More

    ಚೊಚ್ಚಲ ಐಪಿಎಲ್​ನ 3ನೇ ಪಂದ್ಯದಲ್ಲೇ ಕಳಪೆ ದಾಖಲೆ ಬರೆದ ಅರ್ಜುನ್​ ತೆಂಡೂಲ್ಕರ್​!

    ಮುಂಬೈ: ನಿನ್ನೆ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 13 ರನ್​ಗಳಿಂದ ಸೋಲುಂಡಿತು. ಮುಂಬೈ ಪರ ಐಪಿಎಲ್​ ಪದಾರ್ಪಣೆ ಮಾಡಿರುವ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​ ಈವರೆಗೆ ಮೂರು ಪಂದ್ಯಗಳನ್ನಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಒಂದು ವಿಕೆಟ್​ ಪಡೆದು ಗಮನ ಸೆಳೆದರು ಕೂಡ ಒಂದು ಓವರ್​ನಲ್ಲಿ ಹೆಚ್ಚು ರನ್​ ನೀಡುವ ಮೂಲಕ ಕಳಪೆ ದಾಖಲೆಯೊಂದನ್ನು ಬರೆದಿದ್ದಾರೆ.

    ಪಂಜಾಬ್​ ವಿರುದ್ಧ ಪಂದ್ಯದಲ್ಲಿ 16ನೇ ಓವರ್​ ಎಸೆದ ಅರ್ಜುನ್​, ಒಂದೇ ಓವರ್​ನಲ್ಲಿ 31 ರನ್​ ನೀಡಿದರು. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಮುಂಬೈ ಬೌಲರ್‌ ಎಸೆದ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು. 2022ರಲ್ಲಿ ಕೋಲ್ಕತ ವಿರುದ್ಧ ಡ್ಯಾನಿಯಲ್​​ ಸ್ಯಾಮ್ಸ್​ ಒಂದೇ ಓವರ್​ನಲ್ಲಿ 35 ರನ್​ ನೀಡುವ ಮೂಲಕ ಮುಂಬೈ ತಂಡದಲ್ಲಿ ಅತಿ ಹೆಚ್ಚು ರನ್​ ನೀಡಿದ ಬೌಲರ್​ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಲೈಂಗಿಕ ದೌರ್ಜನ್ಯದ ಆರೋಪ; ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಹುಡುಕುತ್ತಾ ಬೆಂಗಳೂರಿಗೆ ಬಂದ ಅಸ್ಸಾಂ ಪೊಲೀಸರು!

    ಮೂರನೇ ಸ್ಥಾನದಲ್ಲಿ ಮೂವರು ಆಟಗಾರರಿದ್ದಾರೆ. 2014ರಲ್ಲಿ ಆರ್​ಸಿಬಿ ವಿರುದ್ಧ ಪವನ್​ ಸುಯಾಲ್, 2019ರಲ್ಲಿ ರಾಜಸ್ತಾನ ರಾಯಲ್ಸ್​ ವಿರುದ್ಧ ಅಲ್ಜರ್ರಿ ಜೋಸೆಫ್​ ಮತ್ತು 2017ರಲ್ಲಿ ಪಂಜಾಬ್​ ವಿರುದ್ಧ ಮಿಚೆಲ್​ ಮಿಚೆಲ್ ಮೆಕ್‌ಕ್ಲೆನಾಘನ್ ಕ್ರಮವಾಗಿ ಒಂದೇ ಓವರ್​ನಲ್ಲಿ 28 ರನ್​ ನೀಡಿದ್ದಾರೆ.

    ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 214 ರನ್​ ಕಲೆ ಹಾಕಿತು. ಬೃಹತ್​ ಗುರಿ ಬೆನ್ನತ್ತಿದ ಮುಂಬೈ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 201 ರನ್​ ಮಾತ್ರ ಕಲೆಹಾಕಿತು. ಈ ಮೂಲಕ ಪಂಜಾಬ್​ ವಿರುದ್ಧ 13 ರನ್​ ಅಂತರದಲ್ಲಿ ಸೋಲುಂಡಿತು. (ಏಜೆನ್ಸೀಸ್​)

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಸ್ಟಾರ್​ ನಟಿ ಪಟ್ಟ ಕಳೆದುಕೊಂಡ ಬಳಿಕ ಬದಲಾದ ಸಮಂತಾ: ತೆಲುಗು ನಿರ್ಮಾಪಕನ ಸ್ಪೋಟಕ ಹೇಳಿಕೆ

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts