More

    ಭಾರತದ ಶೇಕಡಾ 33ರಷ್ಟು ಆದಾಯ ಷೇರು ಮಾರುಕಟ್ಟೆಯಿಂದ: ಎನ್​ಎಸ್​ಇ ಎಂಡಿ ವಿವರಣೆಯಲ್ಲಿ ಕುತೂಹಲಕಾರಿ ಸಂಗತಿಗಳು…

    ಮುಂಬೈ: ಭಾರತದ ಸಂಪತ್ತಿನ ಪ್ರತಿ ಮೂರು ರೂಪಾಯಿಗಳ ಪೈಕಿ ಒಂದು ರೂಪಾಯಿ (ಅಂದರೆ, ಶೇಕಡಾ 33ರಷ್ಟು) ಷೇರು ಮಾರುಕಟ್ಟೆಯಿಂದ ಬರುತ್ತದೆ.

    ಈ ವಿಷಯವನ್ನು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (ಎನ್​ಎಸ್​ಇ- ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ) ಎಂಡಿ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್​ ಅವರೇ ಬಹಿರಂಗಪಡಿಸಿದ್ದಾರೆ.

    ಮುಂದಿನ 50 ವರ್ಷಗಳಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಭಾರತದ ಆರ್ಥಿಕತೆಯು 100 ಲಕ್ಷ ಕೋಟಿ ಡಾಲರ್‌ಗೆ ಬೆಳೆಯಬಹುದು ಎಂದು ಅವರು ಅಂದಾಜಿಸಿದ್ದಾರೆ.

    2024ರ ಚುನಾವಣೆಯ ಮೊದಲು ಭಾರತವು 4 ಲಕ್ಷ ಕೋಟಿ ಡಾಲರ್​ ಆರ್ಥಿಕತೆಯಾಗಲಿದೆ ಎಂದು ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳು ಅಂದಾಜಿಸಿದ್ದಾರೆ.

    2023ರ ಅಂತ್ಯದ ವೇಳೆಗೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಒಟ್ಟು ಮಾರುಕಟ್ಟೆ ಬಂಡವಾಳವು 4.34 ಲಕ್ಷ ಕೋಟಿ ಡಾಲರ್​ ಆಗಿದೆ. ಯುಬಿಎಸ್​ ಸಂಸ್ಥೆ ವರದಿಯ ಪ್ರಕಾರ, 2022 ರಲ್ಲಿ ಭಾರತದಲ್ಲಿ ಒಟ್ಟು ಸಂಪತ್ತು 15.4 ಲಕ್ಷ ಕೋಟಿ ಡಾಲರ್​ ಆಗಿತ್ತು.

    ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್​, “ಜಗತ್ತು 250 ಲಕ್ಷ ಕೋಟಿ ಡಾಲರ್​ಗಿಂತಲೂ ಹೆಚ್ಚು ಸಂಪತ್ತನ್ನು ಸೃಷ್ಟಿಸಲು ಹೊರಟಿದೆ. ನಾವು ಒಟ್ಟು ವಿಶ್ವದ ಜನಸಂಖ್ಯೆಯ ಅಂದಾಜು 18 ಪ್ರತಿಶತ ಇದೆ. ಅಲ್ಲದೆ, ಯುವ ಜನಸಂಖ್ಯೆಯಲ್ಲಿ ಶೇಕಡಾ 20-22 ರಷ್ಟಿದ್ದರೆ, ನಾವು ಒಟ್ಟು ಸಂಪತ್ತಿನ ಶೇಕಡಾ 30 ರಷ್ಟನ್ನು ಸೃಷ್ಟಿಸಬಹುದು” ಎಂದು ಹೇಳಿದ್ದಾರೆ.

    ಪ್ರಸ್ತುತ ಎನ್​ಎಸ್​ಇ ಷೇರು ಮಾರುಕಟ್ಟೆಯಲ್ಲಿ 8.5 ಕೋಟಿ ಹೂಡಿಕೆದಾರರಿದ್ದು, ಇದರಲ್ಲಿ 2 ಕೋಟಿಗಿಂತ ಹೆಚ್ಚು ಮಹಿಳೆಯರು ಇದ್ದಾರೆ, 5 ಕೋಟಿಗೂ ಹೆಚ್ಚು ಕುಟುಂಬಗಳು ನೇರವಾಗಿ ಷೇರು ಮಾರುಕಟ್ಟೆಗಳ ಮೂಲಕ ಹೂಡಿಕೆ ಮಾಡುತ್ತವೆ, ಇದು ಭಾರತದ ಒಟ್ಟು ಕುಟುಂಬಗಳಲ್ಲಿ ಶೇಕಡಾ 17-18ರಷ್ಟು ಆಗುತ್ತದೆ. ಇದು ನಂಬಿಕೆಯ ದೊಡ್ಡ ಜಿಗಿತವಾಗಿದೆ ಎಂದರು.

    ಭಾರತದ ಬಂಡವಾಳ ಮಾರುಕಟ್ಟೆಗಳು ಸಂಪತ್ತು ಸೃಷ್ಟಿಗೆ ಹೇಗೆ ಸಹಾಯ ಮಾಡುತ್ತಿವೆ ಎಂಬುದರ ಕುರಿತು ಮಾತನಾಡಿದ ಅವರು, “ಕಳೆದ ದಶಕದಲ್ಲಿ ಬಂಡವಾಳ ಮಾರುಕಟ್ಟೆಗಳಿಂದಾಗಿ ಜನರ ಜೀವನಶೈಲಿ ಬದಲಾಗಿದೆ. ಮುಂದಿನ ಮೂರ್ಖರನ್ನು ಹುಡುಕುವುದು ಬಿಟ್‌ಕಾಯಿನ್‌ನ ಉದ್ದೇಶವಾಗಿದೆ, ಆದರೆ, ಷೇರು ಮಾರುಕಟ್ಟೆಗಳ ಉದ್ದೇಶವು ಯಾರೊಬ್ಬರ ಕಂಪನಿಯಲ್ಲಿ ಲಾಭದ ಪಾಲು ನೀಡುವ ಭರವಸೆಯಾಗಿದೆ” ಎಂದು ಹೇಳಿದರು.

    ಎಸ್​ಎಸ್​ಇಯ ಹೂಡಿಕೆದಾರರ ಸಂಖ್ಯೆಯು ಸೆಪ್ಟೆಂಬರ್ 2023ರವರೆಗೆ 8 ಕೋಟಿಗೆ ಏರಿದೆ. ವರ್ಷಾಂತ್ಯದಲ್ಲಿ 8.5 ಕೋಟಿಗೆ ಏರಿದೆ. ಭಾರತದ ಪಿನ್‌ಕೋಡ್‌ಗಳ ಪೈಕಿ ಅಂದಾಜು 99.8 ಪ್ರತಿಶತ ಹೂಡಿಕೆ ನೋಂದಣಿಗೆ ಒಳಪಟ್ಟಿವೆ ಎಂದರು.

    ಈ ಸ್ಮಾಲ್ ಕ್ಯಾಪ್ ಷೇರು 3 ವರ್ಷಗಳಲ್ಲಿ 100 ರಿಂದ 10,000 ರೂಪಾಯಿಗೆ ಏರಿಕೆ ಕಂಡಿದೆ…

    ಪ್ರತಿಪಕ್ಷಗಳು ಬಹಿಷ್ಕರಿಸಿರುವ ಬಾಂಗ್ಲಾದೇಶ ಚುನಾವಣೆಯ ಮತದಾನ ಮುಕ್ತಾಯ: ಮತ ಎಣಿಕೆ ಆರಂಭ

    140 ಭಾಷೆಗಳಲ್ಲಿ ಹಾಡಿ ಗಿನ್ನೆಸ್ ದಾಖಲೆ ಬರೆದ ಕೇರಳದ ಮಹಿಳೆ: ಈ ಸಂಗೀತಗಾರ್ತಿ ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts