More

    ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 30 ಮಂದಿಗೆ ಗಂಭೀರ ಗಾಯ, 48 ವಾಹನಗಳು ಜಖಂ

    ನವದೆಹಲಿ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 48 ವಾಹನಗಳು ಜಖಂಗೊಂಡಿದೆ.

    ಭಾನುವಾರ ರಾತ್ರಿ ಈ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪುಣೆ ಸಮೀಪ ಇರುವ ನವಲೆ ಬ್ರಿಡ್ಜ್​ನಲ್ಲಿ ನಡೆದಿದೆ. ಪುಣೆಯ ಅಗ್ನಿ ಶಾಮಕ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

    ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ವೇಗವಾಗಿ ಬಂದ ಟ್ಯಾಂಕರ್​ನ ಬ್ರೇಕ್​ ಫೇಲ್​ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಸೋರಿಕೆಯಾಗಿದ್ದ ಆಯಿಲ್​ನಿಂದಾಗಿ ವಾಹನಗಳು ಬ್ರೇಕ್​​ ಹಾಕಿದರು ಟೈರ್​ ಸ್ಲಿಪ್​ ಆಗಿಯು ಅಪಘಾತ ಸಂಭವಿಸಿವೆ.

    ಈ ಘಟನೆಯಿಂದಾಗಿ ಮುಂಬೈಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಕಿ.ಮೀ.ವರೆಗೂ ಟ್ರಾಫಿಕ್​ ಜಾಮ್​ ಉಂಟಾಗಿ, ಪ್ರಯಾಣಿಕರು ಹಾಗೂ ಸವಾರರು ತುಂಬಾ ಕಿರಿಕಿರಿ ಅನುಭವಿಸಬೇಕಾಯಿತು.

    ಕಳೆದ ಕೆಲವು ದಿನಗಳಿಂದ ನವಲೆ ಸೇತುವೆ ಅಪಘಾತಗಳ ಹಾಟ್ ಸ್ಪಾಟ್ ಆಗುತ್ತಿದೆ. ಶುಕ್ರವಾರ ಹೊರವರ್ತುಲ ರಸ್ತೆಯ ಸೇತುವೆ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದರು. (ಏಜೆನ್ಸೀಸ್​)

    ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 30 ಮಂದಿಗೆ ಗಂಭೀರ ಗಾಯ, 48 ವಾಹನಗಳು ಜಖಂ

    ರಾಸುಗಳಿಗೆ ಸಂಜೀವಿನಿಯಾಗದ ಯೋಜನೆ; ಸಿಬ್ಬಂದಿ ನೇಮಿಸದ ಸರ್ಕಾರ

    ಸುಳ್ಳಿಗೆ ದೊಂಬಿ ಬೇಕು, ಸತ್ಯ ಒಬ್ಬಂಟಿಯೇ!

    ಪಾರಂಪರಿಕ ಪ್ರದೇಶ ಎನಿಸಿಕೊಳ್ಳಲಿದೆ ಬಸವನಗುಡಿ; ಪರಿಷೆ ಉದ್ಘಾಟಿಸಿದ ಸಿಎಂ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts