More

    30 ಸೆಕೆಂಡ್​ಗಳಲ್ಲಿ 27 ಕಾರ್ಟ್​ವ್ಹೀಲ್​!

    ಬೆಳಗಾವಿ: ಅಂತಾರಾಷ್ಟ್ರೀಯ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ಬೆಳಗಾವಿಯ ಮೂರುವರೆ ವರ್ಷದ ಬಾಲಕ ಕಾರ್ಟ್​ವ್ಹೀಲ್​ನಲ್ಲಿ ವಿಶ್ವ ದಾಖಲೆ ಸೃಷ್ಟಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.24ರಂದು ಜರುಗಿದ ಕಾರ್ಟ್​ ವ್ಹೀಲ್​ ಸ್ಪರ್ಧೆಯಲ್ಲಿ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್​. ಗ್ರಾಮದ ರಾಮನಗರದ ಶ್ರೀಷ ಚವ್ಹಾಣ ಎಂಬ ಬಾಲಕ 30 ಸೆಕೆಂಡ್​ಗಳಲ್ಲಿ 27 ಕಾರ್ಟ್​ ವ್ಹೀಲ್​ ಮಾಡಿ ಅಂತಾರಾಷ್ಟ್ರೀಯ ಬುಕ್​ ಆಫ್​ ರೆಕಾಡ್ಸ್​ನಲ್ಲಿ ದಾಖಲೆ ಸೃಷ್ಟಿಸಿದ್ದಾನೆ.

    ಈ ಹಿಂದೆ ಒಂದು ನಿಮಿಷದಲ್ಲಿ 35 ಕಾರ್ಟ್​ ವ್ಹೀಲ್​ನಲ್ಲಿ ಮಾಡಿದ್ದು, ತನ್ನ ದಾಖಲೆಯನ್ನು ತಾನೇ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾನೆ. ಯೂ&ಟ್ಯೂಬ್​ ನೋಡಿ ಕಾರ್ಟ್​ವ್ಹೀಲ್​ ಕಲಿತು ಬಳಿಕ ಪುತ್ರನಿಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನೀಡಿದ್ದೇನೆ.

    ನನ್ನ ಪುತ್ರ ಕಾರ್ಟ್​ ವ್ಹೀಲ್​ ಮಾಡುವುದನ್ನು ಚಿತ್ರೀಕರಣ ಮಾಡಿ ವಿಡಿಯೋಗಳನ್ನು ಅಂತಾರಾಷ್ಟ್ರೀಯ ಬುಕ್​ ಆಫ್​ ರೆಕಾರ್ಡ್ಸ್​ಗೆ ಇ&ಮೇಲ್​ ಮೂಲಕ ಕಳುಹಿಸಲಾಗಿತ್ತು. ಜು.28ರಂದು ಅಂತಾರಾಷ್ಟ್ರೀಯ ಬುಕ್​ ಆಫ್​ ರೆಕಾಡ್ಸ್​ ರ್ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿರುವ ಕುರಿತು ಪ್ರಮಾಣ ಪತ್ರ ಬಂದಿದೆ ಎಂದು ಬಾಲಕನ ತಾಯಿ ಅಂಜನಾ ಚವ್ಹಾಣ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts