More

    34 ಪೊಲೀಸ್ ಸಿಬ್ಬಂದಿಗೆ ಕರೊನಾ ವೈರಸ್​; ಸೋಂಕು ತಗುಲಿದ್ದು ತಬ್ಲಿಘಿಗಳಿಂದಲೇ ಎಂದ ಮೇಲಧಿಕಾರಿಗಳು…

    ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಒಟ್ಟು 34 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಅವರಲ್ಲಿ ಕೆಲವು ಮೇಲಧಿಕಾರಿಗಳೂ ಇದ್ದಾರೆ ಎಂದು ವರದಿಯಾಗಿದೆ.

    ಭೋಪಾಲ್​ ಎಡಿಜಿಪಿ ಉಪೇಂದ್ರ ಜೈನ್​ ಈ ಬಗ್ಗೆ ಮಾಹಿತಿ ನೀಡಿದ್ದು, ಇಷ್ಟು ಪೊಲೀಸರಿಗೆ ಕರೊನಾ ವೈರಸ್​ ತಗುಲಲು ತಬ್ಲಿಘಿಗಳೇ ಕಾರಣ ಎಂದಿದ್ದಾರೆ.

    ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್​ ಮರ್ಖಜ್​​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್​ಗೆ ಬಂದಿದ್ದ ಹಲವರು ಅಡಗಿದ್ದರು. ಅವರನ್ನೆಲ್ಲ ಹುಡುಕಿ, ಕ್ವಾರಂಟೈನ್​ಗೆ ಒಳಪಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
    ಸೋಂಕಿತ ಪೊಲೀಸ್ ಸಿಬ್ಬಂದಿಯ ಕುಟುಂಬವೂ ಅಪಾಯದಲ್ಲಿದೆ. ಈಗಾಗಲೇ 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

    ಇದ್ದುದರಲ್ಲಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಸಿಬ್ಬಂದಿಯಲ್ಲಿ 2100 ಮಂದಿ ಕರೊನಾ ಕರ್ತವ್ಯ ನಿರ್ವಹಣೆ ಶುರುವಾದಾಗಿನಿಂದಲೂ ತಮ್ಮ ಮನೆಗಳಿಗೆ ಹೋಗಿಲ್ಲ. ಹೋಟೆಲ್​ಗಳಲ್ಲಿ ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದಾರೆ. ಅವರಿಗೆಲ್ಲ ಪಿಪಿಇ ಕಿಟ್​ಗಳನ್ನು, ಸ್ಯಾನಿಟೈಸರ್​, ಆಹಾರಗಳನ್ನೆಲ್ಲ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ದೆಹಲಿ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್​ಗೆ ಬಂದ ಸುಮಾರು 35 ಮಂದಿಗೆ ಕರೊನಾ ಇದೆ. ಅವರಲ್ಲಿ ವಿದೇಶಿ ಮುಸ್ಲಿಮರೂ ಇದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ದೇಶಾದ್ಯಂತ ಒಂದೇ ದಿನ ಐದು ಲಕ್ಷ ಜನರ ಪರೀಕ್ಷೆ, 1,409 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts