More

    4 ಜನರಿಗೆ ಕರೊನಾ ಸೋಂಕು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 4 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 76ಕ್ಕೇರಿದ್ದು, 73 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ 30ಕ್ಕೇರಿದೆ.

    ಈ ಹಿಂದೆ ಸೋಂಕು ದೃಢಪಟ್ಟ ಮಡಿಕೇರಿಯ ಆಸ್ಪತ್ರೆ ವಸತಿಗೃಹದಲ್ಲಿ ವಾಸಿಸುತ್ತಿದ್ದ ಮೂರ್ನಾಡಿನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 49 ವರ್ಷದ ಆರೋಗ್ಯ ಕಾರ್ಯಕರ್ತನಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ವಾಸವಿರುವ 27 ವರ್ಷದ ಆರೋಗ್ಯಕರ್ತನಿಗೆ ಸೋಂಕು ಪತ್ತೆಯಾಗಿದೆ.

    ಮಡಿಕೇರಿಯ ಭಗವತಿ ನಗರದ 24 ವರ್ಷದ ಆರೋಗ್ಯಕರ್ತ ಹಾಗೂ ಜ್ವರದ ಲಕ್ಷಣವಿದ್ದ ವಿರಾಜಪೇಟೆ ಶಾಂತಿನಗರದ 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಮಡಿಕೇರಿಯ ಆಸ್ಪತ್ರೆ ವಸತಿಗೃಹ, ಭಗವತಿ ನಗರ, ಮಹದೇವಪೇಟೆ ಹಾಗೂ ಶಾಂತಿನಗರದಲ್ಲಿ ನಿಯಂತ್ರಿತ ಪ್ರದೇಶ ತೆರೆಯಲಾಗಿದೆ.

    ಪ್ರಯೋಗಾಲಯಕ್ಕೆ ಬಾಗಿಲು: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಗಳ ಕೋವಿಡ್ ಪರೀಕ್ಷೆ ಪ್ರಯೋಗಾಲಯವನ್ನು 2 ದಿನ ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಪ್ರಯೋಗಾಲಯದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ.

    ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಈ ಹಿಂದೆ ಸೋಂಕು ದೃಢಪಟ್ಟ ನಾಲ್ವರು ವೈದ್ಯರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇವರಿಬ್ಬರು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧೀನದ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts