More

    ಶಿಕಾರಿಪುರದಲ್ಲಿ ಚುನಾವಣೆಗೆ 840 ಸಿಬ್ಬಂದಿ

    ಶಿಕಾರಿಪುರ: ಗ್ರಾಪಂ ಮತದಾನ ಪ್ರÅಯೆ ಸುಗಮವಾಗಿ ನಡೆಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿವೆ.

    ತಾಲೂಕಿನ ಕ್ರಿಟಿಕಲ್ ಮತ್ತು ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನು ಗುರá-ತಿಸಲಾಗಿದ್ದು ಮತದಾನ ಮುನ್ನಾ ದಿನ ಅತಿ ಹೆಚ್ಚು ಕಾನೂನು ಬಾಹಿರಚಟುವಟಿಕೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ತಾಲೂಕು ಆಡಳಿತ ಅತಿ ಹೆಚ್ಚು ನಿಗಾವಹಿಸಿದೆ.

    ಚುನಾವಣೆ ಕುರಿತು ಮಾತನಾಡಿದ ತಹಸೀಲ್ದಾರ್ ಎಂ.ಪಿ.ಕವಿರಾಜ್, ಈ ಚುನಾವಣೆಯಲ್ಲಿ 202 ಮತಗಟ್ಟೆಗಳಿದ್ದು ಅದರಲ್ಲಿ 4 ಮತಕ್ಷೇತ್ರಗಳಾದ ಗೊಗ್ಗ ಗ್ರಾಪಂ ವ್ಯಾಪ್ತಿಯ ಗೊಗ್ಗ 1, ಮಂಚಿಕೊಪ್ಪ ಗ್ರಾಪಂ ವ್ಯಾಪ್ತಿಯ ಮುಗಳಿಕೊಪ್ಪ, ತಾಳಗುಂದ ಗ್ರಾಪಂ ವ್ಯಾಪ್ತಿಯ ಮಾಳಗೊಂಡನಕೊಪ್ಪ ಮತ್ತು ಚಿಕ್ಕಮಾಗಡಿ ಗ್ರಾಪಂ ವ್ಯಾಪ್ತಿಯ ಕೊಳಗಿ ತಾಂಡಾದಲ್ಲಿ ಅವಿರೋಧ ಆ್ಕಯೆಾಗಿದ್ದು ಇಲ್ಲಿ ಚುನಾವಣೆ ನಡೆಯುವುದಿಲ್ಲ ಎಂದರು.

    ತಾಲೂಕಿನಲ್ಲಿ ಒಟ್ಟು 25 ಅತಿ ಸೂಕ್ಷ್ಮಮತಗಟ್ಟೆ ಗá-ರá-ತಿಸಲಾಗಿದೆ. ಜತೆಗೆ ಚುನಾವಣೆ ಕಾರ್ಯಕ್ಕೆ 840 ಸಿಬ್ಬಂದಿ ನಿಯೋಜಿಸಲಾಗಿದ್ದು 21 ಸೆಕ್ಟರ್ ಆಫೀಸರ್​ಗಳನ್ನು ನೇಮಕ ಮಾಡಲಾಗಿದೆ. ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ, ಲೋಪ ದೋಷಗಳ ನಿವಾರಣೆ, ಸ್ಥಳೀಯ ಚುನಾವಣಾ ಸಿಬ್ಬಂದಿಗೆ ಸಲಹೆ, ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

    ಸಿಪಿಐ ಗುರುರಾಜ್ ಮೈಲಾರ್ ಮಾತನಾಡಿ, ಡಿವೈಎಸ್ಪಿ ಶ್ರೀನಿವಾಸುಲು ಮಾರ್ಗದರ್ಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆ ಸನ್ನದ್ಧವಾಗಿದೆ. ಚುನಾವಣಾ ಕಾರ್ಯಕ್ಕಾಗಿ 1 ಡಿವೈಎಸ್ಪಿ, 2 ಇನ್​ಸ್ಪೆಕ್ಟರ್, 4 ಸಬ್ ಇನ್​ಸ್ಪೆಕ್ಟರ್, 15 ಎಎಸ್​ಐ ಹಾಗೂ 250ಕ್ಕೂ ಹೆಚ್ಚು ಪೊಲೀಸ್ ಹಾಗೂ ಹೋಮ್ಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಶಿರಾಳಕೊಪ್ಪ ಮತ್ತು ಗ್ರಾಮಾಂತರ ಪ್ರದೇಶಗಳ ಕೆಲವು ಮತ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ನಿಗಾ ಇಡಲಾಗಿದೆ ಎಂದರು.

    ತಾಲೂಕಿನ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ತಾಲೂಕು ಆಡಳಿತ ಈಗಾಗಲೇ ಹೆಚ್ಚಿನ ಭದ್ರತೆ ನೀಡಲು ಮುಂದಾಗಿದೆ. ಶಿರಾಳಕೊಪ್ಪ ಭಾಗದಲ್ಲಿ ಅತಿ ಹೆಚ್ಚು ನಿಗಾವಹಿಸಲಾಗಿದೆ. ಪ್ರತಿ ಹೋಬಳಿಯಲ್ಲೂ ಅಧಿಕಾರಿಗಳು ಗಮನಹರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts