More

    ಮಧ್ಯಪ್ರದೇಶದಲ್ಲಿ 3,000 ಕಿರಿಯ ವೈದ್ಯರ ರಾಜೀನಾಮೆ

    ಭೋಪಾಲ್ : ಮಧ್ಯಪ್ರದೇಶದ ಆರು ಸರ್ಕಾರಿ ಮೆಡಿಕಲ್​ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 3,000 ಕಿರಿಯ ವೈದ್ಯರು ಗುರುವಾರ ಸಾಮೂಹಿಕವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮಧ್ಯಪ್ರದೇಶ್​ ಜೂನಿಯರ್ ಡಾಕ್ಟರ್ಸ್​ ಅಸೋಸಿಯೇಷನ್(ಎಂಪಿಜೆಡಿಎ) ಅಧ್ಯಕ್ಷ ಡಾ. ಅರವಿಂದ್ ಮೀನ ತಿಳಿಸಿದ್ದಾರೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಕಿರಿಯ ವೈದ್ಯರ ರಾಜ್ಯವ್ಯಾಪಿ ಸ್ಟ್ರೈಕ್​ಅನ್ನು ಹೈಕೋರ್ಟ್​ ಕಾನೂನುಬಾಹಿರ ಎಂದು ಘೋಷಿಸಿದ ಬೆನ್ನಲ್ಲೇ ಈ ಕ್ರಮಕ್ಕೆ ವೈದ್ಯರು ಮುಂದಾಗಿದ್ದಾರೆ.

    ಸ್ಟೈಪೆಂಡ್​ನಲ್ಲಿ ಶೇ. 24 ರಷ್ಟು ಏರಿಕೆ ಮತ್ತು ತಮಗೆ ಅಥವಾ ತಮ್ಮ ಕುಟುಂಬದವರಿಗೆ ಕರೊನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಕಿರಿಯ ವೈದ್ಯರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಮೇ 6 ರಂದು ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಈವರೆಗೆ ಏನೂ ಕ್ರಮ ತೆಗೆದುಕೊಳ್ಳದ್ದರಿಂದ ಸ್ಟ್ರೈಕ್​ ಕರೆಯಲಾಗಿದೆ ಎಂದು ಡಾ. ಮೀನ ಹೇಳಿದ್ದಾರೆ.

    ಇದನ್ನೂ ಓದಿ: ಕಾರ್ಖಾನೆಯಿಂದ ಅನಿಲ ಸೋರಿಕೆ : ಸ್ಥಳೀಯರಲ್ಲಿ ಕವಿದ ಆತಂಕ

    ಕರೊನಾ ಸಮಯದಲ್ಲಿ ಈ ತೆರನ ಸ್ಟ್ರೈಕ್​ ಕಾನೂನುಬಾಹಿರವೆಂದು ಘೋಷಿಸಿರುವ ಮಧ್ಯಪ್ರದೇಶ ಹೈಕೋರ್ಟ್,​ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ 24 ಗಂಟೆಗಳೊಳಗೆ ಅಂದರೆ ಇಂದು ಮಧ್ಯಾಹ್ನ 2.30 ರೊಳಗೆ ಕೆಲಸಕ್ಕೆ ಮರಳಬೇಕೆಂದು ನಿರ್ದೇಶಿಸಿದೆ. ಆದರೆ, ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಅಪೀಲು ಸಲ್ಲಿಸುವುದಾಗಿ ತಿಳಿಸಿರುವ ಜೆಡಿಎ, ಇತರ ರಾಜ್ಯಗಳ ವೈದ್ಯರ ಬೆಂಬಲವೂ ತಮಗಿದೆ ಎಂದಿದೆ.

    ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್​​ ಸಾರಂಗ್​ ಅವರು ಬಿಕ್ಕಟ್ಟನ್ನು ಬಗೆಹರಿಸಲು ಹಲವು ಜೆಡಿಎ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಿರಿಯ ವೈದ್ಯರ ಸ್ಟೈಪೆಂಡ್​ನಲ್ಲಿ ಶೇ. 17 ರಷ್ಟು ಏರಿಕೆಯನ್ನು ಅನುಮೋದಿಸಿದ್ದು, ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳಲಿದೆ ಎಂದು ವೈದ್ಯಕೀಯ ಶಿಕ್ಷಣ ಆಯುಕ್ತ ನಿಶಾಂತ್ ವಾರ್ವಡೆ ಭೋಪಾಲ್​ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ವೈದ್ಯರಿಗೂ ಎಸ್ಮಾ ಕಾಯ್ದೆ ಅನ್ವಯವಾಗುವುದರಿಂದ ಕೂಡಲೇ ರೋಗಿಗಳ ಚಿಕಿತ್ಸೆಗೆ ಹಿಂತಿರುಗುವ ನೈತಿಕ ನಿರ್ಧಾರ ಮಾಡಬೇಕೆಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

    ದ್ವಿಚಕ್ರವಾಹನ ಕದ್ದು ಸಿಕ್ಕಿಬಿದ್ದ ನಾಲ್ವರು… ರೌಡಿಶೀಟರ್ ಕೊಲೆ ಸಂಚು ಬೆಳಕಿಗೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts