More

    ನೀವು 4 ವರ್ಷದ ಹಿಂದೆ 1 ಲಕ್ಷ ರೂ. ಹೂಡಿದ್ದರೆ ಈಗ 20 ಲಕ್ಷ ರೂ.ಗೆ ಏರಿಕೆ: ರೈಲ್ವೆ ಷೇರು ಒಂದೇ ದಿನದಲ್ಲಿ ಶೇ. 7.54 ಹೆಚ್ಚಳ

    ಮುಂಬೈ: ಸಾರ್ವಜನಿಕ ಉದ್ಯಮವಾಗಿರುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ನವರತ್ನ ಕಂಪನಿಯಾಗಿದೆ. ಈ ಕಂಪನಿಯ ಷೇರುಗಳ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬುಧವಾರದಂದು (ಜ. 17) ಈ ರೈಲ್ವೆ ಕಂಪನಿಯ ಷೇರು ಬೆಲೆಯು ಶೇಕಡಾ 7.54ರಷ್ಟು ಏರಿಕೆಯಾಗಿದೆ. ಅಂದರೆ, 16.85 ರೂಪಾಯಿ ಹೆಚ್ಚಳವಾಗಿ 240 ರೂಪಾಯಿಗೆ ತಲುಪಿದೆ.

    ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಈಗ ಮಧ್ಯಪ್ರದೇಶದೊಳಗೆ ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಗುತ್ತಿಗೆ ಪಡೆದ ಹಿನ್ನೆಲೆಯಲ್ಲಿ ಈ ಷೇರುಗಳ ಬೆಲೆಗಳು ಏರಿಕೆ ಕಂಡಿವೆ. ರೈಲು ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳ ಅಭಿವೃದ್ಧಿ, ಹಣಕಾಸು ಮತ್ತು ಯೋಜನೆಗಳ ಅನುಷ್ಠಾನ ಕಾರ್ಯವನ್ನು ಈ ಕಂಪನಿ ಮಾಡುತ್ತದೆ.

    ಮಧ್ಯಪ್ರದೇಶದೊಳಗೆ ರೈಲ್ವೆಯಿಂದ ಬಂದಿರುವ ಈ ಗುತ್ತಿಗೆ ಆದೇಶವು 251 ಕೋಟಿ ರೂಪಾಯಿ ಮೊತ್ತದ್ದಾಗಿದೆ. ಮಧ್ಯಪ್ರದೇಶ ಕೇಂದ್ರ ಪ್ರದೇಶ ವಿದ್ಯುತ್ ವಿತರಣಾ ಕಂಪನಿಯಿಂದ ಈ ಗುತ್ತಿಗೆ ದೊರೆತಿದ್ದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ರೈಲ್​ ವಿಕಾಸ್​ ನಿಗಮ್​ ಲಿಮಿಟೆಡ್​ ನಿರ್ಧರಿಸಿದೆ.

    ಈ ಕಂಪನಿಯ ಷೇರುಗಳ ಬೆಲೆಯು ಮಾರ್ಚ್ 27, 2020ರಂದು ಕೇವಲ 12.80 ರೂಪಾಯಿ ಇತ್ತು. ಈಗ 240 ರೂಪಾಯಿಗೆ ಏರಿಕೆ ಕಂಡಿದೆ. ಅಂದರೆ, ನಾಲ್ಕು ವರ್ಷಗಳಲ್ಲಿ ಅಂದಾಜು 2000% ಹೆಚ್ಚಳ ಕಂಡಿದೆ. ನೀವು 4 ವರ್ಷಗಳ ಹಿಂದೆ ಈ ಷೇರಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಅದು ಈಗ 20 ಲಕ್ಷ ರೂಪಾಯಿ ಆಗುತ್ತಿತ್ತು.

    ಕಳೆದ ಮೂರು ವರ್ಷಗಳಲ್ಲಿ ಈ ಸಂಸ್ಥೆಯ ಷೇರುಗಳ ಬೆಲೆಯು 29 ರೂಪಾಯಿಯಿಂದ 240 ರೂಪಾಯಿ ಏರಿದೆ. ಅಲ್ಲದೆ, ಕಳೆದ 11 ತಿಂಗಳುಗಳಲ್ಲಿ ಈ ಬೆಲೆಯು ಶೇಕಡಾ 300% ರಷ್ಟು ಹೆಚ್ಚಳವಾಗಿದೆ. ಫೆಬ್ರವರಿ 28, 2023 ರಂದು ಈ ಸಂಸ್ಥೆಯ ಷೇರು 57.50 ರೂ. ಮಾತ್ರ ಇತ್ತು. ಕಳೆದ ಆರು ತಿಂಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ 95% ರಷ್ಟು ಏರಿಕೆಯಾಗಿದೆ.

    24.01.2003 ರಂದು ಈ ಕಂಪನಿಯನ್ನು ಸ್ಥಾಪಿಸಲಾಯಿತು. ಮಾರ್ಚ್ 2005 ರಲ್ಲಿ ಮಂಡಳಿಯ ಎಲ್ಲಾ ನಿರ್ದೇಶಕರ ನೇಮಕಾತಿಯ ನಂತರ ಈ ಕಂಪನಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು.

    ಇದು ಶಿಪ್ಪಿಂಗ್ ಸಚಿವಾಲಯದ ಅಡಿಯಲ್ಲಿ 12 ಪ್ರಮುಖ ಬಂದರುಗಳನ್ನು ಕೂಡ ಒಳಗೊಂಡಿದೆ. ಈ ಕಂಪನಿಯು 6,139 ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ ಮತ್ತು ಚೆನ್ನೈ, ದೆಹಲಿ ಅಮೃತಸರ, ದೆಹಲಿ ಕೋಲ್ಕತ್ತಾ ಮತ್ತು ದೆಹಲಿ-ಮುಂಬೈ ನಡುವೆ ಹಾದು ಹೋಗುವ ಎಚ್​ಎಸ್​ಆರ್​ ಕಾರಿಡಾರ್‌ಗಳ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು RVNL/HSRC ಗೆ ವಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts