More

    ಈ ಐಪಿಒಗೆ 364 ಪಟ್ಟು ಚಂದಾದಾರಿಕೆ: ಗ್ರೇ ಮಾರ್ಕೆಟ್‌ನಲ್ಲಿ ಭರ್ಜರಿ ಬೇಡಿಕೆ, ಷೇರು ಹಂಚಿಕೆ ಮೊದಲೇ ಶೇ. 80 ಲಾಭವೇಕೆ?

    ಮುಂಬೈ: ಯುಫೋರಿಯಾ ಇನ್ಫೋಟೆಕ್ ಇಂಡಿಯಾ (Euphoria Infotech India) ಐಪಿಒಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಒಟ್ಟಾರೆಯಾಗಿ 383.86 ಪಟ್ಟು ಚಂದಾದಾರಿಕೆಯಾಗಿದೆ. ಅಂದರೆ, ಐಪಿಒ (ಇನಿಷಿಯಲ್​ ಪಬ್ಲಿಕ್​ ಆಫರ್​) ನಲ್ಲಿ ನೀಡಲಾಗುವ ಷೇರುಗಳ ಸಂಖ್ಯೆಗಿಂತ 383.86 ಪಟ್ಟು ಖರೀದಿ ಬೇಡಿಕೆ ಬಂದಿದೆ. ಚಿಲ್ಲರೆ ವಿಭಾಗದಲ್ಲಿ 426.65 ಪಟ್ಟು ಬೇಡಿಕೆ ಬಂದಿದೆ. QIB (Qualified Institutional Buyers- ಅರ್ಹ ಸಾಂಸ್ಥಿಕ ಖರೀದಿದಾರರು) ವಿಭಾಗದಲ್ಲಿ 413.26 ಪಟ್ಟು ಮತ್ತು NII (Non-Institutional Investors- ಸಾಂಸ್ಥಿಕೇತರ ಹೂಡಿಕೆದಾರರು) ವಿಭಾಗದಲ್ಲಿ 280.88 ಪಟ್ಟು ಬೇಡಿಕೆ ವ್ಯಕ್ತವಾಗಿದೆ.

    ಈ ಐಪಿಒ ಕಳೆದ ಶುಕ್ರವಾರ ಚಂದಾದಾರಿಕೆಗಾಗಿ ತೆರೆದುಕೊಂಡಿತ್ತು. ಬುಧವಾರ ಜ.24ರಂದು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಐಪಿಒ ಹಂಚಿಕೆಯು ಜನವರಿ 25ರಂದು ಗುರುವಾರ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಸೋಮವಾರ, ಜನವರಿ 29ರಂದು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಆಗಬಹುದಾಗಿದೆ.

    (ಐಪಿಒ ಎಂದರೇನು?: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಎಂದರೆ ಕಂಪನಿಯೊಂದು ಮೊದಲ ಬಾರಿಗೆ ಸಾರ್ವಜನಿಕರಿಗೆ ತನ್ನ ಷೇರುಗಳನ್ನು ನೀಡುವ ಪ್ರಕ್ರಿಯೆಯಾಗಿದೆ.)

    ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಕಾರಣ ಸೋಮವಾರ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದ ಕಾರಣ ಮಂಗಳವಾರ ಮುಕ್ತಾಯವಾಗಬೇಕಾಗಿದ್ದ ಐಪಿಐ ಚಂದಾದಾರಿಕೆ ಅವಧಿಯನ್ನು ಬುಧವಾರ ಒಂದು ದಿನ ವಿಸ್ತರಿಸಲಾಗಿತ್ತು.

    ಯುಫೋರಿಯಾ ಇನ್ಫೋಟೆಕ್ ಇಂಡಿಯಾ ಐಪಿಒ ಸಂಪೂರ್ಣವಾಗಿ ಹೊಸ ಷೇರು ಹಂಚಿಕೆಯಾಗಿದೆ. ಕಂಪನಿಯು 960,000 ಷೇರುಗಳನ್ನು ವಿತರಿಸುತ್ತಿದ್ದು, ಕನಿಷ್ಠ ಬಿಡ್ ಪ್ರಮಾಣ 1,200 ಷೇರುಗಳಾಗಿದೆ.
    ಅರ್ಹ ಸಾಂಸ್ಥಿಕ ಖರೀದಿದಾರರಿಗೆ (QIBs) ಮತ್ತು ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ (NIIs) ಗರಿಷ್ಠ ಬಿಡ್ ಪ್ರಮಾಣ 912,000 ಷೇರುಗಳಗಾಗಿವೆ. ಕಂಪನಿಯು 10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 96-100 ರೂಪಾಯಿ ಬೆಲೆ ಪಟ್ಟಿಯನ್ನು ನಿಗದಿಪಡಿಸಿದೆ.

    GMP (ಗ್ರೇ ಮಾರ್ಕೆಟ್​ ಪ್ರೀಮಿಯಂ) ಏನಾಗುತ್ತಿದೆ?:

    ಈ ಐಪಿಒ ಗ್ರೇ ಮಾರ್ಕೆಟ್‌ನಲ್ಲಿ (ಬೂದು ಮಾರುಕಟ್ಟೆಯಲ್ಲಿ) 80 ರೂಪಾಯಿ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ. ಅಂದರೆ ಈ ಕಂಪನಿಯ ಷೇರುಗಳು 180 ರೂಪಾಯಿ ತಲುಪಬಹುದು. ಇದರರ್ಥ ಹೂಡಿಕೆದಾರರು ಮೊದಲ ದಿನದಲ್ಲಿಯೇ 80% ನಷ್ಟು ದೊಡ್ಡ ಲಾಭವನ್ನು ಗಳಿಸಬಹುದು.

    ಈ ಕಂಪನಿಯನ್ನು ಜನವರಿ 30ರಂದು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುತ್ತದೆ. ಅಂದು ಈ ಷೇರಿನ ಬೆಲೆಯ 180 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸಬಹುದಾಗಿದೆ. ಯುಫೋರಿಯಾ ಇನ್ಫೋಟೆಕ್ ಇಂಡಿಯಾ ಕೋಲ್ಕತ್ತಾ ಮೂಲದ ಐಟಿ ಕಂಪನಿಯಾಗಿದೆ.

    ಹಾಂಗ್​ಕಾಂಗ್​ ಹಿಂದಿಕ್ಕಿದ ಇಂಡಿಯಾ: ಭಾರತೀಯ ಷೇರು ಮಾರುಕಟ್ಟೆ ವಿಶ್ವದಲ್ಲಿಯೇ 4ನೇ ಸ್ಥಾನಕ್ಕೇರಲು ಕಾರಣವೇನು?

    10 ಮೆಗಾ ವ್ಯಾಟ್​ ಸೌರ ವಿದ್ಯುತ್ ಯೋಜನೆಗೆ ಹೂಡಿಕೆ: ಪೇಪರ್​ ಕಂಪನಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡು…

    ಮತ್ತೆ ಗುಟುರು ಹಾಕಿದ ಗೂಳಿ: ಮತ್ತೆ 71 ಸಾವಿರ ಗಡಿ ದಾಟಿದ ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts