More

    2 ಲಕ್ಷ ರೂ. ಬೆಲೆ ಬಾಳುವ 40 ಕೆಜಿ ಕೂದಲಿನ ಕಳ್ಳತನ! ಐವರ ಬಂಧನ…

    ನವದೆಹಲಿ: ಮಂಗಳವಾರ ತಡರಾತ್ರಿ ರಾಜ್‌ಕೋಟ್ ನಗರದ ಹೊರವಲಯದಲ್ಲಿರುವ ಮೋರ್ಬಿ ಭಾಗದ ವ್ಯಾಪಾರಿ ಮತ್ತು ಆತನ ಸ್ನೇಹಿತನಿಂದ 2.08 ಲಕ್ಷ ರೂಪಾಯಿ ಮೌಲ್ಯದ 40 ಕೆಜಿ ಮಹಿಳೆಯರ ಉದುರಿದ ಕೂದಲನ್ನು ದರೋಡೆ ಮಾಡಿದ ಐದು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಆಪಾದಿತ ದರೋಡೆಕೋರರನ್ನು ರಾಜ್‌ಕೋಟ್‌ನ ಕೂದಲಿನ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಸರಕುಗಳನ್ನು ಮೋರ್ಬಿಯ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ.

    ಮಂಗಳವಾರ ರಾತ್ರಿ 8:55 ಕ್ಕೆ ಮಾದಾಪರ್ ಚೌಕಾಡಿ ಬಳಿಯ ಮೋರ್ಬಿ ಬೈಪಾಸ್ ರಸ್ತೆ ವಿಭಾಗದ ಅತಿಥಿ ದೇವೋಭವ ಹೋಟೆಲ್ ಬಳಿ ಈ ಘಟನೆ ಸಂಭವಿಸಿದ್ದು, ಮೋರ್ಬಿ ಪಟ್ಟಣದ ಬಳಿಯ ಜಂಬೂಡಿಯಾ ಗ್ರಾಮದ ಕೂದಲು ವ್ಯಾಪಾರಿ ಪುಷ್ಪೇಂದ್ರ ಸಿಂಗ್ ವಂಜಾರ (24) ಮತ್ತು ಅವರ ಸ್ನೇಹಿತ ನಾಗೇಶ್ವರ ಚೌಹಾಣ್, 2.08 ಲಕ್ಷ ಮೌಲ್ಯದ ಮಹಿಳೆಯರ ಉದುರಿದ 40 ಕೆಜಿ ಕೂದಲು ಖರೀದಿಸಿ ಮನೆಗೆ ಮರಳುತ್ತಿದ್ದರು. ವಂಜಾರಾ ಮತ್ತು ಚೌಹಾಣ್ ಎರಡು ದೊಡ್ಡ ಚೀಲಗಳಲ್ಲಿ 40 ಕೆಜಿ ಕೂದಲನ್ನು ಪ್ಯಾಕ್ ಮಾಡಿ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಆಟೋ ರಿಕ್ಷಾದಲ್ಲಿ ಮೂವರು ಬಂದಿದ್ದು ಅದರ ಚಾಲಕ ವ್ಯಾಪಾರಿ ಮತ್ತು ಅವರ ಸ್ನೇಹಿತನನ್ನು ತಮ್ಮ ಬೈಕ್ ನಿಲ್ಲಿಸುವಂತೆ ಒತ್ತಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಪೋರ್ಟ್ಸ್ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಕೂಡ ಸ್ಥಳಕ್ಕೆ ಬಂದಿದ್ದಾರೆ. ವಂಝಾರ ಮತ್ತು ಮೋಹನ್ ಅವರ ಕೂದಲಿನ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವಂತೆ ಬೈಕ್ ಸವಾರ ಇತರರಿಗೆ ಹೇಳಿದ್ದ ಎನ್ನಲಾಗಿದೆ. ಐವರು ದರೋಡೆಕೋರರು ರಾಜ್‌ಕೋಟ್ ನೋಂದಣಿ ಹೊಂದಿರುವ ಆಟೋ ರಿಕ್ಷಾಕ್ಕೆ ಕೂದಲಿನ ಚೀಲಗಳನ್ನು ತುಂಬಿಸಿ ನಂತರ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಪ್ರದೇಶ ಮೂಲದ ವಂಝಾರ ಅವರು ಕಳೆದ ಕೆಲವು ವರ್ಷಗಳಿಂದ ಜಂಬೂಡಿಯಾದಲ್ಲಿ ನೆಲೆಸಿದ್ದಾರೆ. ಶೀಘ್ರದಲ್ಲೇ ತುರ್ತು ಸಂಖ್ಯೆಗೆ ಡಯಲ್ ಮಾಡಿ ಪೊಲೀಸರ ಸಹಾಯವನ್ನು ಕೋರಿದ್ದಾರೆ. ದರೋಡೆಕೋರರು ಚಾಲನೆ ಮಾಡಿಕೊಂಡು ಬಂದ ಆಟೋ ರಿಕ್ಷಾದ ಪೊಲೀಸ್ ನೋಂದಣಿ ಸಂಖ್ಯೆಯನ್ನು ನೀಡಿದ ಅವರು ಬೈಕ್‌ಗೆ ಯಾವುದೇ ವಾಹನ ನೋಂದಣಿ ಫಲಕ ಇಲ್ಲ ಎಂದು ಹೇಳಿದರು.

    ವಂಜಾರಾ ಅವರ ದೂರಿನ ಆಧಾರದ ಮೇಲೆ ರಾಜ್‌ಕೋಟ್‌ನ ಗಾಂಧಿಗ್ರಾಮ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಕೆಲವೇ ಗಂಟೆಗಳಲ್ಲಿ, ರಾಜ್‌ಕೋಟ್ ನಗರ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿ 40 ಕೆಜಿ ತೂಕದ ಕೂದಲನ್ನು ವಶಪಡಿಸಿಕೊಂಡರು.

    ರಾಜ್‌ಕೋಟ್‌ನಲ್ಲಿ ಮಂಗಳವಾರ ವಂಜಾರಾ ಅವರಿಗೆ ಕೂದಲು ಮಾರಾಟ ಮಾಡಿದ ಕೇಶ ವ್ಯಾಪಾರಿಯೊಬ್ಬ ದರೋಡೆಯ ಮಾಸ್ಟರ್‌ಮೈಂಡ್ ಎಂದು ಗಾಂಧಿಗ್ರಾಮ್ ಪೊಲೀಸ್‌ನ ಪ್ರಭಾರ ಅಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಎಂಜಿ ವಾಸವ ಹೇಳಿದ್ದಾರೆ.

    “ಕೂದಲನ್ನು ವಂಜಾರಾಗೆ ಮಾರಾಟ ಮಾಡಿದ ನಂತರ, ರಾಜ್‌ಕೋಟ್ ವ್ಯಾಪಾರಿಯು ಮೋರ್ಬಿ ವ್ಯಾಪಾರಿಯ ಕೂದಲು ರವಾನೆಯನ್ನು ದೋಚುವ ಗುತ್ತಿಗೆಯನ್ನು ವ್ಯಕ್ತಿಯೊಬ್ಬನಿಗೆ ನೀಡಿದ್ದಾನೆ. ರಾಜ್‌ಕೋಟ್ ವ್ಯಾಪಾರಿಯು ಮೋರ್ಬಿ ವ್ಯಾಪಾರಿಯ ಕೂದಲು ಸರಕನ್ನು ದೋಚಲು ಮತ್ತು ಅದನ್ನು ಅವನಿಗೆ ತಲುಪಿಸಲು ಯಶಸ್ವಿಯಾದರೆ ಆ ವ್ಯಕ್ತಿಗೆ 50,000 ರೂ ನೀಡುವುದಾಗಿ ಭರವಸೆ ನೀಡಿದ್ದ. ಸುಪಾರಿ ಪಡೆದ ವ್ಯಕ್ತಿ, ಇತರ ನಾಲ್ವರು ವ್ಯಕ್ತಿಗಳನ್ನು ಕಳ್ಳತನಕ್ಕೆ ತೊಡಗಿಸಿಕೊಂಡಿದ್ದು ಬಂದ ಹಣವನ್ನು ಹಂಚಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರು” ಎಂದು ವಾಸವ ತಿಳಿಸಿದರು. “ರಾಜ್‌ಕೋಟ್ ಮೂಲದ ಸುಪಾರಿ ಕೊಟ್ಟ ಕೂದಲು ವ್ಯಾಪಾರಿಯನ್ನೂ ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆಯಲ್ಲಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts