಂದಿ, ಪುತ್ತೂರು ಡಿವೈಎಸ್‌ಪಿ ಕಚೇರಿಯ ಪೊಲೀಸ್ ಜೀಪ್ ಚಾಲಕನಿಗೆ ಸೋಂಕು ದೃಢಪಟ್ಟಿದೆ.

    ಕಾಸರಗೋಡಲ್ಲಿ 105 ಮಂದಿಗೆ ದೃಢ
    ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಸೋಂಕು ತಗುಲಿದೆ. ಕೇರಳದಲ್ಲಿ 1,103 ಮಂದಿಯಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಕರೊನಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕಾಸರಗೋಡು ಜಿಲ್ಲೆಯ ಮಹಿಳೆ ಸಹಿತ ಕೇರಳದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಕೇರಳದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 60ಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts