More

    ಭಾರತದಲ್ಲಿ ಒಂದೇ ದಿನ 32 ಬಲಿ, 5194 ಸೋಂಕಿತರು: ಸಾವಿನ ಸಂಖ್ಯೆ 149ಕ್ಕೆ ಏರಿಕೆ, 402 ಮಂದಿ ಬಿಡುಗಡೆ

    ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದು, 773 ಹೊಸ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟೂ 149 ಮಂದಿ ಮೃತಪಟ್ಟಿದ್ದು, 402 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಪ್ರಸ್ತುತ ಕರೊನಾ ಸೋಂಕಿತರ ಸಂಖ್ಯೆ 5194ರಷ್ಟು ಇದೆ. ಕರ್ನಾಟಕದಲ್ಲಿ ಆರು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ 2, ಉತ್ತರ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಹೊಸ ಪ್ರಕರಣಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾಗಿದೆ.

    ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಅತಿ ಹೆಚ್ಚು ಸೋಂಕು ಪೀಡಿತ ರಾಜ್ಯ ಎನಿಸಿಕೊಂಡಿರುವುದು ಮಹಾರಾಷ್ಟ್ರ. ಇಲ್ಲಿ 1,018 ಸೋಂಕಿತರಿದ್ದು ನಂತರದ ಸ್ಥಾನ ತಮಿಳುನಾಡು (690), ನವದೆಹಲಿ (576), ಕೇರಳ (336), ತೆಲಂಗಾಣ (364), ಉತ್ತರ ಪ್ರದೇಶ (326), ರಾಜಸ್ಥಾನ (328), ಆಂಧ್ರ ಪ್ರದೇಶ (305), ಮಧ್ಯಪ್ರದೇಶ (229), ಕರ್ನಾಟಕ (181), ಗುಜರಾತ್‌ (165), ಜಮ್ಮು ಮತ್ತು ಕಾಶ್ಮೀರ (116), ಪಶ್ಚಿಮ ಬಂಗಾಳ (99), ಹರಿಯಾಣ (147), ಪಂಜಾಬ್‌ (91), ಬಿಹಾರ್‌ (38), ಉತ್ತರಾಖಂಡ (31), ಅಸ್ಸಾಂ (27), ಒಡಿಶಾ (42), ಚಂಡೀಗಢ (18) ಲಡಾಖ್‌ (14), ಹಿಮಾಚಲ ಪ್ರದೇಶ (18). ಅಂಡಮಾನ್‌- ನಿಕೋಬಾರ್‌ ದ್ವೀಪ, ಛತ್ತೀಸಗಡ, ಗೋವಾದಲ್ಲಿ ತಲಾ 10, ಪುದುಚೆರಿಯಲ್ಲಿ 5, ಜಾರ್ಖಂಡ್‌ 4, ಮಣಿಪುರ 2, ತ್ರಿಪುರ, ಮಿಜೋರಾಮ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಸೋಂಕು ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

    ಭಾರತೀಯ ಮೂಲದ ಹೃದ್ರೋಗ ತಜ್ಞ ಲಂಡನ್‌ನಲ್ಲಿ ಕರೊನಾಗೆ ಬಲಿ

    ಅಮೆರಿಕದಲ್ಲಿ ಏರುತ್ತಲೇ ಇದೆ ಮೃತರ ಸಂಖ್ಯೆ: ಒಂದೇ ದಿನ 1850 ಸಾವು, ನ್ಯೂಯಾರ್ಕ್‌ನಲ್ಲಿ 800 ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts