More

    32 ಕೋಟಿ ರೂ. ಮೊತ್ತದಲ್ಲಿ 500 ಮನೆ ನಿರ್ಮಾಣ : ಶಾಸಕ ವೀರಣ್ಣ ಚರಂತಿಮಠ ಹೇಳಿಕೆ

    ಬಾಗಲಕೋಟೆ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನವನಗರದ ವಾಂಬೆ ಕಾಲೋನಿ ಬಳಿ ನಿರ್ಮಾಣವಾಗುತ್ತಿರುವ 500 ಮನೆಗಳನ್ನು ಬಡವರಿಗೆ ನೀಡಲಾಗುತ್ತಿದ್ದು, ಮನೆ ಕೊಡುವ ನೆಪದಲ್ಲಿ ಯಾರಾದರೂ ಮಧ್ಯವರ್ತಿಗಳು ದುಡ್ಡು ಕೇಳಿದರೆ ಕೊಡಬೇಡಿ ಎಂದು ಶಾಸಕ ವೀರಣ್ಣ ಚರಂತಿಮಠ ಲಾನುಭವಿಗಳಿಗೆ ಖಡಕ್ ಮಾತು ಹೇಳಿದರು.

    ನವನಗರದ ವಾಂಬೆ ಕಾಲೋನಿಯ ಬಳಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 500 ಮನೆಗಳ ನಿರ್ಮಾಣದ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಡ ಲಾನುಭವಿಗಳಿಗೆ ಮನೆಗಳನ್ನು ನೀಡಲಾಗುತ್ತಿದ್ದು ಯಾರಿಗಾದರೂ 1 ಸಾವಿರ ರೂ. ಕೊಟ್ಟರೂ ಕೂಡ ಅದಕ್ಕೆ ನೀವೆ ಜವಾಬ್ದಾರಿ ಎಂದು ಲಾನುಭವಿಗಳಿಗೆ ಎಚ್ಚರಿಕೆ ನೀಡಿದರು.

    ಬಾಗಲಕೋಟೆ ನಗರದಲ್ಲಿ ಹುಡ್ಕೋ ಯೋಜನೆಯಡಿ 100, ವಾಂಬೆ ಯೋಜನೆಯಡಿ 1138 ಮನೆ, ಐ.ಎಚ್.ಎಸ್.ಡಿ.ಪಿ ಯೋಜನೆಯಡಿ 240 ಮನೆ ಹೀಗೆ 1478 ಮನೆಗಳನ್ನು ನೀಡಲಾಗಿದೆ. ಆಶ್ರಯ ಮನೆಗಳ ನಿರ್ಮಾಣಕ್ಕೆ ಬಿಟಿಡಿಎ ವತಿಯಿಂದ 15 ಎಕರೆ ಜಾಗವನ್ನು ನಗರಸಭೆಗೆ ಹಸ್ತಾಂತರ ಮಾಡಲಾಗಿತ್ತು. ಅದರಲ್ಲಿ 5 ಎಕರೆ ಜಾಗದಲ್ಲಿ 500 ಮನೆಗಳನ್ನು ಜಿ+1 ಮಾದರಿ ನಿರ್ಮಿಸಲಾಗುತ್ತಿದೆ ಎಂದರು.

    ಜಿ+1 ಮಾದರಿಯಲ್ಲಿ 500 ಮನೆಗಳು 32 ಕೋಟಿ ರೂ.ಮೊತ್ತದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. 1 ಹಾಲ್, ಕಿಚನ್, ಬೆಡ್ ರೂ., ಬಾತ್ ರೂ.ಶೌಚಗೃಹ ಇರಲಿದೆ. ಮನೆಯನ್ನು ಸರಿಯಾದ ರೀತಿಯಲ್ಲಿ ಗುಣಮಟ್ಟದಿಂದ ನಿರ್ಮಿಸಬೇಕು. ಆರು ತಿಂಗಳಲ್ಲಿ ಮನೆ ನಿರ್ಮಿಸಿ ಲಾನುಭವಿಗಳಿಗೆ ವಿತರಣೆ ಮಾಡುವ ಕೆಲಸವಾಗಬೇಕು ಎಂದು ಹೇಳಿದರು.

    ಯಾರನ್ನೂ ಕಡೆಗಣಿಸಿಲ್ಲ : 500 ಮನೆಗಳನ್ನು ವಿತರಣೆ ಮಾಡುವಾಗ ಅಲ್ಪಸಂಖ್ಯಾತರು, ಎಸ್ಸಿ,ಎಸ್ಟಿ, ಹಿಂದುಳಿದವರು ಹಾಗೂ ಸಾಮಾನ್ಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮನೆಗಳನ್ನು ವಿತರಿಸಲಾಗಿದೆ. ಯಾವುದೇ ಸಮಾಜವನ್ನು ಕಡೆಗಣಿಸದೇ ಬಡ ಲಾನುಭವಿಗಳಿಗೆ ಮನೆ ನೀಡಲಾಗಿದೆ. ಸಾಮಾನ್ಯ 110, ಎಸ್ಸಿ 80, ಎಸ್ಟಿ 30, ಓಬಿಸಿ 280 ಹೀಗೆ 500 ಮನೆಗಳನ್ನು ಎಲ್ಲರನ್ನು ಗಮನದಲ್ಲಿಟ್ಟುಕೊಂಡು ವಿತರಿಸಲಾಗಿದೆ ಎಂದು ಹೇಳಿದರು.

    ಲಾನುಭವಿಗಳ ಕಟ್ಟಬೇಕಾದ ಹಣ : ಒಂದು ಮನೆಯ ವೆಚ್ಚ 7.21 ಲಕ್ಷ ಇದ್ದು ಎಸ್ಸಿ,ಎಸ್ಟಿ ವರ್ಗದವರಿಗೆ ಕೇಂದ್ರ ಸರ್ಕಾರ 1.50 ಲಕ್ಷ ರೂ ಹಾಗೂ ರಾಜ್ಯ ಸರ್ಕಾರ 2 ಲಕ್ಷ ರೂ. ಸಬ್ಸಿಡಿ ದೊರೆಯಲಿದೆ. ಪ್ರಾರಂಭಿಕವಾಗಿ 72 ಸಾವಿರ ರೂ. ಲಾನುಭವಿಗಳು ಭರಣಾ ಮಾಡಬೇಕು. 2.99 ಬ್ಯಾಂಕಿನಿಂದ ಸಾಲ ದೊರೆಯಲಿದೆ. ಇತರೆ ವರ್ಗದವರಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ,ರಾಜ್ಯ ಸರ್ಕಾರದಿಂದ 1.20 ಲಕ್ಷ ಸಬ್ಸಿಡಿ ದೊರೆಯಲಿದ್ದು. ಬ್ಯಾಂಕಿನಿಂದ 3.43 ಸಾಲ ದೊರೆಯಲಿದೆ ಎಂದು ತಿಳಿಸಿದರು.

    ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಬಿ.ಎ.ಸಸಾಲಟ್ಟಿ, ಶಿವಾನಂದ ರಾಠೋಡ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ಬುಡಾ ರಾಜು ನಾಯ್ಕರ, ನಗರಸಭೆ ಸದಸ್ಯರಾದ ರವಿ ಧಾಮಜಿ, ಚನ್ನಯ್ಯ ಹಿರೇಮಠ, ಸವಿತಾ ಲೆಂಕೆಣ್ಣವಾರ, ಶೋಭಾ ರಾವ್ ಶಶಿಕಲಾ ಮಜ್ಜಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts