More

    ಸಂಸದರ ಮುತ್ತಿಗೆ, ಕಾರು ಜಖಂ : ಕಿಸಾನ್ ಯೂನಿಯನ್​ ಸದಸ್ಯರ ಬಂಧನ

    ಕುರುಕ್ಷೇತ್ರ : ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಸದಸ್ಯರಾದ ನಾಯಾಬ್ ಸಿಂಗ್ ಅವರನ್ನು ಎಳೆದಾಡಿ, ಕಾರಿನ ಗಾಜು ಒಡೆದು ಗಲಭೆ ಎಬ್ಬಿಸಿರುವ ಘಟನೆ ಹರಿಯಾಣದಿಂದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್​ ಯೂನಿಯನ್(ಬಿಕೆಯು)ನ ನಾಲ್ಕು ಸದಸ್ಯರನ್ನು ಬಂಧಿಸಿರುವ ಪೊಲೀಸರು, ಗಲಭೆ, ಕಾರು ಜಖಂ ಮತ್ತು ಕೊಲೆಯ ಯತ್ನದ ಕೇಸು ದಾಖಲಿಸಿದ್ದಾರೆ.

    ನಿನ್ನೆ ಸಂಸದ ನಾಯಾಬ್ ಸಿಂಗ್ ಅವರು ವೈಯಕ್ತಿಕ ಭೇಟಿಗಾಗಿ ಕುರುಕ್ಷೇತ್ರದ ಮಾಜ್ರಿ ಮೊಹಲ್ಲಾಗೆ ಹೋಗಿದ್ದಾಗ ಸ್ಥಳದಲ್ಲಿ ಜಮಾಯಿಸಿದ ರೈತ ಚಳುವಳಿಕಾರರು, ಸಿಂಗ್​ ಅವರು ಕಾರಿನೊಳಗೆ ಕೂತಾಗ ಕಪ್ಪು ಬಾವುಟ ತೋರಿಸುತ್ತಾ ವಾಹನವನ್ನು ಸುತ್ತುವರೆದರು. ಘೋಷಣೆಗಳನ್ನು ಕೂಗುತ್ತಾ ಸಿಂಗ್​ರನ್ನು ಹಿಡಿದು ಹೊರಗೆಳೆಯಲು ಪ್ರಯತ್ನಿಸಿದರು. ಕೆಲವರು ಕಾರಿನ ಬಾನೆಟ್ ಮೇಲೆ ಕೂತರೆ ಮತ್ತೆ ಕೆಲವು ಹಿಂಗಡೆಯ ಗಾಜನ್ನು ಒಡೆದರು. ಸಿಂಗ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದು, ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು ಎಂದು ಎಫ್​ಐಆರ್​ ನಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಕರೊನಾ ನಿಯಮ ಉಲ್ಲಂಘಿಸಿ ಎಎಪಿ ಪ್ರತಿಭಟನೆ ; ‘ಪ್ರಧಾನಿ ಮೋದಿ ಮಾಡಿದ್ದನ್ನೇ ಮಾಡುತ್ತಿದ್ದೇವೆ’ ಎಂದ ನಾಯಕ !

    ಈ ಬಗ್ಗೆ ಮೊಕದ್ದಮೆ ದಾಖಲಿಸಿದ ಶಹಬಾದ್ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಎಫ್​ಐಆರ್​ನಲ್ಲಿ ಇನ್ನೂ ಹನ್ನೊಂದು ಜನರನ್ನು ಹೆಸರಿಸಲಾಗಿದ್ದು, ಅವರ ಗುರುತು ಸಿಕ್ಕಿಲ್ಲ ಎನ್ನಲಾಗಿದೆ. ಬಂಧಿತರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಈ ಬಗ್ಗೆ ಮತ್ತೆ ಪ್ರತಿಭಟನೆ ಹಮ್ಮಿಕೊಂಡಿರುವ ರೈತರು, ಕುರುಕ್ಷೇತ್ರದ ಶಹಬಾದ್ ಪೊಲೀಸ್​ ಠಾಣೆಯ ಮುಂದೆ ಇಂದು ಧರಣಿ ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್​ಡೌನ್ ವಿಧಿಸಿ : ಐಎಂಎ

    VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !

    ‘ನಾನು ಬಂಗಾಳಿ ಮಾತನಾಡುವುದರ ಬಗ್ಗೆಯೂ ದೀದಿ ಸಿಟ್ಟಾಗ್ತಿದ್ದಾರೆ’ : ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts