More

    38 ಹೆಕ್ಟೇರ್ ಬೆಳೆ, ಐದು ಮನೆಗೆ ಹಾನಿ

    ರಟ್ಟಿಹಳ್ಳಿ: ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆ-ಗಾಳಿಯಿಂದ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು, ಮನೆಗಳು ಹಾನಿಯಾಗಿವೆ. ಅದರಲ್ಲೂ ಬುಧವಾರ ರಾತ್ರಿ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
    ಪಟ್ಟಣದ ಶಿರಗಂಬಿ ರಸ್ತೆಯ ಹನುಮಂತಪ್ಪ ಸಾಳುಂಕೆ ಅವರ ಹೊಲದಲ್ಲಿ 20 ತೆಂಗು, 25 ನುಗ್ಗೆ ಮರಗಳು ಬಿದ್ದಿವೆ. ತಾಲೂಕಿನ ಮೈದೂರ, ಗುಡ್ಡದ ಮಾದಪುರ, ಕುಡುಪಲಿ, ನೇಸ್ವಿ, ಕಮಲಾಪುರ, ಬಡಾಸಂಗಾಪುರ, ಕಿರಗೇರಿ ಗ್ರಾಮಗಳಲ್ಲಿ ಅಡಕೆ, ಎಲೆಬಳ್ಳಿ, ತೆಂಗು, ಬಾಳೆ ಸೇರಿ ಅಂದಾಜು 38 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ನೆಲಕ್ಕುರಳಿವೆ.
    ಕೋಡಮಗ್ಗಿ ಗ್ರಾಮದ ಕುಸುಮಾ ನಿಂಗಪ್ಪ ಮೈಲಾರ, ರಟ್ಟಿಹಳ್ಳಿ ಪಟ್ಟಣದ ಸೌಭಾಗ್ಯ ಅರವಿಂದ ಕುಲಕರ್ಣಿ, ಶಿರಗಂಬಿ ಗ್ರಾಮದ ಮಲ್ಲಿಕಯ್ಯ ಅಂಗಡಿ, ಕಿರಗೇರಿ ಗ್ರಾಮದ ಯಲ್ಲಪ್ಪ ಆಡಿನವರ ಸೇರಿ 4 ಮನೆಗಳಿಗೆ ಹಾಗೂ ಯಡಗೋಡು ಗ್ರಾಮದ ಯಶೋದಾ ಅವರ ದನದ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ.

    ರಟ್ಟಿಹಳ್ಳಿ ತಾಲೂಕಿನಲ್ಲಿ ಮಳೆ-ಗಾಳಿಯಿಂದ ಈಗಾಗಲೇ 38 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ರಟ್ಟಿಹಳ್ಳಿ ಹಾಗೂ ವಿವಿಧ ಗ್ರಾಮ ಸೇರಿ 5 ಮನೆಗಳಿಗೆ ಹಾನಿಯಾಗಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
    | ಕೆ. ಗುರುಬಸವರಾಜ, ರಟ್ಟಿಹಳ್ಳಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts