More

    ಬಿಡಿಎ ಮುಂದೆ ಧರಣಿ ಕೂರುವುದಾಗಿ ಶಾಸಕ ಸುರೇಶ್‌ಕುಮಾರ್ ಎಚ್ಚರಿಕೆ !

    ಬೆಂಗಳೂರು: ಶಾಸನಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ 50 ದಿನಗಳು ಕಳೆದರೂ ಉತ್ತರ ಒದಗಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯವೈಖರಿ ಖಂಡಿಸಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಶಾಸಕ ಎಸ್.ಸುರೇಶ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.

    ಈ ಸಂಬಂಧ ವಿಧಾನಸಭಾಧ್ಯಕ್ಷರಿಗೆ ಬುಧವಾರ ಪತ್ರ ಬರೆದಿರುವ ಸುರೇಶ್‌ಕುಮಾರ್, ಕಳೆದ ೆ.20ರಂದು ಅಧಿವೇಶನದ ಕಲಾಪದಲ್ಲಿ ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಲು ಸಂಬಂಧಪಟ್ಟ ಇಲಾಖಾ ಸಚಿವರಿಂದ ಸಾಧ್ಯವಾಗಿಲ್ಲ. ಕಲಾಪದಲ್ಲಿ ಉತ್ತರ ನೀಡದಿದ್ದಲ್ಲಿ ಅಧಿವೇಶನ ಮುಗಿದ ಬಳಿಕ ಪ್ರಶ್ನೆ ಕೇಳಿದ್ದ ಸದಸ್ಯನಿಗೆ ಮಾಹಿತಿ ನೀಡಬೇಕು. ಆದರೆ, ಅಧಿವೇಶನ ಮುಗಿದು 50 ದಿನಗಳೇ ಕಳೆದಿದ್ದರೂ, ಈವರೆಗೂ ಉತ್ತರ ಒದಗಿಸುವ ಸೌಜನ್ಯ ತೋರಿಲ್ಲ. ಇಲಾಖಾ ಅಧಿಕಾರಿಗಳ ಪ್ರಜಾತಂತ್ರ ವ್ಯವಸ್ಥೆಗೆ ಇದು ಅಗೌರವ ತೋರಿದಂತಾಗಿದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಅಧಿವೇಶನದಲ್ಲಿ ಡಿಸಿಎಂ ಅವರಿಗೆ ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಉದ್ಯಾನ, ಆಟದ ಮೈದಾನ ಹಾಗೂ ಸಿ.ಎ ನಿವೇಶನಗಳ ಮಾಹಿತಿ ಕೋರಲಾಗಿತ್ತು. ಜತೆಗೆ ಬಡಾವಣೆಗೆ ನಕ್ಷೆ ಅನುಮೋದನೆ ಪಡೆಯಲಾಗಿದೆಯೇ ಮತ್ತು ಬನಶಂಕರಿ ಲೇಔಟ್‌ನ 6ನೇ ಹಂತದಲ್ಲಿ ಅರಣ್ಯ ಬರ್ ವಲಯದಲ್ಲಿ ಸೈಟ್ ನಿರ್ಮಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಿರುವ ವಿವರಗಳನ್ನು ಕೇಳಲಾಗಿತ್ತು. ಇವುಗಳಿಗೆ ಸಂಬಂಧಿಸಿದಂತೆ ಡಿಸಿಎಂ ಆಗಲಿ ಅಥವಾ ಬಿಡಿಎ ಉತ್ತರ ಒದಗಿಸಿಲ್ಲ. ನಾಗರಿಕರ ಹಿತಕ್ಕಾಗಿ, ರಾಜ್ಯದ ಒಳಿತಗಾಗಿ ಪ್ರಶ್ನೆ ಕೇಳಿದಾಗ ಇಲಾಖೆಗಳು ಉತ್ತರ ನೀಡದ ಪ್ರವೃತ್ತಿ ತನಗೆ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ಹೀಗಾಗಿ ಶಾಸಕನಾಗಿ ಸದನದಲ್ಲಿ ಉತ್ತರ ಬಯಸಿದ್ದನ್ನು ಪಡೆಯುವ ಉದ್ದೇಶದಿಂದ ಮುಂದಿನ ಮೇ 8ರಂದು ಬಿಡಿಎ ಕಚೇರಿ ಎದಿರು ಧರಣಿ ನಡೆಸಲು ಅನುಮತಿ ನೀಡಬೇಕಾಗಿ ಸುರೇಶ್‌ಕುಮಾರ್ ಅವರು ಸಭಾಧ್ಯಕ್ಷರನ್ನು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts