More

    ಖಾಸಗಿ ಬಸ್ಸಿನಲ್ಲಿ 30 ಸಜೀವ ಬಾಂಬ್​ಗಳು ಪತ್ತೆ!

    ಕೊಲ್ಕತ: ಕೊಲ್ಕತಾದಿಂದ ಬಿಹಾರದ ಗಯಾಗೆ ಹೋಗುತ್ತಿದ್ದ ಖಾಸಗಿ ಬಸ್​​ ಒಂದರಲ್ಲಿ 30 ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಪ್ರಯಾಣಿಕರು ತುಂಬಿದ್ದ ಬಸ್ಸಿನಲ್ಲಿ ಸಜೀವವಾಗಿದ್ದ ಬಾಂಬ್​ಗಳನ್ನು ಸಿಐಡಿ ಬಾಂಬ್​ ಡಿಸ್ಪೋಸಲ್ ಸ್ಕ್ವಾಡ್​ ಸಿಬ್ಬಂದಿ ನಿಷ್ಕ್ರಿಯಗೊಳಿಸಿ, ವಶಪಡಿಸಿಕೊಂಡಿದ್ದಾರೆ.

    ಖಾಸಗಿ ಬಸ್​​ ಒಂದರಲ್ಲಿ ಬಾಂಬ್​ಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪಶ್ಚಿಮ ಬಂಗಾಳದ ಪೊಲೀಸರು ಮತ್ತು ಇಂಟೆಲಿಜೆನ್ಸ್​ ಅಧಿಕಾರಿಗಳು ಬಸ್​ಅನ್ನು ಮಂಗಳವಾರ ರಾತ್ರಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್​ಗಳನ್ನು ಪ್ಲಾಸ್ಟಿಕ್​ ಚೀಲದಲ್ಲಿರಿಸಲಾಗಿತ್ತು. ಝಾರ್ಕಂಡಿನ ವ್ಯಕ್ತಿಯೊಬ್ಬನಿಗೆ ಇವು ರವಾನೆಯಾಗುತ್ತಿದ್ದುದರ ಬಗ್ಗೆ ಮಾಹಿತಿಯಿದ್ದ ಚೀಟಿಯೂ ಸಿಕ್ಕಿತು ಎನ್ನಲಾಗಿದೆ.

    ಇದನ್ನೂ ಓದಿ: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​

    ಸಿಐಡಿಯ ಬಾಂಬ್​ ಸ್ಕ್ವಾಡ್​ನವರು ಸ್ಥಳಕ್ಕೆ ತಲುಪಿ ಬಾಂಬ್​ಗಳನ್ನು ಡಿಫ್ಯೂಸ್ ಮಾಡಿದ್ದು. ಈ ಸಂಬಂಧವಾಗಿ ಕೆಲವು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. (ಏಜೆನ್ಸೀಸ್)

    ಹಿರಿಯ ನಟ ದೊಡ್ಡಣ್ಣ ಅನಾರೋಗ್ಯ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ

    ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts