More

    ಬ್ರಿಟಿಷರ ಕಾಲದ 303 ರೈಫಲ್​ ನಿಷ್ಕ್ರಿಯಗೊಳಿಸಲು ಮುಂದಾದ ಯುಪಿ ಸರ್ಕಾರ: ವಿಶ್ವ ಮಹಾ ಯುದ್ಧದ ವೇಳೆ ತಯಾರಾದ ಬಂದೂಕಿನ ಯುಗಾಂತ್ಯ

    ಲಕ್ನೋ: ಬ್ರಿಟಿಷರ ಕಾಲದ 303 ರೈಫಲ್​​ಗಳನ್ನು ಉತ್ತರ ಪ್ರದೇಶ ಸರ್ಕಾರ ಗಣರಾಜ್ಯೋತ್ಸವ ದಿನದಂದು ನಿಷ್ಕ್ರಿಯಗೊಳಿಸಲು ಮುಂದಾಗಿದೆ.
    ಅಂದಾಜು 75 ವರ್ಷಗಳ ಕಾಲ ಪೊಲೀಸರು ಈ ರೈಫಲ್​ಗಳನ್ನು ಬಳಸಿದ್ದಾರೆ. ಈಗ ರೈಫಲ್​ಗಳನ್ನು ನಿಷ್ಕ್ರಿಯಗೊಳಿಸುತ್ತಿರುವುದು ಒಂದು ಯುಗದ ಅಂತ್ಯ ಎಂದೆ ಭಾವಿಸಲಾಗಿದೆ.
    ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ಮಾತನಾಡಿ, 303 ರೈಫಲ್‌ಗಳು ಉತ್ತರ ಪ್ರದೇಶ ಪೊಲೀಸರ ನೆಚ್ಚಿನ ಆಯುಧವಾಗಿತ್ತು. ಅಂದಾಜು 70 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರು ಇದನ್ನು ಬಳಕೆ ಮಾಡಿದ್ದಾರೆ. ಈ ರೈಫಲ್​ಗಳು ಯಾವಾಗಲೂ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಿತ್ತು ಎಂದು ಅವರು ಹೇಳಿದ್ದಾರೆ.
    ಈ ಬಂದೂಕುಗಳು ಮಾರಕವಾಗಿದ್ದವು. ಸಮಾಜಘಾತುಕ ಶಕ್ತಿಗಳು ಈ ಬಂದೂಕುಗಳಿಗೆ ಹೆದರುತ್ತಿದ್ದರು. ದೊಡ್ಡ ಡಕಾಯಿತರ ಮತ್ತು ದರೋಡೆಕೋರರ ಹಲವು ದುಷ್ಕೃತ್ಯಗಳನ್ನು ಈ ಆಯುಧ ಬಳಸಿ ತಡೆಯಲಾಗಿದೆ. 303 ರೈಫಲ್​ಗಳು ವಿಪರೀತ ಹವಮಾನ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ರೈಫಲ್​ಗಳನ್ನು 1945ರಲ್ಲಿ ಪರಿಚಯಿಸಲಾಯಿತು ಎಂದು ಅವರು ಹೇಳಿದರು.
    ವಿಶ್ವದ ಮೊದಲ ಹಾಗೂ ಎರಡನೆ ಮಹಾ ಯುದ್ಧದ ವೇಳೆ ಈ ಬಂದೂಕುಗಳನ್ನು ತಯಾರಿಸಲಾಗಿದೆ. ಗಟ್ಟಿಮುಟ್ಟಾದ ವಸ್ತುಗಳಿಂದ ಬಂದೂಕು ತಯಾರಾಗಿದೆ. ಹೀಗಾಗಿ ಎಲ್ಲರಿಗೂ ಈ ಬಂದೂಕು ಇಷ್ಟವಾಗುತ್ತಿತ್ತು ಎಂದರು.
    ನಾನು ಸುಮಾರು 23 ವರ್ಷಗಳ ಕಾಲ ಇಟ್ಟುಕೊಂಡಿದ್ದ 303 ರೈಫಲ್​ ಉತ್ತಮವಾದುದು. ಈ ಆಯುಧದ ಬಗ್ಗೆ ನನಗೆ ತುಂಬಾ ಪ್ರೀತಿ. ಈಗ ಅದು ತಪ್ಪಿ ಹೋಗುತ್ತಿದೆ ಎಂಬ ಬೇಸರ ಇದೆ ಎಂದು ಯುಪಿಯ ಗೋರಖ್‌ಪುರ ಜಿಲ್ಲೆಯ ಗಘಾ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸರೋಜ್ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts