More

    ಸಿಲಿಕಾನ್ ಸಿಟಿಯಲ್ಲಿ ವಾರದಲ್ಲಿ 30 ಕಡೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

    ಬೆಂಗಳೂರು: ತೆರಿಗೆ ವಂಚನೆ ಆರೋಪದ ಮೇಲೆ ರಾಜಧಾನಿಯಲ್ಲಿ ಕಳೆದ ಒಂದು ವಾರದಲ್ಲಿ 30ಕ್ಕೂ ಅಧಿಕ ಕಡೆಗಳಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ತೆರಿಗೆ ಕಳ್ಳತು ಮತ್ತು ಹವಾಲ ದಂಧೆಕೋರರು ಬೆಚ್ಚಿಬಿದ್ದಿದ್ದಾರೆ.

    ಅ.4ರಂದು ಬೆಂಗಳೂರು ಮತ್ತು ಚೆನ್ನೈ ಐಟಿ ಇಲಾಖೆ ಅಧಿಕಾರಿಗಳ ಪ್ರತ್ಯೇಕ ತಂಡ ಚಿನ್ನದ ವ್ಯಾಪಾರಿಗಳು, ಮೆಡಿಕಲ್ ಶಾಪ್, ಆಸ್ಪತ್ರೆ ಮಾಲೀಕರು, ಲೆಕ್ಕಪರಿಶೋಧಕರಿಗೆ ಸೇರಿದ ಜಯನಗರ, ಬಿಟಿಎಂ ಲೇಔಟ್, ಸದಾಶಿವನಗರ, ಪ್ರಶಾಂತನಗರ, ಸದಾಶಿವನಗರದಲ್ಲಿ ಇರುವ ಮನೆ, ಕಚೇರಿ, ಮಳಿಗೆಗಳು ಸೇರಿದಂತೆ 15ಕ್ಕೂ ಅಧಿಕ ಸ್ಥಳಗಳ ಮೇಲೆ ಶೋಧ ನಡೆಸಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದರು.

    ವಿಜಯನಗರ ಬಳಿಯ ಪ್ರಶಾಂತನಗರದಲ್ಲಿ ಡಾ.ಸಂಧ್ಯಾ ಪಾಟೀಲ್ ಮನೆ, ಕ್ಲಿನಿಕ್ ಮೇಲೆ ದಾಳಿ ನಡೆದಿದೆ. ಅರಮನೆ ರಸ್ತೆಯಲ್ಲಿ ಇರುವ ಗಜರಾಜ ಜುವೆಲರ್ಸ್‌ ಮಳಿಗೆ, ಶಾಂತಿನಗರದ ಉದ್ಯಮಿ ನವೀನ್, ಬಂಗಲೆ ಮೇಲೆ, ಸದಾಶಿವನಗರದ ಶ್ರೀ ಗಣೇಶ್ ಜ್ಯುವೆಲರ್ಸ್‌ ಮಳಿಗೆ ಮಾಲೀಕರಿಗೆ ಸೇರಿದ ಭೂಮಿಕಾ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿದ್ದರು. ಶೇಷಾದ್ರಿಪುರದಲ್ಲಿನ ಲೆಕ್ಕಪರಿಶೋಧಕರ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು.

    ಇದಾದ ಮೇಲೆ ಅ.12ರಂದು ಕಾಫಿ ಬೋರ್ಡ್ ನಿರ್ದೇಶಕ, ಚಿನ್ನದಂಗಡಿ ಮಾಲೀಕರಿರ ಮೇಲೆ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು. ಆರ್‌ಎಂವಿಎಕ್ಸೃ್ ಸ್ಟೇಷನ್, ಮಲ್ಲೇಶ್ವರ, ಡಾಲರ್ಸ ಕಾಲನಿ, ಬಿ.ಎಲ್.ಸರ್ಕಲ್ ಸೇರಿದಂತೆ ನಗರದ 10ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದರು. ಇದೀಗ ಮಾಜಿ ಕಾರ್ಪೋರೇಟರ್ ದಂಪತಿಗೆ ಸೇರಿದ ಐದು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts