More

    ಕಳೆದ ಐದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಕಾರಣಕ್ಕೆ ಅವಧಿಪೂರ್ವ ನಿವೃತ್ತಿ ಪಡೆದ ಅಧಿಕಾರಿಗಳ ಸಂಖ್ಯೆ ಎಷ್ಟು?: ಅಂಕಿ ಅಂಶ ಸಂಸತ್ತಿನಲ್ಲಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ

    ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷದ ಅವಧಿಯಲ್ಲಿ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ್ದಲ್ಲದೆ, ಭ್ರಷ್ಟಾಚಾರ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರ ಪರಿಣಾಮ ಭ್ರಷ್ಟಾಚಾರದಲ್ಲಿ ತೊಡಗಿದ್ದ ಅನೇಕ ಅಧಿಕಾರಿಗಳು ಅವಧಿಪೂರ್ವ ನಿವೃತ್ತಿ ಪಡೆಯುವಂತಾಗಿತ್ತು. ಇಂತಹ ಅಧಿಕಾರಿಗಳ ಸಂಖ್ಯೆ ಎಷ್ಟು ಎಂಬ ಕುತೂಹಲ ಸಹಜವೇ. ಅದನ್ನು ಸರ್ಕಾರ ಇಂದು ತಣಿಸಿದ್ದು, ವಿವರವನ್ನು ಸಂಸತ್ತಿಗೆ ತಿಳಿಸಿದೆ.

    ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರಗಳಲ್ಲಿ ತೊಡಗಿ ಸಿಕ್ಕಿಬಿದ್ದ 320ರಷ್ಟು ಅಧಿಕಾರಿಗಳಿಗೆ ಅವಧಿಪೂರ್ವ ನಿವೃತ್ತಿ ಕೊಡಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

    ಈ ವರ್ಷದ ಜನವರಿ 30ರ ಡೇಟಾ ಪ್ರಕಾರ, ವಿವಿಧ ಸಚಿವಾಲಯಗಳು, ಇಲಾಖೆಗಳ ವೆಬ್​ಸೈಟ್​ಗಳಲ್ಲಿರುವ ಡೇಟಾ ಪ್ರಕಾರ, ಸೇವಾ ನಿಯಮ 56(ಜೆ) ಮೂಲಕ ಅವಧಿ ಪೂರ್ವ ನಿವೃತ್ತಿ ಪಡೆದ ಆಲ್ ಇಂಡಿಯಾ ಸರ್ವೀಸ್ ಆಫೀಸರ್​ಗಳೂ ಸೇರಿ ಗ್ರೂಪ್ ಎ ದರ್ಜೆಯ 163 ಅಧಿಕಾರಿಗಳು, ಗ್ರೂಪಿ ಬಿ ದರ್ಜೆಯ157 ಅಧಿಕಾರಿಗಳನ್ನು 2014ರ ಜುಲೈ ಮತ್ತು 2019ರ ಡಿಸೆಂಬರ್ ಅವಧಿಯಲ್ಲಿ ನಿವೃತ್ತಿಗೊಳಿಸಲಾಗಿದೆ ಎಂದು ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

    ಆಲ್ ಇಂಡಿಯಾ ಸರ್ವೀಸ್​ನಲ್ಲಿ ಭಾರತೀಯ ಆಡಳಿತ ಸೇವೆ(ಐಎಎಸ್​), ಭಾರತೀಯ ಪೊಲೀಸ್ ಸೇವೆ (ಐಪಿಎಸ್​), ಭಾರತೀಯ ಅರಣ್ಯ ಸೇವೆ(ಐಎಫ್​ಒಎಸ್​)ಗಳು ಸೇರಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts