More

    ಆಫ್ರಿಕಾದ ಕಾಡಿನಲ್ಲಿ 2 ತಿಂಗಳಲ್ಲಿ 350 ಆನೆಗಳ ನಿಗೂಢ ಸಾವು

    ನವದೆಹಲಿ: ಆಫ್ರಿಕಾ ಕಂಡದ ಬೋಟ್​ಸ್ವಾನಾ ರಾಷ್ಟ್ರದ ಕಾಡೊಂದರಲ್ಲಿ ಎರಡು ತಿಂಗಳ ಅವಧಿಯಲ್ಲಿ 350 ಆನೆಗಳು ನಿಗೂಢ ರೀತಿಯಲ್ಲಿ ಸಾವನಪ್ಪಿವೆ. ಆ ಪ್ರದೇಶದಲ್ಲಿ ಬರ ಪರಿಸ್ಥಿತಿ ಇಲ್ಲದಿದ್ದಾಗ್ಯೂ ಇಷ್ಟೊಂದು ಆನೆಗಳು ಸಾಯಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಮೇ ಆರಂಭದಲ್ಲಿ ಒಕವಾಂಗೊ ಪ್ರಸ್ಥಭೂಮಿಯಲ್ಲಿ ಆನೆಗಳ ಸಾಲು ಸಾಲು ಶವಗಳು ಆನೆ ಸಂರಕ್ಷಕರ ಕಣ್ಣಿಗೆ ಬಿದ್ದಿದ್ದವು. ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ, ಆ ವರದಿ ಬರಲು ಹಲವು ವಾರಗಳೇ ಬೇಕಾಗುತ್ತವೆ ಎಂದು ಬೋಟ್​ಸ್ವಾನಾ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

    ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಬೋಟ್​ಸ್ವಾನಾದಲ್ಲಿ ಆಫ್ರಿಕಾ ಖಂಡದ ಒಟ್ಟು ಆನೆಗಳ ಪೈಕಿ ಮೂರನೇ ಒಂದು ಭಾಗದಷ್ಟು ಆನೆಗಳಿವೆ.
    ಬ್ರಿಟನ್​ ಮೂಲದ ನ್ಯಾಷನಲ್​ ಪಾರ್ಕ್​ ರೆಸ್ಕ್ಯೂ ಎಂಬ ಸಂಘಟನೆಯ ಡಾ. ಮೆಕ್​ಕ್ಯಾನ್​ ಪ್ರಕಾರ, ಮೇನಲ್ಲಿ ವಿಮಾನದಲ್ಲಿ ಪ್ರಸ್ಥಭೂಮಿಯನ್ನು ಹಾದು ಹೋಗುವಾಗ ಆನೆಗಳ ಶವಗಳು ಕಂಡುಬಂದವು. ಅಂದಾಜು ಮೂರು ಗಂಟೆ ಈ ಪ್ರದೇಶದೆಲ್ಲೆಡೆ ವೈಮಾನಿಕ ಸಮೀಕ್ಷೆ ನಡೆಸಿದಾಗ 169 ಆನೆಗಳ ಶವಗಳು ಪತ್ತೆಯಾದವು ಎಂದು ಮಾಹಿತಿ ನೀಡಿದ್ದಾರೆ.

    ಒಂದು ತಿಂಗಳ ಬಳಿಕ ಹೆಚ್ಚಿನ ತನಿಖೆ ನಡೆಸಿದಾಗ ಈ ಪ್ರದೇಶದಲ್ಲಿ 350ಕ್ಕೂ ಹೆಚ್ದು ಆನೆಗಳು ನಿಗೂಢವಾಗಿ ಮೃತಪಟ್ಟಿರುವ ಸಂಗತಿ ತಿಳಿಯಿತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮಾನವೀಯತೆಯನ್ನೇ ಮರೆಸುತ್ತಿದೆ ಕರೊನಾ; ತಂದೆಯ ಶವವಿಡಲು ಐಸ್​ಕ್ರೀಮ್​ ಫ್ರೀಜರ್​ ಖರೀದಿಸಿದರು

    ಇಷ್ಟೊಂದು ಆನೆಗಳು ಒಮ್ಮೆಲೇ ಸಾಯಲು ಕಳ್ಳಬೇಟೆಗಾರರ ಹಾವಳಿ ಕಾರಣ ಎಂಬ ಆರೋಪವನ್ನು ಬೋಟ್​ಸ್ವಾನಾ ಸರ್ಕಾರ ತಳ್ಳಿಹಾಕಿದೆ. ಆನೆಗಳ ಶವಗಳ ಎಲ್ಲಾ ಭಾಗಗಳು ಹಾಗೆಯೇ ಇರುವುದು ಇದಕ್ಕೆ ಕಾರಣವಾಗಿದೆ.

    ಆನೆಗಳು ಮಾತ್ರ ಸಾಯುತ್ತಿರುವುದರಿಂದ, ಅವುಗಳನ್ನು ಸಾಯಿಸಲು ಕಳ್ಳಬೇಟೆಗಾರರು ಸೈನೆಡ್​ ಅನ್ನು ಬಳಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ, ಅವರು ಹಾಗೇನಾದರೂ ಮಾಡಿದ್ದರೆ, ಇತರೆ ಪ್ರಾಣಿಗಳೂ ಸಾಯಬೇಕಿತ್ತು. ಆದರೆ ಆನೆಗಳು ಮಾತ್ರವೇ ಸತ್ತಿವೆ. ಆದ್ದರಿಂದ ಸೈನೆಡ್​ ಬಳಕೆಯಾಗಿಲ್ಲ ಎಂಬುದು ಖಚಿತವಾಗುತ್ತದೆ ಎಂದು ಡಾ. ಮೆಕ್​ಕ್ಯಾನ್​ ಹೇಳಿದ್ದಾರೆ.

    2019ರಲ್ಲಿ ಆ್ಯಂಥ್ರಾಕ್ಸ್​ ವಿಷವುಣಿಸಿದ್ದರಿಂದ ಬೊಟ್​ಸ್ವಾನಾದಲ್ಲಿ 100ಕ್ಕೂ ಹೆಚ್ಚು ಆನೆಗಳು ಸತ್ತಿದ್ದವು. ಆದರೆ ಈ ಬಾರಿ ಅಂಥ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.

    13.4 ಕೋಟಿ ಯುಪಿಐ ಪಾವತಿ ವಹಿವಾಟು: ಜೂನ್​ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts