More

    300 ಕಿಮೀ ಮೆಟ್ರೋ ಸಂಪರ್ಕ: 2021ಕ್ಕೆ 2ನೇ ಹಂತ ಪೂರ್ಣ, ಸಿಎಂ ಯಡಿಯೂರಪ್ಪ ಹೇಳಿಕೆ

    ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ 2ನೇ ಹಂತದ ಮೆಟ್ರೋ ರೈಲು ಕಾಮಗಾರಿ 2021ಕ್ಕೆ ಪೂರ್ಣಗೊಂಡು, ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

    ವಿಧಾನಸೌಧ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಖರೀದಿಸಿರುವ ಯಾಂತ್ರಿಕ ಕಸ ಗುಡಿಸುವ ಯಂತ್ರ ವಿತರಣೆ, ಸಹಾಯ್ 2.0 ಅಪ್ಲಿಕೇಷನ್ ಬಿಡುಗಡೆ, ಬಿಬಿಎಂಪಿ ಮಾರ್ಷಲ್​ಗಳಿಗೆ ದಂಡ ವಿಧಿಸಲು ಪಿಒಎಸ್ ಯಂತ್ರ ವಿತರಣೆ ಹಾಗೂ ಆಂಬುಲೆನ್ಸ್ ವಾಹನ ಲೋಕಾರ್ಪಣೆ ಮಾಡಿ ಮಾತನಾಡಿದರು.

    2025ರ ವೇಳೆಗೆ 3ನೇ ಹಂತದ ಮೆಟ್ರೋ ಕಾಮಗಾರಿಯಲ್ಲಿ 300 ಕಿ.ಮೀ. ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಹೊರವರ್ತಲ ರಸ್ತೆ ಮತ್ತು ವಿಮಾನ ನಿಲ್ದಾಣ ಸಂರ್ಪಸುವ ಮೆಟ್ರೋ ಕಾಮಗಾರಿಯನ್ನು 2023ಕ್ಕೆ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಸಬರ್ಬನ್ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುದಾನ ಒದಗಿಸಿದೆ. ಈ ಯೋಜನೆಯನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

    ಅಹವಾಲು ಸಲ್ಲಿಕೆಗೆ ಸಹಾಯ: ಬೆಂಗಳೂರಿನ ನಾಗರಿಕರ ಕುಂದುಕೊರತೆ ಆಲಿಸಿ ಕ್ರಮ ಕೈಗೊಳ್ಳಲು ಸಹಾಯ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ನಾಗರಿಕರು, ಲಿಖಿತವಾಗಿ, ಪೋಟೋ ಅಥವಾ ವಿಡಿಯೋ ಮೂಲಕ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ ಎಂದು ವಿವರಿಸಿದರು. ಮೇಯರ್ ಗೌತಮ್ುಮಾರ್, ಸಚಿವರಾದ ಅಶೋಕ್, ವಿ. ಸೋಮಣ್ಣ, ಸಚಿವರಾದ ಭೈರತಿ ಬಸವ ರಾಜ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಇದ್ದರು.

    ರಸ್ತೆ ಸಂಪರ್ಕ ಜಾಲ ಸುಧಾರಣೆ

    ಬೆಂಗಳೂರಿನಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸಲು ಯೋಜನೆ ರೂಪಿಸಲಾಗಿದೆ. 2027ಕ್ಕೆ ಪೆರಿಫೆರಲ್ ರಸ್ತೆ, ಹೊರವರ್ತಲ ರಸ್ತೆ ಕಾಮಗಾರಿ ಮುಗಿಸಬೇಕಿದೆ. ಪೂರ್ವ ದಿಕ್ಕಿನ ವೈಟ್​ಫೀಲ್ಡ್ ವರ್ತಲ ರಸ್ತೆ, ಐಟಿಪಿಎಲ್ ಪ್ರದೇಶದ ಐಟಿ ಹಬ್, ಪಶ್ಚಿಮಕ್ಕೆ ಯಶವಂತಪುರ ಮತ್ತು ಪೀಣ್ಯ ಸಂರ್ಪಸುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು 2022ಕ್ಕೆ ಪೂರ್ಣಗೊಳ್ಳಲಿವೆ ಎಂದು ಯಡಿಯೂರಪ್ಪ ಹೇಳಿದರು.

    ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಬೆಂಗಳೂರು ಅಭಿವೃದ್ಧಿಗೆ ಹಲವು ಕ್ರಮ ವಹಿಸಲಾಗಿದೆ. ಮೂಲಸೌಕರ್ಯ ಒದಗಿಸಲಾಗುತ್ತಿದೆ. ಸುಸ್ಥಿರ, ಆರೋಗ್ಯಪೂರ್ಣ ಯೋಜನೆಗಳ ಮೂಲಕ ಇನ್ನು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಲಾಗುವುದು.

    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts