More

    317 ಬಿಡಿಎ ನಿವೇಶನಗಳ ಇ-ಹರಾಜು; ನಿಗದಿಗಿಂತ ಹೆಚ್ಚಿನ ಮೊತ್ತದ ಬಿಡ್ ಸಲ್ಲಿಕೆ

    ಬೆಂಗಳೂರು: ಬಿಡಿಎ ಬಡಾವಣೆಗಳಲ್ಲಿನ ಮೂಲೆ ನಿವೇಶನಗಳ ಐದನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 451 ನಿವೇಶನಗಳ ಪೈಕಿ 317 ನಿವೇಶನಗಳು ಹರಾಜಾಗಿವೆ.

    ಬಿಡಿಎ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳನ್ನು ಇ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ಅದರಂತೆ ನ. 14ರಿಂದ ಆರಂಭವಾಗಿದ್ದ ಐದನೇ ಹಂತದ ಹರಾಜು ಪ್ರಕ್ರಿಯೆಯ ಬಿಡ್ಡಿಂಗ್​ ಮುಕ್ತಾಯಗೊಂಡಿದ್ದು, ವಿವಿಧ ಬಡಾವಣೆಗಳಲ್ಲಿನ 451 ನಿವೇಶನಗಳನ್ನು ಹರಾಜಿಗಿಡಲಾಗಿತ್ತು. ಅದರಲ್ಲಿ 109 ನಿವೇಶನಗಳು ಪ್ರಕ್ರಿಯೆಗೆ ಒಳಪಡಲಿಲ್ಲ. ಉಳಿದಂತೆ 25 ನಿವೇಶನಗಳಿಗೆ ನಿರೀಕ್ಷಿತ ದರ ನಿಗದಿಯಾಗದ ಕಾರಣ, ಹರಾಜಿನಿಂದ ಹೊರಗಿಡಲಾಯಿತು. 317 ನಿವೇಶನಗಳಿಗೆ ನಿಗದಿಗಿಂತ ಹೆಚ್ಚಿನ ಮೊತ್ತದ ಬಿಡ್​ ಸಲ್ಲಿಕೆಯಾಗಿ ಮಾರಾಟವಾಗಿವೆ.

    5ನೇ ಹಂತದ ಇ ಹರಾಜು ಪ್ರಕ್ರಿಯೆಯಲ್ಲಿ 1,496 ಬಿಡ್ಡುದಾರರು ಭಾಗವಹಿಸಿದ್ದರು. ಮಾರಾಟವಾದ 317 ನಿವೇಶನಗಳ ಮೂಲಬೆಲೆಯನ್ನು 184.57 ಕೋಟಿ ರೂ.ಗೆ ನಿಗದಿ ಮಾಡಲಾಗಿತ್ತು. ಆದರೆ, ಬಿಡ್ಡುದಾರರು 278.58 ಕೋಟಿ ರೂ. ಬಿಡ್​ ಸಲ್ಲಿಸಿ, ನಿವೇಶನಗಳನ್ನು ಪಡೆದಿದ್ದಾರೆ. ಒಟ್ಟಾರೆ 94.1 ಕೋಟಿ ರೂ. ಹೆಚ್ಚುವರಿ ಆದಾಯ ಬಂದಂತಾಗಿದೆ.

    ರಾಜ್ಯದಲ್ಲಿ ಮೂರು ದಿನ ಮಳೆ; ವಾಯುಭಾರ ಕುಸಿತ ಪರಿಣಾಮ

    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಪ್ರತಾಪಚಂದ್ರ ಶೆಟ್ಟಿ ಇಂಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts