More

    30 ಟೋಯಿಂಗ್ ವಾಹನಗಳ ಪರವಾನಗಿ ರದ್ದು; ಟೋಯಿಂಗ್ ಮಾರ್ಗಸೂಚಿ ಉಲ್ಲೇಖಿಸಿದ ಆರೋಪ: ರವಿಕಾಂತೇಗೌಡ ಆದೇಶ

    ಬೆಂಗಳೂರು: ನೋ ಪಾರ್ಕಿಂಗ್‌ನಲ್ಲಿ ನಿಲುಗಡೆ ಎಂಬ ನೆಪದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಟೋಯಿಂಗ್ ಮಾಡುತ್ತಿದ್ದ 30 ಟೋಯಿಂಗ್ ವಾಹನಗಳ ಪರವಾನಗಿ ರದ್ದು ಮಾಡಿ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ.

    ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಮಾಡುವ ಮೊದಲು ಮೈಕ್‌ನಲ್ಲಿ ಅನೌನ್ಸ್ ಮಾಡಬೇಕು. ಸಾರ್ವಜನಿಕರ ವಾಹನಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಸೇರಿ ಮಾರ್ಗಸೂಚಿಗಳನ್ನು ಟೋಯಿಂಗ್ ಸಿಬ್ಬಂದಿಗೆ ನೀಡಲಾಗಿದೆ.

    ಕೆಲವರು ಸರ್ಕಾರದ ನಿಯಮಗಳನ್ನು ಪಾಲಿಸದೆ ಮನಬಂದಂತೆ ಟೋಯಿಂಗ್ ಮಾಡುತ್ತಿದ್ದರು. ಈ ಬಗ್ಗೆ ವರದಿ ಪಡೆದು ಟೋಯಿಂಗ್ ವಾಹನಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ಜಂಟಿ ಆಯುಕ್ತರು ರದ್ದುಪಡಿಸಿದ್ದಾರೆ.

    ಇದನ್ನೂ ಓದಿ: ಆಟ ಆಡ್ತ ಆಡ್ತ ಕರೆಂಟ್ ಶಾಕ್​ ಹೊಡೆದು ಸಾವಿಗೀಡಾದ ಬಾಲಕ; ಟ್ರಾನ್ಸ್​​ಫಾರ್ಮರ್ ಕೆಳಗೆ ಬಿದ್ದಿತ್ತು ಪವರ್​ಫುಲ್​ ತಂತಿ..

    ಟೋಯಿಂಗ್ ವೇಳೆ ಸರ್ಕಾರದ ಮಾರ್ಗಸೂಚಿಯನ್ನು (ಎಸ್‌ಓಪಿ) ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಹಾಗೂ ಟೋಯಿಂಗ್ ಸಿಬ್ಬಂದಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಕೆಲವರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. 1 ತಿಂಗಳ ಅವಧಿಯಲ್ಲಿ ಪೂರ್ವ ವಿಭಾಗದಲ್ಲಿ 5 ವಾಹನಗಳು ಹಾಗೂ ಐವರು ಪೊಲೀಸರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಪೂರ್ವ ವಿಭಾಗ (ಸಂಚಾರ) ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.

    ಟೋಯಿಂಗ್ ವೇಳೆ ಜನರ ಜತೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ನಿಲ್ಲಿಸಿದ್ದರೆ ಸಿಬ್ಬಂದಿ ವಿಡಿಯೋ ಮಾಡಬೇಕಿದೆ. ಆ ವಾಹನದ ಮಾಲೀಕರಿಗೆ ಮೈಕ್‌ನಲ್ಲಿ ಟೋಯಿಂಗ್ ಮಾಡುವುದಾಗಿ ಎಚ್ಚರಿಸಬೇಕು.

    ಮಾಲೀಕರು ಬಂದು ವಾಹನ ತೆರವು ಮಾಡಿದರೆ ಬಿಟ್ಟು ಕಳುಹಿಸಬೇಕು. ಕೆಲವು ಟೋಯಿಂಗ್ ಸಿಬ್ಬಂದಿ ನಿಯಮ ಇದ್ಯಾವುದೂ ಮಾಡುವುದಿಲ್ಲ. ಅದಕ್ಕಾಗಿ 30 ವಾಹನಗಳ ಮೇಲೆ ಜಂಟಿ ಆಯುಕ್ತರು ಕ್ರಮ ಜರುಗಿಸಿದ್ದಾರೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

    ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

    ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ; ನಾಳೆ 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts