More

    ಕಡೂರಿನಲ್ಲಿ 3201 ಯುವ ಮತದಾರರು ನೋಂದಣಿ

    ಕಡೂರು: ಹಾಸನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಡೂರು ವಿಧಾನಸಭೆ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು.
    ಕ್ಷೇತ್ರದಲ್ಲಿ ಒಟ್ಟು ಪುರುಷರು 103774, ಮಹಿಳೆಯರು 104474 ಹಾಗೂ ಐವರು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,08,253 ಲಕ್ಷ ಮತದಾರರಿದ್ದು, 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ 3201 ಯುವ ಮತದಾರರು ಪ್ರಥಮ ಬಾರಿಗೆ ಮತದಾನದ ಅವಕಾಶ ಪಡೆದಿದ್ದಾರೆ. 1144 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
    ಚುನಾವಣಾಧಿಕಾರಿ ಯೋಗಾನಂದ್ ಮತ್ತು ಸಹಾಯಕ ಚುನಾವಣಾಧಿಕಾರಿ ಎಂ.ಪಿ. ಕವಿರಾಜ್ ಉಪಸ್ಥಿತಿಯಲ್ಲಿ ಗುರುವಾರ ಭದ್ರತಾ ಕೊಠಡಿ ತೆರೆದು ಪರಿಶೀಲನೆ ನಡೆಸಿ ನಂತರ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಮತ್ತು ಇವಿಎಂ ಪ್ಯಾಟ್‌ಗಳನ್ನು ವಿತರಿಸಲಾಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಮತಗಟ್ಟೆ ಸಿಬ್ಬಂದಿ ಮತಯಂತ್ರ ಮತ್ತಿತರ ಪರಿಕರಗಳೊಡನೆ ವಾಹನದಲ್ಲಿ ನಿಯೋಜಿತ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
    ಪ್ರತಿ ಮತಗಟ್ಟೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಆಯಾ ಮತಗಟ್ಟೆಯಲ್ಲಿನ ಮತದಾರರ ಸಂಖ್ಯೆ ಆಧರಿಸಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಯೋಗಾನಂದ್ ತಿಳಿಸಿದರು.
    ಶಾಂತಿಯುತ ಮತದಾನದ ಪ್ರಕ್ರಿಯೆಗಾಗಿ ಡಿವೈಎಸ್ಪಿ ನೇತೃತ್ವದ ಮೂವರು ವೃತ್ತ ನಿರೀಕ್ಷಕರು, 19 ಪಿಎಸ್‌ಐ ಸೇರಿದಂತೆ 449ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಸ್ಥಾಪನೆಗೊಂಡಿರುವ 253 ಮತಗಟ್ಟೆಗಳಲ್ಲಿ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ 6 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳಾಗಿ ಗುರುತಿಸಿಕೊಳ್ಳಲಾಗಿದೆ.
    91 ವೆಲ್ಲೆರಬಲ್ ಮತಗಟ್ಟೆಗಳನ್ನಾಗಿ ಗುರುತು ಮಾಡಲಾಗಿದೆ. ಗ್ರಾಮೀಣ ಭಾಗದ ಮತಗಟ್ಟೆಗಳಿಗೆ ಬೂತ್‌ಗಳ ಸಾಗಾಣಿಕೆಗೆ ಮತ್ತು ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 55 ಮಾರ್ಗದಲ್ಲಿ 37 ಸಾರಿಗೆ ಬಸ್, 18 ಜೀಪ್‌ಗಳನ್ನು ಬಳಸಿಕೊಳ್ಳಲಾಗಿದೆ.
    ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಯುತ ಮತದಾನ ಪ್ರಕ್ರಿಯೆ ಕಾರ್ಯ ಪೂರ್ಣಗೊಳಿಸಲು ಸನ್ನದ್ಧರಾಗಿರುವಂತೆ ಡಿಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಹಾಸನ ಜಿಲ್ಲಾಧಿಕಾರಿ ಜಿ.ಸತ್ಯಭಾಮ ಸೂಚನೆ ನೀಡಿ, ಸಿದ್ಧತಾ ಕಾರ್ಯಗಳ ಪರಿಶೀಲಿಸಿದರು. ತಾಪಂ ಇಒ ಸಿ.ಆರ್.ಪ್ರವೀಣ್ ಹಾಗೂ ಚುನಾವಣಾ ಶಾಖಾ ವಿಭಾಗದ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts