More

    ಕಳಸದಲ್ಲಿ 35 ವರ್ಷದ ದುರ್ಗಾ ಪೂಜಾ ಮಹೋತ್ಸವ

    ಕಳಸ: ಪಟ್ಟಣದ ದುರ್ಗಾ ಮಂಟಪದಲ್ಲಿ ಅ.15ರಿಂದ 24ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 35ನೇ ವರ್ಷದ ಶ್ರೀ ದುರ್ಗಾಪೂಜಾ ಮಹೋತ್ಸವ ನಡೆಯಲಿದೆ ಎಂದು ಸಾರ್ವಜನಿಕ ಶ್ರೀದುರ್ಗಾ ಪೂಜಾ ಸಮಿತಿ ಅಧ್ಯಕ್ಷ ಟಿ.ರುದ್ರಯ್ಯ ಆಚಾರ್ಯ ತಿಳಿಸಿದ್ದಾರೆ.
    15ರಂದು ಶ್ರೀ ಕಲಶೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ಹಾಗೂ ಶ್ರೀ ಗಿರಿಜಾಂಬಾ ದೇವಸ್ಥಾನದಲ್ಲಿ ಕಲಾಶಾಭಿಷೇಕ ಸಪ್ತಶತೀ ಪಾರಾಯಣ, ಬೆಳಗ್ಗೆ 10ಕ್ಕೆ ಗಣಹೋಮದ ನಂತರ ಶ್ರೀ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಳಸದ ಟ್ವಿಕ್ಲೀಮಗ್ ಸ್ಟಾರ್ಸ್‌ ದ ಸ್ಕೂಲ್ ಆ್ ಡಾನ್ಸ್ ತಂಡದಿಂದ ಡಾನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    16ರಂದು ಗಜವಾಹಿನಿ, ಬ್ರಹ್ಮಚಾರಿಣಿ ಅಲಂಕಾರ, ಪೂಜಾ ಪಾರಾಯಣ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ವರನಾದ ಮ್ಯೂಸಿಕಲ್ ತಂಡದಿಂದ ಸ್ವರನಾದ ಸಂಗೀತ ಕಾರ್ಯಕ್ರಮ. 17ಕ್ಕೆ ಸಿಂಹವಾಹಿನಿ, ಚಂದ್ರಘಟಾ ಪೂಜಾ ಪಾರಾಯಣ, ಸಂಜೆ ಚಾರ್ಮಾಡಿಯ ಪಂಚಶಿ ಕಲಾವಿದರಿಂದ ಸಾಮಾಜಿಕ ತುಳು ನಾಟಕ ‘ಈ ಪೊರ್ಲು ತೂವೋಡ್ಚಿ’ ಪ್ರದರ್ಶನವಾಗಲಿದೆ ಎಂದು ಹೇಳಿದ್ದಾರೆ.
    18ರಂದು ಮೃಗವಾಹಿನಿ, ಕೂಷ್ಮಾಂಡಿನಿ ಪೂಜಾ ಪಾರಾಯಣ. ತೀರ್ಥಹಳ್ಳಿಯ ಸುಮುಖ ಸಂಗೀತ ಮತ್ತು ನೃತ್ಯ ಶಾಲೆ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ. 19ಕ್ಕೆ ಸ್ಕಂದಮಾತಾ, ಮಕರ ವಾಹಿನಿ, ಲಲಿತಾ ಪಂಚಮಿ ಪೂಜೆ, ಸಂಜೆ ಮಂಗಳೂರಿನ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. 20ರಂದು ದೇವಿಗೆ ಮಯೂರ ವಾಹಿನಿ, ಕಾತ್ಯಾಯಿನಿ ಪೂಜೆ, ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿಯ ಶ್ರೀ ಕ್ಷೇತ್ರ ಪಾವಂಜೆ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಏರ್ಪಡಿಸಲಾಗಿದೆ ಎಂದಿದ್ದಾರೆ.
    ಅ.21ರಂದು ಕಾಲರಾತ್ರಿ, ಅಶ್ವಾರೂಢಾ ಮಹಾಗೌರಿ ಅಲಂಕಾರ. ಶಾರದಾ ಪೂಜೆ. ಸಂಜೆ ಮಲೆನಾಡು ಸಂಜೆ ಜಗದೀಶ ಕಣದ ಮನೆ ತಂಡದವರಿಂದ ಸಂಗೀತ ಮತ್ತು ಹಾಸ್ಯರಸ ಸಂಜೆ, 22ರಂದು ದುರ್ಗಾಹೋಮ, ತ್ರಿಮೂರ್ತಿ ಪೂಜೆ, ಹೂವಿನ ಪೂಜೆ, ಬೆಳಗ್ಗೆ 10.30ರಿಂದ ರಾಜಲಕ್ಷ್ಮೀ ಬಿ. ಜೋಶಿ ಹಾಗೂ ಶ್ರೀಕ್ಷೇತ್ರ ಹೊರನಾಡು ಮತ್ತು ಸಂಗಡಿಗರಿಂದ ಸೌಂದರ್ಯ ಲಹರಿ, ರಾತ್ರಿ ರಂಗಪೂಜೆ ನಂತರ ಸಂಗೀತ ಕಲಾವೃಂದ ಕಳಸ ಇವರಿಂದ ಭಕ್ತಿಭಾವ ಗೀತಲಹರಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
    23ರಂದು ಸಿಂಹವಾಹಿನಿ ಸಿದ್ಧಿಧಾತ್ರಿ ಪೂಜೆ, ಆಯುಧ ಪೂಜೆ, ಸಂಜೆ ಕಳಸ ಈಗಲ್ ಡಾನ್ಸ್ ಗ್ರೂಪ್‌ನಿಂದ ನೃತ್ಯ ಕಾರ್ಯಕ್ರಮ, 24ಕ್ಕೆ ಸಿಂಹವಾಹಿನಿ, ಚಂಡಿಕಾ ಪಾರಾಯಣ, ಮಧ್ಯಾಹ್ನ 3ಕ್ಕೆ ಕಳಸದ ಮುಖ್ಯ ರಸ್ತೆಗಳಲ್ಲಿ ಶ್ರೀ ದೇವಿಯ ವೈಭವಯುತ ಮೆರವಣಿಗೆ ನೆರವೇರಲಿದೆ. ಕಳಸ ರಾಜಬೀದಿಯಲ್ಲಿ ಸಾಗಿ ಕೋಟಿ ತೀರ್ಥದಲ್ಲಿ ದೇವಿಯ ತೆಪ್ಪೋತ್ಸವ, ನಂತರ ದೇವಿಯನ್ನು ಜಲಸ್ತಂಭನ ಮಾಡಲಾಗುವುದು. ಶರನ್ನವರಾತ್ರಿ ಪ್ರತಿ ದಿನ ಸಪ್ತಶತಿ ಪಾರಾಯಣ, ಮಂಗಳಾರತಿ, ತೀರ್ಥಪ್ರಸಾದ, ಅನ್ನದಾನ ನಡೆಯಲಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts