More

    ಈ ಷೇರಿನಲ್ಲಿ ನೀವು 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ 5 ವರ್ಷಗಳಲ್ಲಿ 90 ಲಕ್ಷ ರೂ; 2 ವರ್ಷಗಳಲ್ಲಿ 22 ಲಕ್ಷ ರೂ.ಗೆ ಏರಿಕೆ!!

    ಮುಂಬೈ: ಎಂಕೆ ಎಕ್ಸಿಮ್ (ಇಂಡಿಯಾ) ಲಿಮಿಟೆಡ್ (MK Exim (India) Ltd) ತನ್ನ ಹೂಡಿಕೆದಾರರಿಗೆ ಮತ್ತೆ ಬೋನಸ್ ಷೇರುಗಳನ್ನು ವಿತರಿಸಲು ನಿರ್ಧರಿಸಿದೆ. ಪ್ರತಿ 2 ಷೇರುಗಳಿಗೆ ಅರ್ಹ ಹೂಡಿಕೆದಾರರಿಗೆ 1 ಬೋನಸ್ ಷೇರನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ.

    ಇದಕ್ಕಾಗಿ ದಿನಾಂಕವನ್ನೂ ನಿಗದಿಪಡಿಸಲಾಗಿದೆ. ಕಂಪನಿಯು ಬುಧವಾರ ಎಕ್ಸ್-ಬೋನಸ್ ಸ್ಟಾಕ್ ಆಗಿ ವಹಿವಾಟು ನಡೆಸಿದೆ.

    ಕಳೆದ 5 ವರ್ಷಗಳಲ್ಲಿ, MK Exim (India) Ltd ನ ಷೇರು ಇದುವರೆಗೆ 8961.80% ಲಾಭವನ್ನು ನೀಡಿದೆ. ಅಂದರೆ, ಕಳೆದ ಐದು ವರ್ಷಗಳವರೆಗೆ ಈ ಷೇರಿನಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು ಈಗ 90 ಲಕ್ಷ ರೂಪಾಯಿ ಆಗುತ್ತಿತ್ತು. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ 2,245.92% ಲಾಭವನ್ನು ಈ ಕಂಪನಿಯ ಷೇರುಗಳು ನೀಡಿವೆ. ಅಂದರೆ, 3 ವರ್ಷಗಳ ಹಿಂದೆ ನೀವು ಇದರಲ್ಲಿ ಹೂಡಿಕೆ ಮಾಡಿದ್ದರೆ ಅದು ಈಗ 22 ಲಕ್ಷ ರೂಪಾಯಿ ಆಗುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಈ ಕಂಪನಿಯ ಷೇರುಗಳು 110.71%ರಷ್ಟು ಏರಿಕೆ ಕಂಡಿವೆ.

    ಈಗ ಈ ಕಂಪನಿಯು 2 ಷೇರುಗಳ ಮೇಲೆ 1 ಷೇರು ಬೋನಸ್ ನೀಡಲಿದೆ. ಷೇರು ವಿನಿಮಯ ಕೇಂದ್ರಗಳಿಗೆ ನೀಡಿದ ಮಾಹಿತಿಯಲ್ಲಿ, ಕಂಪನಿಯು 10 ರೂಪಾಯಿ ಮುಖಬೆಲೆಯ 2 ಷೇರುಗಳ ಮೇಲೆ 1 ಷೇರಿನ ಬೋನಸ್ ನೀಡಲಾಗುವುದು ಎಂದು ಹೇಳಿದೆ.

    ಎಂಕೆ ಎಕ್ಸಿಮ್ (ಇಂಡಿಯಾ) ಲಿಮಿಟೆಡ್ ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿರುವುದು ಇದೇ ಮೊದಲಲ್ಲ. ಬಿಎಸ್​ಇಯಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕಂಪನಿಯು 2022 ರಲ್ಲಿ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡಿದೆ.

    ಬೋನಸ್ ಷೇರುಗಳ ಘೋಷಣೆಯಿಂದಾಗಿ, ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇಕಡಾ 46 ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಿಂದ ಈ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಇದುವರೆಗೆ ಶೇ.72 ಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ.

    ಕಳೆದ ಒಂದು ವರ್ಷದಲ್ಲಿ, ಕಂಪನಿಯು 100 ಪ್ರತಿಶತಕ್ಕಿಂತ ಹೆಚ್ಚು ಆದಾಯವನ್ನು ನೀಡುವ ಮೂಲಕ ಈ ಸ್ಟಾಕ್ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಹೊರಹೊಮ್ಮಿದೆ.

    ಈ ಕಂಪನಿಯ ಷೇರು ಬೆಲೆಯು 52 ವಾರಗಳ ಗರಿಷ್ಠವು ಪ್ರತಿ ಷೇರಿಗೆ 180 ಆಗಿದ್ದರೆ, 52 ವಾರಗಳ ಕನಿಷ್ಠ ಪ್ರತಿ ಷೇರಿಗೆ 72.50 ಆಗಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 434 ಕೋಟಿ ರೂಪಾಯಿ ಇದೆ.

    ಎಂ.ಕೆ. ಎಕ್ಸಿಮ್ (ಇಂಡಿಯಾ) ಲಿಮಿಟೆಡ್ ಎಂಬುದು ಭಾರತೀಯ ಮೂಲದ ಕಂಪನಿಯಾಗಿದೆ, ಇದು ಬಟ್ಟೆಗಳ ರಫ್ತು ಮತ್ತು ವೈಯಕ್ತಿಕ ನೈರ್ಮಲ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಒಳಗೊಂಡಿರುವ ಸೌಂದರ್ಯವರ್ಧಕಗಳ ವಿತರಣೆಯಲ್ಲಿ ಭಾರತದಾದ್ಯಂತ ತೊಡಗಿಸಿಕೊಂಡಿದೆ. ಇದು ಪಾಲಿಯೆಸ್ಟರ್ ವಿಸ್ಕೋಸ್, ವರ್ಸ್ಟೆಡ್ ಮತ್ತು ಪಾಲಿಯೆಸ್ಟರ್ ಸೂಟಿಂಗ್ ಅನ್ನು ಒಳಗೊಂಡಿರುವ ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts