More

    4 ಕೋಟಿ ಮೊತ್ತದ ಹೆಬ್ಬಾರ ರೇಷನ್ ಕಿಟ್

    ಶಿರಸಿ: ಲಾಕ್​ಡೌನ್ ಸಂದರ್ಭದಲ್ಲಿ ವಿಧಾನಸಭೆ ಕ್ಷೇತ್ರದ ಬಡವರು, ಕೂಲಿ ಕಾರ್ವಿುಕರ ಸಮಸ್ಯೆಗೆ ಸ್ಪಂದಿಸಲು ಸ್ವತಃ ಕಾರ್ವಿುಕ ಖಾತೆ ಸಚಿವ ಶಿವರಾಮ ಹೆಬ್ಬಾರ ಅವರು ‘ಹೆಬ್ಬಾರ ರೇಷನ್ ಕಿಟ್’ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    ಯಲ್ಲಾಪುರ- ಮುಂಡಗೋಡ- ಶಿರಸಿಯ ಬನವಾಸಿ ಹೋಬಳಿಯನ್ನು ಒಳಗೊಂಡ ಯಲ್ಲಾಪುರ ಕ್ಷೇತ್ರದ ವಿವಿಧೆಡೆ ಶನಿವಾರ ಹೆಬ್ಬಾರ ಅವರು ರೇಷನ್ ಕಿಟ್ ವಿತರಿಸಿದರು.

    ಈ ವೇಳೆ ಮಾತನಾಡಿದ ಅವರು, 51,168 ಬಿಪಿಎಲ್ ಹಾಗೂ 2760 ಅಂತ್ಯೋದಯ ಹಾಗೂ ಮಂಜೂರಿಗೆ ಬಾಕಿ ಇರುವ 500 ಬಿಪಿಎಲ್ ಅರ್ಜಿ ಸೇರಿ ಒಟ್ಟು 54428 ಕುಟುಂಬಕ್ಕೆ ಅಂದಾಜು 4 ಕೋಟಿ ರೂ. ಮೊತ್ತದ ದಿನಸಿ ಕಿಟ್ ವಿತರಿಸಲಾಗುತ್ತದೆ. ಲಾಕ್​ಡೌನ್ ಸಂಕಷ್ಟದ ದಿನದಲ್ಲಿ ಕ್ಷೇತ್ರದ ಮತದಾರರಿಗೆ ಸ್ಪಂದಿಸಲು ನಿರ್ಧರಿಸಲಾಗಿದೆ ಎಂದರು.

    ಬನವಾಸಿ ಭಾಗದ ಅನಾನಸ್ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಬೆಂಗಳೂರು ಸೇರಿ ಉತ್ತರ ಭಾರತದ ರಾಜ್ಯಗಳಿಗೆ ಅನಾನಸ್ ರಪ್ತು ಮಾಡುತ್ತಿದ್ದರೂ ಸಾಕಷ್ಟು ಪ್ರಮಾಣದ ಅನಾನಸ್ ಉಳಿಯುತ್ತಿದೆ. ಹೀಗಾಗಿ ಯೋಗ್ಯ ದರಕ್ಕೆ 250 ಟನ್ ಅನಾನಸ್ ಹಣ್ಣನ್ನು ರೈತರಿಂದ ಸ್ವತಃ ಖರೀದಿಸಿದ್ದು, ಕ್ಷೇತ್ರದ ಮತದಾರರು ಹಾಗೂ ಅರ್ಹ ಫಲಾನುಭವಿಗಳ ಜತೆ ರಾಜ್ಯದ ವಿವಿಧ ಭಾಗದ ಕಾರ್ವಿುಕರಿಗೆ ನೀಡುವ ರೇಷನ್ ಕಿಟ್ ಜತೆ 2 ಹಣನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

    ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ವಿನೋದ ಪ್ರಭು, ಭಾಸ್ಕರ ನಾರ್ವೆಕರ, ದ್ಯಾಮಣ್ಣ ದೊಡ್ಮನಿ, ಚಂದ್ರು ದೇವಾಡಿಗ, ಉಷಾ ಹೆಗಡೆ, ಮಂಗಳಾ ನಾಯ್ಕ, ಎಸ್.ಎನ್. ಭಟ್ಟ, ಜಿ.ಕೆ. ಹೆಗಡೆ ಇದ್ದರು.

    ಕಿಟ್​ನಲ್ಲಿ ಏನೇನಿದೆ: 4 ಕೆಜಿ ಜವಾರಿ ಜೋಳ, 2 ಕೆಜಿ ಗೋಧಿ ಹಿಟ್ಟು, ತಲಾ ಒಂದೊಂದು ಕೆಜಿ ಅವಲಕ್ಕಿ, ಸಕ್ಕರೆ, ಬಟಾಟೆ, ಈರುಳ್ಳಿ, ಉಪ್ಪು, ಒಂದು ಲೀಟರ್ ಎಣ್ಣೆ, ತಲಾ 100 ಗ್ರಾಂ ಮೆಣಸಿನ ಪೌಡರ್, ಟೀ ಪೌಡರ್, ಅರಿಶಿಣ ಪುಡಿ ಹಾಗೂ ಬನವಾಸಿಯ ರೈತರಿಂದ ಖರೀದಿಸಿದ ಎರಡು ಅನಾನಸ್ ಹಣ್ಣುಗಳನ್ನು ಒಳಗೊಂಡಿದೆ.

    ಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಲು ಈ ಕಿಟ್ ವಿತರಣೆಗೆ ನಿರ್ಣಯಿಸಲಾಗಿದೆ. ಪಕ್ಷ, ಪಂಗಡ, ಜಾತಿ- ಧರ್ಮ ನೋಡದೆ ಕ್ಷೇತ್ರದ ಮತದಾರರು ನನಗೆ ಮತ ನೀಡಿದ್ದು, ಅವರ ಸಮಸ್ಯೆ ನೀಗಿಸಲು ಕ್ರಮವಹಿಸಲಾಗಿದೆ.
    | ಶಿವರಾಮ ಹೆಬ್ಬಾರ, ಸಕ್ಕರೆ ಹಾಗೂ ಕಾರ್ವಿುಕ ಖಾತೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts